ಕುಮಟಾ: ಅಗಲಿದ ಜೋಷಿ ಅವರಿಗೆ ಪತ್ರಕರ್ತರಿಂದ ಶ್ರದ್ಧಾಂಜಲಿ

Source: S O News Service | By SahilOnline Staff | Published on 19th February 2020, 9:14 PM | Coastal News |

ಕುಮಟಾ: ಇತ್ತೀಚಿಗೆ ನಿಧನರಾದ ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ವಿ.ಆರ್.ಜೋಷಿ ಅವರಿಗೆ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರು ಬುಧವಾರ ಸಭೆ ನಡೆಸಿ, ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಜೋಷಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಕ.ಸಾ.ಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಈ ವೇಳೆ ಮಾತನಾಡಿ, ‘ವಿ.ಆರ್ ಜೋಷಿಯವರು ಪತ್ರಿಕೋದ್ಯಮದಲ್ಲಿ ಹೊಸತನದ ಬರವಣಿಗೆ ತಂದವರು. ಕೇವಲ ಸುದ್ದಿ ಮಾಡುವುದಷ್ಟೇ ಅಲ್ಲದೇ, ಓದುಗರಿಗೆ ಒಳ್ಳೆಯ ಸಂದೇಶ ನೀಡುವ ನಿಟ್ಟಿನಲ್ಲಿ ಸುದ್ದಿ ಮಾಡುತ್ತಿದ್ದರು. ಅವರ ವೃತ್ತಿ ನಿಷ್ಠೆ ಹಾಗೂ ವೃತ್ತಿ ಶೈಲಿಯನ್ನು ಯುವ ಪತ್ರಕರ್ತರು ಅಳವಡಿಸಿಕೊಳ್ಳಬೇಕು’ ಎಂದರು.
ಪತ್ರಕರ್ತರಾದ ಅನ್ಸಾರ್ ಶೇಖ್, ಸುಬ್ರಾಯ ಭಟ್ಟ ಮಾತನಾಡಿ, ಜೋಷಿಯವರೊಂದಿಗಿನ ಒಡನಾಟದ ನೆನಪುಗಳನ್ನು ಮೆಲುಕು ಹಾಕಿದರು. ಕಸಾಪ ತಾಲೂಕಾಧÀ್ಯಕ್ಷ ಶ್ರೀಧರ ಉಪ್ಪಿನಗಣಪತಿ, ಪತ್ರಕರ್ತರಾದ ಗಣೇಶ ರಾವ್, ಶಂಕರ ಶರ್ಮಾ, ಸದಾನಂದ ದೇಶಭಂಡಾರಿ, ರಾಘು ಶೇಟ್, ರವಿಗಾವಡಿ, ದಿನೇಶ ಗಾಂವಕರ್, ಮಂಜು ದೀವಗಿ, ಯೋಗಿಶ ಮಡಿವಾಳ್, ನಟರಾಜ ಗದ್ದೆಮನೆ, ಸಂತೋಷ ನಾಯ್ಕ, ಚಂದ್ರಕಾಂತ ನಾಯ್ಕ, ಸಂಘದ ಸದಸ್ಯರಾದ ಕುಮಾರ್ ವೆಂಗರ್ಲೇಕರ್, ವಿನೋದ ಹರಿಕಂತ್ರ, ಸಂತೋಷ್ ನಾಯ್ಕ ಮುಂತಾದವರು ಹಾಜರಿದ್ದರು.

Read These Next

‘ಕೊರೋನಾ ವಾರಿಯರ್ಸ್’ ಗಳ ಸಹಾಯಕ್ಕೆ ಭಟ್ಕಳದ ಧೃತಿ ಸರ್ಜಿಕಲ್ ಫ್ಯಾಕ್ಟರಿ; ಮುಖಗವಚ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರು

ಭಟ್ಕಳ: ದೇಶದಲ್ಲಿ ಕೊರೋನಾ ಸೋಂಕು ಪ್ರವೇಶಿಸಿದ ನಂತರದಲ್ಲಿ ದೇಶದ ರಾಜಧಾನಿಯಿಂದ ಹಿಡಿದು ಸಣ್ಣಪುಟ್ಟ ಗ್ರಾಮಗಳಲ್ಲಿಯೂ ಕೂಡ ಮಾಸ್ಕ್ ...

ಭಟ್ಕಳದಲ್ಲಿ ಮತ್ತೊಂದು ಕೋವಿಡ್-19ಪ್ರಕರಣ ಪತ್ತೆಯೊಂದಿಗೆ  ರಾಜ್ಯದಲ್ಲಿ100 ರ ಗಡಿ ತಲುಪಿದ ಕೊರೋನ ಪೀಡಿತರು

ಭಟ್ಕಳ: ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಕೊರೋನ ಮಹಾಮಾರಿ ಮಂಗಳವಾರ (ಬೆಳಿಗ್ಗೆ ೮ಗಂಟೆಗೆ ಇದ್ದಂತೆ) ಮತ್ತೆ ತನ್ನ ...

ಭಟ್ಕಳದ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು 24x7 ಸಹಾಯವಾಣಿ ಸಿದ್ಧ; ಮನೆಬಾಗಿಲಿಗೆ ವೈದ್ಯರ ಸೇವೆ

ಭಟ್ಕಳ: ಕೊರೋನ ಮಹಾಮಾರಿ ಹಿನ್ನೆಲೆಯಲ್ಲಿ ತಾಲೂಕಿನಾದ್ಯನ ಜನರ ಸಮಸ್ಯೆಗಳಿಗೆ ಸ್ಪಂಧಿಸಲು ದಿನ ೨೪ಗಂಟೆಯೂ ಸಹಾಯವಾಣಿ ಸಿದ್ದವಿದ್ದು ...

ಸಾಮಾಜಿಕ ಜಾಲಾತಾಣದಲ್ಲಿ ಕೊರೋನ ಜಿಹಾದ್; ಗಮನಕ್ಕೆ ತಂದಲ್ಲಿ ಕ್ರಮ-ಜಿಲ್ಲಾ ಎಸ್.ಪಿ ಶಿವಪ್ರಕಾಶ

ಭಟ್ಕಳ:ಸಾಮಾಜಿಕ ಜಾಲಾತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಕುರಿತಂತೆ ತಮ್ಮ ಗಮನಕ್ಕೆ ತಂದರೆ ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ...