ಭಟ್ಕಳ : ಪರೇಶ ಮೇಸ್ತ ಸಾವಿನ ಕುರಿತು ಸಿ.ಬಿ.ಐ. ತನಿಖೆಯನ್ನು ಮಾಡಿ ಬಿ ವರದಿ ನೀಡಿದ್ದಕ್ಕೆ ಜಿಲ್ಲೆಯ ಶಾಸಕರು, ಸಂಸದರು ರಾಜೀನಾಮೆ ನೀಡಬೇಕು ಎಂದು ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವಾನ್ ಡಿಸೋಜ ಅವರು ನೀಡಿದ ಹೇಳಿಕೆ ಬಾಲಿಶವಾದ ಹೇಳಿಕೆಯಾಗಿದೆ. ಒಮ್ಮೆಯೂ ಗ್ರಾಮ ಪಂಚಾಯತಕ್ಕೆ ಕೂಡಾ ಆಯ್ಕೆಯಾಗದ ಡಿಸೋಜ ಹಿಂಬಾಗಿಲಿನಿದ ಅಧಿಕಾರ ಅನುಭವಿಸಿದವರಾಗಿದ್ದು ಅವರಿಗೆ ರಾಜೀನಾಮೆ ಕೇಳುವ ನೈತಿಕ ಹಕ್ಕಿದೆಯೇ ಎಂದು ಬಿ.ಜೆ.ಪಿ. ಮಂಡಳ ಅಧ್ಯಕ್ಷ ಸುಬ್ರಾಯ ದೇವಡಿಗ ಖಾರವಾಗಿ ಪ್ರಶ್ನಿಸಿದ್ದಾರೆ.
ಬಿ.ಜೆ.ಪಿ. ಕಾರ್ಯಾಲಯದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನಮ್ಮ ಶಾಸಕರು, ಸಂಸದರು ಜನರಿಂದ ಆಯ್ಕೆಯಾಗಿ ಆಯಾಯ ಹುದ್ದೆಗೇರಿದವರು ಇವರ ಹಾಗೆ ಹಿಂಬಾಗಿಲಿನಿದ ಪ್ರವೇಶ ಮಾಡಿದವರಲ್ಲ ಹಾಗಾಗಿ ಅವರು ರಾಜೀನಾಮೆ ಕೊಡುವಂತೆ ಕೇಳುವ ಹಕ್ಕು ಇವರಿಗೆ ಇಲ್ಲ ಎಂದರು.
ಕಾಂಗ್ರೆಸ್‌ಗೆ ಪರೇಶ ಮೇಸ್ತನ ಹೆಸರು ಹೇಳಲಿಕ್ಕೂ ಹಕ್ಕಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಆತನ ಬಗ್ಗೆ ಮಾತನಾಡದ ಇವರು ಈಗ ವರದಿ ಬಂದ ನಂತರ ಮುಸ್ಲೀಮರನ್ನು ಓಲೈಸಲು ಪರೇಶ ಮೇಸ್ತನ ಹೆಸರು ಹೇಳುತ್ತಿದ್ದಾರೆ. ಪರೇಶ ಮೇಸ್ತನ ಸಾವು ಸಂಭವಿಸಿದಾಗ ಸಿದ್ಧರಾಮಯ್ಯ ಮುಖ್ಯ ಮಂತ್ರಿಯಾಗಿದ್ದರು. ಅಂದೇ ಅವರು ದಾಖಲೆಗಳನ್ನು ನಾಶಪಡಿಸಿ ನಂತರ ಸಿ.ಬಿ.ಐ. ತನಿಖೆಗೆ ನೀಡಿದ್ದರು ಎಂದ ಸುಬ್ರಾಯ ದೇವಡಿಗ, ಸಿ.ಬಿ.ಐ. ಬಗ್ಗೆ ನಮಗೆ ನಂಬಿಕೆ ಇಲ್ಲ ಎಂದು ಹೇಳಿಲ್ಲ. ಆದರೆ ಪರೇಶ ಮೇಸ್ತನ ಸಾವು ಒಂದು ಕೊಲೆಯಾಗಿದ್ದು ಸಿ.ಬಿ.ಐ. ವರದಿಯಿಂದ ಆತನ ತಂದೆಗೆ ಅನ್ಯಾಯವಾಗಿದೆ ಅವರಿಗೆ ನ್ಯಾಯ ಕೊಡಿಸಲು ನಮ್ಮ ಶಾಸಕರು ಮುಖ್ಯ ಮಂತ್ರಿಗಳ ಬಳಿಗೆ ಕರೆದುಕೊಂಡು ಹೋಗಿದ್ದು ಪುನಃ ತನಿಖೆಗೆ ಒತ್ತಾಯಿಸಿದ್ದೇವೆ ಎಂದರು. ಐವಾನ್ ಡಿಸೋಜ ಅವರು ೨೦೦೦ಕ್ಕೂ ಹೆಚ್ಚು ಜನರ ಮೇಲೆ ಕೇಸು ದಾಖಲಿಸಲಾಗಿದೆ, ೨೭೨ ಜನರ ಮೇಲೆ ರೌಡಿ ಶೀಟ್ ತೆಗೆದಿರುವುದು ಕಾಂಗ್ರೆಸ್ ಸರಕಾರವಿದ್ದಾಗಲೇ ಎನ್ನುವುದನ್ನು ಐವಾನ್ ಡಿಸೋಜ ಮರೆತಂತಿದೆ.
ಅನಾವಶ್ಯಕವಾಗಿ ಸಾವಿರಾರು ಜನರ ಮೇಲೆ ಪ್ರಕರಣ ದಾಖಲಿಸಿರುವುದಕ್ಕೆ ಕಾಂಗ್ರೆಸ್ ಸರಕಾರವೇ ಹೊಣೆ ಎಂದ ಅವರು ತಮ್ಮ ಸರಕಾರದ ಅವಧಿಯಲ್ಲಿಯೇ ನಡೆದಿರುವುದನ್ನು ಡಿಸೋಜ ಮರೆತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ್, ದಿನೇಶ ನಾಯ್ಕ, ಶ್ರೀಕಾಂತ ನಾಯ್ಕ, ಭಾಸ್ಕರ ದೈಮನೆ, ಮೋಹನ ನಾಯ್ಕ,ಶ್ರೀನಿವಾಸ ನಾಯ್ಕ,ಪಾಂಡುರಂಗ ನಾಯ್ಕ,ಮುಂತಾದವರು ಉಪಸ್ಥಿತರಿದ್ದರು
Read These Next
ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಐಆರ್ಬಿ ಎಜೆಂಟರತೆ ವರ್ತಿಸುವುದು ಸರಿಯಲ್ಲ:ರಾಜೇಶ ನಾಯಕ ಎಚ್ಚರಿಕೆ
ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಐಆರ್ಬಿ ಎಜೆಂಟರತೆ ವರ್ತಿಸುವುದು ಸರಿಯಲ್ಲ:ರಾಜೇಶ ನಾಯಕ ಎಚ್ಚರಿಕೆ
ಸಾವಿರಾರು ಭಕ್ತರ ಜಯಘೋಷದೊಂದಿಗೆ ನಡೆದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ರಥೋತ್ಸವ
ಸಾವಿರಾರು ಭಕ್ತರ ಜಯಘೋಷದೊಂದಿಗೆ ನಡೆದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ರಥೋತ್ಸವ
ಅದ್ಧೂರಿಯಾಗಿ ಜರುಗಿದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಪಲ್ಲಕ್ಕಿ ಉತ್ಸವ
ಅದ್ಧೂರಿಯಾಗಿ ಜರುಗಿದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಪಲ್ಲಕ್ಕಿ ಉತ್ಸವ
ಪಾತಾಳಕ್ಕೆ ಕುಸಿದ ವ್ಯಕ್ತಿಯನ್ನು ಮೇಲೆತ್ತುವ ಸಾಮರ್ಥ್ಯ ಗುರುವಿಗೆ:ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ಪಾತಾಳಕ್ಕೆ ಕುಸಿದ ವ್ಯಕ್ತಿಯನ್ನು ಮೇಲೆತ್ತುವ ಸಾಮರ್ಥ್ಯ ಗುರುವಿಗೆ:ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ನಾಮಧಾರಿ ಗುರುಮಠದ ನೂತನ ಮಹಾದ್ವಾರ ಲೋಕಾರ್ಪಣೆ
ನಾಮಧಾರಿ ಗುರುಮಠದ ನೂತನ ಮಹಾದ್ವಾರ ಲೋಕಾರ್ಪಣೆ
ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಐಆರ್ಬಿ ಎಜೆಂಟರತೆ ವರ್ತಿಸುವುದು ಸರಿಯಲ್ಲ:ರಾಜೇಶ ನಾಯಕ ಎಚ್ಚರಿಕೆ
ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಐಆರ್ಬಿ ಎಜೆಂಟರತೆ ವರ್ತಿಸುವುದು ಸರಿಯಲ್ಲ:ರಾಜೇಶ ನಾಯಕ ಎಚ್ಚರಿಕೆ
ನ್ಯಾಯ ವಿಜ್ಞಾನ ಕೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ : ಅಮಿತ್ ಶಾ
ಧಾರವಾಡ : ದೇಶದಲ್ಲಿ ವಿಧಿ ವಿಜ್ಞಾನ ಕ್ಷೇತ್ರದಲ್ಲಿ ಇತ್ತಿಚಿನ ದಿನಗಳಲ್ಲಿ ಗಮನಾರ್ಹ ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಗೃಹ ಹಾಗೂ ...
ಸಿವಿಲ್ ಏವಿಯೇಷನ್ ಕಾರ್ಯದರ್ಶಿಗಳಿಂದ ವಿಮಾನ ನಿಲ್ದಾಣ ಪರಿವೀಕ್ಷಣೆ
ಶಿವಮೊಗ್ಗ : ನಾಗರಿಕ ವಿಮಾನಯಾನ (ಸಿವಿಲ್ ಏವಿಯೇಷನ್) ಮಂತ್ರಾಲಯದ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಅವರು ಶನಿವಾರ ಸೋಗಾನೆಯ ವಿಮಾನ ...
ಜನಸಾಮಾನ್ಯರ ಮಕ್ಕಳೂ ಕೂಡಾ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ನಮ್ಮ ಗುರಿ:ಸಚಿವ ಕೋಟ ಶ್ರೀನಿವಾಸ ಪೂಜಾರಿ
ಜನಸಾಮಾನ್ಯರ ಮಕ್ಕಳೂ ಕೂಡಾ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ನಮ್ಮ ಗುರಿ:ಸಚಿವ ಕೋಟ ಶ್ರೀನಿವಾಸ ಪೂಜಾರಿ
ಗ್ರಾಮೀಣ ಠಾಣೆ ನೂತನ ಪಿ.ಎಸ್.ಐ ಆಗಿ ಶ್ರೀಧರ್ ನಾಯ್ಕ ನೇಮಕ
ಗ್ರಾಮೀಣ ಠಾಣೆ ನೂತನ ಪಿ.ಎಸ್.ಐ ಆಗಿ ಶ್ರೀಧರ್ ನಾಯ್ಕ ನೇಮಕ
ರೋಲರ್ ಹಾಕಿಯಲ್ಲಿ ಸಾಧನೆ ಮಾಡಿದ ಉತ್ತರಕನ್ನಡ ಸ್ಕೆಟಿಂಗ್ ಪಟುಗಳಿಗೆ ಗೌರವ ಸನ್ಮಾನ.
ಕಾರವಾರ : ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ 60 ನೇ ರಾಷ್ಟ್ರೀಯ ರೋಲರ್ ಹಾಕಿ ಸ್ಕೇಟಿಂಗ್ ನಲ್ಲಿ ಕರ್ನಾಟಕ ತಂಡದಿಂದ ಸ್ಪರ್ದಿಸಿದ ...