ಮುಂಡಗೋಡ: ಪೆಟ್ರೋಲ್ ಬೆಲೆ ಇಳಿಸಿ ಕಾಂಗ್ರೆಸ್‍ನಿಂದ ಪ್ರತಿಭಟನೆ

Source: Nazir Tadapatri | By S O News | Published on 12th June 2021, 7:40 PM | Coastal News |

ಮುಂಡಗೋಡ: ನೂರ ರೂಪಾಯಿ ಗಡಿದಾಟುತ್ತಿರುವ ಪೆಟ್ರೋಲ್ ಬೆಲೆಯನ್ನು ತಕ್ಷಣ ಕೆಳಗಿಳಿಸಿ ಬಡಜನರು ಹಾಗೂ ಮಧ್ಯಮ ವರ್ಗದ ಜನರು ತತ್ತರಿಸಿ ಕೆಂಗೆಟ್ಟಿ ಹೋಗಿದ್ದಾರೆ. ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಸಿಲಿಂಡರಿನ ಬೆಲೆ ಇಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರಳ್ಳಿ ಆಗ್ರಹಿಸಿ ಪ್ರತಿಭಟಿಸಿದರು

ಶನಿವಾರ ಬೆಳಗ್ಗೆ ಪಟ್ಟಣದ ಹುಬ್ಬಳ್ಳಿ -ಶಿರಸಿ ರಸ್ತೆಯಲ್ಲಿರುವ ಬೆಂಡಿಗೇರಿ ಪೆಟ್ರೋಲ್ ಪಂಪ ಹಾಗೂ ನಾಯಕ್ ಪೆಟ್ರೋಲ್ ಪಂಪಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್, ಡಿಸೇಲ್ ಏರಿಸುತ್ತಿರುವ ಕೇಂದ್ರ ಸರಕಾರದ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು

ಜನರು ಕೊರೊನಾ ಸಂಕಷ್ಟದಲ್ಲಿ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೆಲೆ ಏರಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಇವರಿಗೆ ಬಡವರ ಪಾಪ ತಟ್ಟುತ್ತದೆ ಎಂದು ಅಕ್ರೋಶ ಭರಿತರಾಗಿ ನುಡಿದರು.

ಕಾಂಗ್ರೆಸ್ ಸರಕಾರ ಸಣ್ಣ ಪ್ರಮಾಣದ ಪೆಟ್ರೋಲ್ ಬೆಲೆ ಏರಿಸಿದ್ದಾಗ ಬಿಜೆಪಿ ಮಂಚೂಣಿ ನಾಯಕರು ಬೀದಿಗೆ ಬಂದು ಉಗ್ರವಾಗಿ ಪ್ರತಿಭಟಿಸಿದ್ದರು ಈಗ 100 ರೂ ಪೆಟ್ರೋಲ್ ಬೆಲೆ ದಾಟಿದರೂ ಸಹಿತ ಒಬ್ಬರೇ ಒಬ್ಬ ಬಿಜೆಪಿ ನಾಯಕ ತುಟಿ ಪಿಟಿಕ್ ಎನ್ನುತ್ತಿಲ್ಲಾ ಇವರಿಗೆ ಜನಸಾಮನ್ಯರ ಕುರಿತು ಎಷ್ಟು ಕಾಳಜಿ ಇದೆ ಎಂದು ತೋರಿಸುತ್ತದೆ ಎಂದರು

ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡವರ ನೋವು ಕೊಡುವ ಸರ್ಕಾರಗಳು ಆಗಿದ್ದು ಅವು ಕೇವಲ ಶ್ರೀಮಂತರ ಪರವಾಗಿದೆ ಉದಾ: ಅಂಬಾನಿ, ಅದಾನಿ ಮುಂತಾದವರ ಪರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಚ್.ಎಮ್.ನಾಯ್ಕ್ ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರಕಾರಗಳ ವಿರುದ್ದ ಘೋಷಣೆ ಕೂಗಿದರು. ಪೆಟ್ರೋಲ್ ಬೆಲೆ ಇಳಿಸಿ ಜನಸಮಾನ್ಯರ ಬದುಕು ಉಳಿಸಿ ಎಂದು ಆಗ್ರಹಿಸಿದರು

ಧರ್ಮರಾಜ ನಡಿಗೇರ, ಧುರಿಣ ಎಮ್.ಎನ್.ದುಂಡಶಿ, ರಾಜೂ ಹಿರೇಮಠ, ಪಟ್ಟಣದ ಕಾಂಗ್ರೆಸ್ ಅಧ್ಯಕ್ಷ ಆಲೇಹಸನ ಬೆಂಡಿಗೇರಿ, ನಾಗರಾಜ ಹಂಚಿನಮನಿ, ಮುಂಡಗೋಡ ಕಾಂಗ್ರೆಸ್ ಉಸ್ತುವಾರಿ ಸುರೇಶ ಸವಣೂರ, ಬಸವರಾಜ ಅಸ್ತಕಟ್ಟಿ, ನಂದಿಗಟ್ಟಿ ಥಾಮಸ್,ಪಟ್ಟಣಪಂಚಾಯತ್ ಸದಸ್ಯರಾದ ಮಹ್ಮದಜಾಫರ ಹಂಡಿ, ಮಹ್ಮದಗೌಸ ಮಕಾನದಾರ ಸೇರಿದಂತೆ ಗೋಪಾಲ ಪಾಟೀಲ, ಭಾರತಿ, ಅಕ್ಬರಬಾಷಾ ದುಂಡಶಿ, ಜೈನೂ ಬೆಂಡಿಗೇರಿ, ಆಸೀಫ ಮಕಾನದಾರ, ಇರ್ಫಾನ ಸವಣೂರ ಮುಂತಾದವರು ಇದ್ದರು

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...