ಕಂಟೈನ್‌ಮೆಂಟ್ ವಲಯದಲ್ಲಿ ಸಾರಾಯಿ ಮಾರಾಟ ಮಾಡಿದ್ದರೆ ದೂರು ನೀಡಲಿ; ಮಾಜಿ ಶಾಸಕರ ಆರೋಪಕ್ಕೆ ಬಿಜೆಪಿ ತಿರುಗೇಟು

Source: S.O. News Service | By MV Bhatkal | Published on 6th June 2021, 6:30 PM | Coastal News |

ಭಟ್ಕಳ: ಕಂಟೇನ್ಮೆಟ್ ಪ್ರದೇಶದಲ್ಲಿ ಜಿಲ್ಲಾಡಳಿತದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಒಂದು ವೇಳೆ ಮದ್ಯಮಾರಾಟ ಮಾಡಿದ್ದರೆ ಅದು ತಪ್ಪು ಎಂದು ಭಟ್ಕಳ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ ಹೇಳಿದರು.
ಅವರು ಭಟ್ಕಳ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮಾಜಿ ಶಾಸಕ ಮಂಕಾಳ ವೈದ್ಯ ಅವರು ಕಂಟೇನ್ಮೆಮಟ್ ಪ್ರದೇಶದಲ್ಲಿ ಶಾಸಕರ ಅಂಗಡಿಯಲ್ಲಿ ಸರಾಯಿ ಮಾರಾಟ ಮಾಡುತ್ತಿದಾರೆ ಎಂದು ಆರೋಪಿಸಿದರು. ಈ ಆರೋಪವನ್ನು ಅಲ್ಲಗಳೆದ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ ಅವರು ಜಿಲ್ಲಾಡಳಿತದ ಮಾರ್ಗಸೂಚಿಯಂತೆ ನೀಡದ ಅನುಮತಿಯಂತೆ ಅವರು ಮಾರಾಟ ಮಾಡಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದೆ ಆದರೆ ಮಾಜಿ ಶಾಸಕರು ದೂರು ನೀಡಬಹುದಿತ್ತು. ಅಲ್ಲದೆ ಶಾಸಕರು ನಾಪತ್ತೆಯಾಗಿದ್ದಾರೆ ಹುಡುಕಿಕೋಡಿ ಅಂದಿರುವದು ಬಾಲಿಶ ಹೇಳಿಕೆ. ಪ್ರತಿದಿನ ಶಾಸಕ ಸುನೀಲ ನಾಯ್ಕ ಜನರೊಂದಿಗೆ ಬೆರೆತು ಜನಪರ ಕಾರ್ಯದಲ್ಲಿ ನಿರತರಾಗಿರುವದನ್ನು ಇವರು ಗಮನಿಸಬೇಕು.
ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಹಿಂದೆ ಹಲವು ಪದವಿಯನ್ನು ಅಲಂಕರಿಸಿದ್ದ ಮುಕುಂದ ನಾಯ್ಕ ವಿರುದ್ದ ಶಾಸಕ ಸುನೀಲ ನಾಯ್ಕ ನಾನ್ ಬೆಲೆಬಲ್ ದಾವೆ ಹೂಡುತ್ತಾರೆ. ಇನ್ನೊಬ್ಬ ಕಾರ್ಯಕರ್ತನ ಮನೆಯನ್ನು ರದ್ದುಪಡಿಸುವಂತೆ ಆಗ್ರಹಿಸುತ್ತಾರೆ. ಪಕ್ಷದ ವರಿಷ್ಟರ ಗಮನಕ್ಕೆ ತರದೆ ಏಕಾಏಕಿ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ಆರೋಪವಿದೆಯಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುಬ್ರಾಯ ದೇವಾಡಿಗ ವಸಂತ ಸಣ್ತಮ್ಮ ನಾಯ್ಕ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಉತ್ತರಿಸಿದರೆ ಹೊರತು ಮುಕುಂದ ನಾಯ್ಕ ವಿಚಾರದಲ್ಲಿ ಮೌನವಹಿಸಿದರು. ಈ ಸಂದರ್ಬದಲ್ಲಿ ಬಿಜೆಪಿ ಮುಖಂಡರಾದ ರಾಜೇಶ ನಾಯ್ಕ, ಪ್ರಮೋದ ಜೋಶಿ, ಭಾಸ್ಕರ ದೈಮನೆ, ದಾಸ ನಾಯ್ಕ ಸೇರಿ ಇತರರು ಇದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...