ಯು‌ಎ‌ಇ ಯ ೧೦೦ಕುಶಾಗ್ರಮತಿಗಳ ಪಟ್ಟಿಯಲ್ಲಿ ಭಟ್ಕಳದ ಸುಪುತ್ರ ಸೈಯ್ಯದ್ ಖಲೀಲ್ ಸೇರ್ಪಡೆ

Source: sonews | By Staff Correspondent | Published on 20th September 2017, 8:36 PM | Coastal News | State News | National News | Gulf News | Special Report | Don't Miss |

*ಎಂ.ಆರ್.ಮಾನ್ವಿ

ಭಟ್ಕಳ: ಗಗನಚುಂಬಿ ಕಟ್ಟಡಗಳು, ಮೈಮನವನ್ನು ಪುಳಕಗೊಳಿಸುವ ರಸ್ತೆಗಳು, ಮರಳುಗಾಡಿನ ಸ್ವರ್ಗವೆಂದೆ ಬಣ್ಣಿಸಲ್ಪಡುವ, ಅತ್ಯಂತ ಶೀಘ್ರಗತಿಯಲ್ಲಿ ಅಭಿವೃಧ್ಧಿ ಹೊಂದಿ ಜಗತ್ತೇ ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ಯು‌ಎ‌ಇ ಅರಬ್ ಸಂಯುಕ್ತ ರಾಷ್ಟ್ರದ ನೂರು ಮಂದಿ ಕುಶಾಗ್ರಮತಿಗಳ ಸಾಲಿನಲ್ಲಿ ಭಟ್ಕಳದ ಹೆಮ್ಮೆಯ ಸುಪುತ್ರ ಶಿಕ್ಷಣ ಪ್ರೇಮಿ, ಡಾ.ಸೈಯ್ಯದ್ ಖಲಿಲುರ್ರಹ್ಮಾನ್ ಹೆಸರು ಸೇರ್ಪಡೆಗೊಂಡಿದ್ದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. 
ದುಬೈ ಯಿಂದ ಅಂಗ್ಲ ಮತ್ತು ಅರಬಿ ಭಾಷೆಯಲ್ಲಿ ಪ್ರಕಟಗೊಳ್ಳುವ ಮ್ಯಾಗ್ಝಿನ್ ‘ಅರೆಬಿಯನ್ ಬಿಝಿನೆಸ್’ ಸಾಪ್ತಾಹಿಕವು ‘ದಿ ೧೦೦ ಸ್ಮಾರಟೆಸ್ಟ್ ಪೀಪಲ್ ಇನ್ ದಿ ಯು‌ಎ‌ಇ’(ಯು‌ಎ‌ಇ ಯ ನೂರು ಮಂದಿ ಕುಶಾಗ್ರಮತಿಗಳು) ಎಂಬ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ್ದು ಅದರಲ್ಲಿ ಭಟ್ಕಳದ ಖ್ಯಾತ ಉದ್ಯಮಿ ಅನಿವಾಸಿ ಭಾರತೀಯ ಡಾ.ಎಸ್.ಎಂ.ಸೈಯ್ಯದ್ ಖಲೀಲುರ್ರಹ್ಮಾನ್ ರಿಗೆ ಸ್ಥಾನವನ್ನು ನೀಡಿ ಭಟ್ಕಳವನ್ನು ಜಾಗತಿಕ ಮಟ್ಟದಲ್ಲಿ ಮೆರೆಯುವಂತೆ ಮಾಡಿದೆ. 
