ಫೋಕ್ಸೋ ಕಾಯ್ದೆಯಡಿ ದೂರು ದಾಖಲು 

Source: sonews | By Staff Correspondent | Published on 24th August 2019, 8:28 PM | Coastal News | Don't Miss |

ಮುಂಡಗೋಡ : ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳಸಿ ಗರ್ಭೀಣಿ ಮಾಡಿರುವ ಯುವಕನ ಮೇಲೆ ಪೊಲೀಸ ಠಾಣೆಯಲ್ಲಿ  ಫೋಕ್ಸೋ ಕಾಯ್ದೆಯಡಿ ದೂರದಾಖಲಿಸಲಾಗಿದ್ದು ಯುವಕ ತಲೆಮರೆಸಿಕೊಂಡಿದ್ದಾನೆ.

ರಮೇಶ ನಿಂಗಪ್ಪ ಬದನಗೋಡ ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡವ  ಆರೋಪಿಯಾಗಿದ್ದಾನೆ. ಮೇ.22 ರಂದು ಸಂತ್ರಸ್ತೆಯು ಮನೆಯಲ್ಲಿ ಏಕಾಂಗಿಯಾಗಿದ್ದಾಗ ಆರೋಪಿ ರಮೇಶ ಮನೆಗೆ ಹೋಗಿ ಮದುವೆಯಾಗುವುದಾಗಿ ಪುಸಲಾಯಿಸಿ  ಅವಳ ಇಷ್ಟಕ್ಕೆ ವಿರುದ್ದವಾಗಿ ಲೈಂಗಿಕ ಸಂಪರ್ಕಮಾಡಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಮುಂಡಗೋಡ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ ಆರೋಪಿಯು ಸಂತ್ರಸ್ಥೆಯ ತಾಯಿಯ ಕಡೆಯಿಂದ ಸಂಬಂದಿಯೆಂದು ತಿಳಿದು ಬಂದಿದೆ. ಆರೋಪಿಯ ಪತ್ತೆಗಾಗಿ ಪೊಲೀಸರ ಬಲೆ ಬೀಸಿದ್ದಾರೆ


 

Read These Next