ಸುಳ್ಳು ಕೇಸುಗಳ ದಾಖಲಿಸುವವರ ವಿರುದ್ಧ ಎಸ್.ಪಿ.ಗೆ ದೂರು

Source: sonews | By Staff Correspondent | Published on 12th March 2019, 5:40 PM | State News |

ಕೋಲಾರ : ಶಹಿಸ್ತಾ, ಶಬೀನಾ, ಶುಷ್ಮಾ ಮತ್ತು ಬಿಬಿ ಜಾನ್‍ಎಂಬುವರು ನರಸಾಪುರ ಸಾರ್ವಜನಿಕರ ಮೇಲೆ ಸುಳ್ಳು ದೂರುಗಳನ್ನು ಹಾಕಿ ಕಿರುಕುಳ  ನೀಡುತ್ತಿರುವುದರ ವಿರುದ್ಧ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ನರಸಾಪುರ ಗ್ರಾಮಸ್ಥರು ದೂರು ನೀಡಿದರು.

ನರಸಾಪುರ ಗ್ರಾಮದ ಮಹಿಳೆಯರ, ಹಿಂದುಳಿದವರ್ಗ, ಅಲ್ಪ ಸಂಖ್ಯಾತರ ಮತ್ತು ದಲಿತರ ಮೇಲೆ ಮುಸ್ಲಿಂ ಜನಾಂಗಕ್ಕೆ ಸೇರಿದ ಶಹಿಸ್ತಾ ಶಬೀನಾ, ಶುಷ್ಮಾ ಮತ್ತು ಬಿಬಿ ಜಾನ್‍ಎಂಬುವರು ವಿನಾ ಕಾರಣ ಸುಳ್ಳು ಕೇಸುಗಳನ್ನು ಹಾಕುತ್ತಾ ಪೊಲೀಸ್ ಠಾಣೆಗಳಿಗೆ, ಕೋರ್ಟುಗಳಿಗೆ ಅಲೆಯುವಂತೆ ಮಾಡಿ ಅಮಾಯಕ ನಾಗರೀಕರಿಗೆ ತುಂಬಾ ಕಿರುಕುಳ ತೊಂದರೆ ಮತ್ತು ಮಾನಸಿಕ ಹಿಂಸೆ ನೀಡುತ್ತಾ ಬಂದಿರುತ್ತಾರೆ. 

ಇಲ್ಲಿಯವರೆಗೂ ಸುಮಾರು 20 ಕ್ಕೂ ಹೆಚ್ಚು ಕೇಸುಗಳನ್ನು ಎಲ್ಲಾ ಜನಾಂಗದ ನಾಗರೀಕರ ಮೇಲೆ ವಿನಾ ಕಾರಣ ದಾಖಲಿಸಿ ವರ್ಷಗಟ್ಟಲೆ ಕೋರ್ಟುಗಳಿಗೆ ಅಲೆದಾಡಿಸಿರುತ್ತಾರೆ. ಇತ್ತೀಚೆಗೆ ದಿನಾಂಕ 05-03-2019ರಂದು ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಆತನ ಗಂಡನಾದ ಜಹೀರ್ ಖಾತ್, ಮಗನಾದ ಅಂಗವಿಕಲ ಅಯೂಬ್ ಕಾನ್ ಮತ್ತಿತರರ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡಿ 8 ಜನರ ಮೇಲೆ ಕೇಸುಗಳನ್ನು ದಾಖಲಿಸುರತ್ತಾರೆ. ಇವರು ನೀಡುವ ಕಿರುಕುಳದಿಂದ ಹಲವಾರು ಕುಟುಂಬಗಳು ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

ಸುಳ್ಳು ದೂರನ್ನು ನೀಡಿ ಪ್ರಕರಣಗಳನ್ನು ದಾಖಲಿಸುತ್ತಿರುವ ಶಹಿಸ್ತಾ, ಶಬೀನಾ, ಶುಷ್ಮಾ ಮತ್ತು ಬಿಬಿ ಜಾನ್‍ಎಂಬುವರ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕರು ನೆಮ್ಮದಿಯಾಗಿ ಬದುಕಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸೈಯದ್ ಪಾಷ, ನೌಷದ್ ಖಾನ್, ಬಹದ್ದೂರ್ ಖಾನ್, ಎಜಾಜ್ ವುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಜಾಲಿ ಮುನಿರಾಜು, ಎನ್. ಜಗನ್ನಾಥ್ ಮತ್ತು ಎಸ್.ನಾರಾಯಣಸ್ವಾಮಿ, ರಾಮಸಂದ್ರ ಕುಮಾರ್ ಮುಸ್ಲಿಂ ಜನಾಂಗಕ್ಕೆ ಸೇರಿದ 50ಕ್ಕೂ ಹೆಚ್ಚು ಮಹಿಳೆಯರು ಹಾಜರಿದ್ದರು.

                                    
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...