ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಸಮಸ್ತ ವಿಷಯಗಳ ಜ್ಞಾನ ಅವಶ್ಯಕ: ಅನಂತರಾಮು ಅರಳಿ

Source: so news | By Manju Naik | Published on 19th June 2019, 9:29 PM | State News | Don't Miss |

ಹಾಸನ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಮಸ್ತ ವಿಷಯಗಳ ಬಗ್ಗೆ ಆಳವಾದ ಜ್ಞಾನ ಹಾಗೂ ಸತತ ಪ್ರಯತ್ನಗಳ ಪರಿಶ್ರಮ ಅಗತ್ಯ ಎಂದು ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯದ ನಿರ್ದೇಶಕರಾದ ಅನಂತರಾಮು ಅರಳಿ ಅವರು ತಿಳಿಸಿದರು.
ಕೃಷಿಕ್ ಪೌಂಡೇಷನ್‍ನ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ಪರ್ದಾತ್ಮಕ ಪರೀಕ್ಷೆಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದಿನನಿತ್ಯದ ಪತ್ರಿಕೆಗಳ ವೀಕ್ಷಣೆ, ಸಂಭಾಷಣೆ, ಉತ್ತಮ ಜ್ಞಾನ ಸಂಪಾದನೆ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬಹುದು ಎಂದು ಅವರು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಯ ಪಡುವ ಅವಶ್ಯಕತೆ ಇಲ್ಲ ಆಧುನಿಕ ತಂತ್ರಜ್ಞಾನ ಹಾಗೂ ಅಂತರ್ಜಾಲ ಸೇವೆಗಳ ಸದ್ಭಳಕೆಯಿಂದ ಸಾಮಾನ್ಯ ವ್ಯಕ್ತಿಯೂ ಪರೀಕ್ಷೆಗಳಲ್ಲಿ ಹೆಚ್ಚಿನ ಮಾಹಿತಿ ಸಂಪಾದಿಸಿ ತೇರ್ಗಡೆಯಾಗುವ ಅವಕಾಶವಿದೆ. ಪ್ರತಿಯೊಬ್ಬರೂ ಇವುಗಳ ಸದುಪಯೋಗಪಡಿಸಿಕೊಳ್ಳ ಬೇಕು ಎಂದರು.
ಪರೀಕ್ಷೆ ತಯಾರಿಯ ಕುರಿತು ಕಾರ್ಯಕ್ರಮದಲ್ಲಿ ನೆರೆದಿದ್ದ ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಿದರಲ್ಲದೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿರು.
ಜನತಾ ಮಾದ್ಯಮ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಮಂಜುನಾಥ್ ದತ್ತ ಅವರು ಮಾತನಾಡಿ ತಮ್ಮ ಪಂಚೇಂದ್ರಿಯಗಳ ಸಮರ್ಪಕ ಬಳಕೆಯಿಂದ ಉತ್ತಮ ಜ್ಷಾನ ಸಂಪಾದಿಸಿ ಉನ್ನತ ಮಟ್ಟದ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಎದುರಿಸಿ ಎಂದರು.
ಜೀವನ ವೃತ್ತಾಂತಗಳ ಬಗೆಗಿನ ಸಾಧಕರ ಪುಸ್ತಕಗಳನ್ನು ಓದುವ ಹಾಗೂ ಆದರ್ಶಗಳನ್ನು ಪಾಲಿಸುವುದರಿಂದ ಪ್ರತಿಯೊಬ್ಬರು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಲು ಸಾಧ್ಯ ಎಂದು ಅವರು ತಿಳಿಸಿದರು.
ತಮ್ಮ ಸಾಮಥ್ರ್ಯವನ್ನು ಹೆಚ್ಚಿಸಿ ಕಠಿಣ ಪರಿಶ್ರಮದಿಂದ ರಾಜ್ಯಕ್ಕೆ ಮುಂಬರುವ ದಿನಗಳಲ್ಲಿ ಹೊಸ ಐ.ಎ.ಎಸ್ ಅಧಿಕಾರಿಗಳಾಗಿ ಯಶಸ್ಸು, ಕೀರ್ತಿಗಳಿಸಿ ಶ್ರಮಿಸಬೇಕು ಎಂದು ಅವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಐ.ಎ.ಎಸ್ ತರಬೇತುದಾರರಾದ ಶ್ರೇಯಸ್ ಅವರು ತಮ್ಮ ತರಬೇತಿ ಅವಧಿಯ ಅನುಭವಗಳನ್ನು ಹಂಚಿಕೊಂಡರು.
ಅನಂತರಾಮು ಅರಳಿ ಅವರ ಮಡದಿಯಾದ ನಾಗರಿಕ, ಕಾಫಿ ಮಂಡಳಿಯ ಜಂಟಿ ನಿರ್ದೇಶಕರಾದ ಗುಡ್ಡೇಗೌಡ, ಕೃಷಿಕ್ ಪೌಂಡೇಷನ್‍ನ ನಿರ್ದೇಶಕರುಗಳಾದ ಬೋರೇಗೌಡ, ಆರ್.ಟಿ ದೇವೇಗೌಡ, ಮತ್ತು ಕಾರ್ಯದರ್ಶಿ ಹೆಚ್.ಪಿ ಮೋಹನ್ ಮತ್ತಿತರರು ಹಾಜರಿದ್ದರು.

Read These Next

ಅಂಜುಮನ್ ಶಿಕ್ಷಣ ಸಂಸ್ಥೆಯ ಸುಪುತ್ರಿ ಶಿರಾಲಿಯ ಡಾ. ಅನಿಸಾ ಶೇಖ್ ಗೆ ದಂತ ವೈದ್ಯಕೀಯದಲ್ಲಿ ಪುರಸ್ಕಾರ

ಭಟ್ಕಳ: ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ‘ದುಖ್ತರ್-ಎ-ಅಂಜುಮನ್(ಅಂಜುಮನ್ ಪುತ್ರಿ) ಪ್ರಶಸ್ತಿ ...