ಸಾಮನ್ಯರು  ಸಿ.ಎ.ಖಲೀಲ್ ಎಂದು ಗುರುತಿಸುವ ಭಟ್ಕಳ ನವಾಯತ್ ಸಮುದಾಯದ ಸುಪುತ್ರ ಇಂತಹದ್ದೊಂದು ಜಾಗತಿಕಮಟ್ಟದಲ್ಲಿ ಹೆಸರು ಮಾಡುತ್ತಾರೆ ಎಂದರೆ ಅದು ಕೇವಲ ಭಟ್ಕಳದ ನವಾಯತ್ ಸಮುದಾಯಕ್ಕಷ್ಟೆ ಅಲ್ಲ ಇಡಿ ದೇಶದ ಮುಸ್ಲಿಮರ ಹೆಮ್ಮೆ ಎಂದೇ ಹೇಳಬಹುದು. ಖಲೀಲ್ ಸಾಹೇಬರು ಅಂತರಾಷ್ಟ್ರೀಯ ವ್ಯವಹಾರ, ಸಮಾಜಿಕ ಸೇವೆ, ಬಡಮಕ್ಕಳ ಶಿಕ್ಷಣದ ಕುರಿತಂತೆ ಅತೀವ ತುಡಿತವನ್ನು ಹೊಂದಿದ್ದು ಅವರಿಗೆ ಸಂದ ಗೌರವ ಸ್ತುತ್ಯಾರ್ಹವೇ ಆಗಿದೆ. 
ಅರಬ್ ಸಂಯುಕ್ತ ರಾಷ್ಟ್ರಗಳಲ್ಲಿದ್ದುಕೊಂಡೇ ದುಬೈ ಸೇರಿದಂತೆ ಸಮಸ್ತ ಗಲ್ಫ ರಾಷ್ಟ್ರಗಳಲ್ಲಿ ಆಧುನಿಕತೆಯ ಬೇಡಿಕೆಗಳಿಗನುಗುಣವಾಗಿ ಉದ್ಯಮ ರಂಗದಲ್ಲಿ ತೊಡಗಿಸಿಕೊಂಡಿದ್ದು ತನ್ನ ಸೂಕ್ಷ್ಮ ಹಾಗೂ ಕುಶಾಗ್ರಮತಿಯಿಂದಾಗಿ ಆಕಾಶದೆತ್ತರಕ್ಕೆ ಬೆಳೆದು ನಿಂತ ಇವರು ಅಲ್ಲಿನ ೧೦೦ಮಂದಿ ಕುಶಾಗ್ರಮತಿ, ಚಾಣಾಕ್ಷ, ಬುದ್ದಿವಂತರ ಯಾದಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಕುಶಾಗ್ರಮತಿಗಳ ಸಾಲಿನಲ್ಲಿ ಭಾರತದ ಒಟ್ಟು ೧೨ಮಂದಿಯ ಹೆಸರಿದ್ದು ಇದರಲ್ಲಿ ಖಲೀಲ್ ಸಾಹೇಬರ ವ್ಯಕ್ತಿತ್ವ ಗಮನಾರ್ಹವಾಗಿದೆ. 
೧೯೭೮ರಲ್ಲಿ ಗಲ್ಫ್ ರಾಷ್ಟ್ರಕ್ಕೆ ಕಾಲಿಟ್ಟ ಖಲೀಲ್ ಸಾಹೇಬ್, ಸತತ ೩೦ ವರ್ಷಗಳ ವರೆಗೆ ಗಲ್ದಾರಿ ಕುಟುಂಬದ ಮೇಲಿನ ಅಭಿಮಾನ, ವಿಶ್ವಾಸದಿಂದಾಗಿ ಅವರು ಗಲ್ದಾರಿ ಕಂಪನಿಯನ್ನು ಆಕಾದೆತ್ತರಕ್ಕೆ ಕೊಂಡೊಯ್ದರು. ಸಧ್ಯ ಶಾರ್ಜಾದ ಕೆ & ಕೆ ಎಂಟರ್ ಪ್ರೈಸೆಸ್ ಜರ್ನಲ್ ಟ್ರೇಡಿಂಗ್ ಕಂಪನಿಯ ಸ್ಥಾಪಕ ಚೇರ್ಮನ್ ರಾಗಿ ತಮ್ಮ ವೃತ್ತಿ ಜೀವನದಲ್ಲಿ ಸಕ್ರೀಯರಾಗಿದ್ದಾರೆ. ಇವರು ಮಾಧ್ಯಮ ಸಂಸ್ಥೆಯ ನಿರ್ದೇಶಕರು, ಸಾಹಿಲ್ ಆನ್ ಲೈನ್ ಸಂಸ್ಥೆಯ ಸ್ಥಾಪಕಾಧ್ಯಕ್ಷರು ಆಗಿದ್ದಲ್ಲೆ ಕರ್ನಾಟಕ ಸೇರಿದಂತೆ ದೇಶದ ವಿವಿಧ ಶೈಕ್ಷಣಿಕ ಸಾಮಾಜಿಕ ಸಂಸ್ಥೆಗಳ ಅಧ್ಯಕ್ಷರಾಗಿ ಸಾಮಾಜಿಕ, ಶೈಕ್ಷಣಿ ಸೇವೆಯನ್ನು ಮಾಡುತ್ತಿದ್ದಾರೆ. ವಿದೇಶದಲ್ಲಿ ಸದಾ ತಮ್ಮ ದೇಶ ವಿಶೇಷವಾಗಿ ಭಟ್ಕಳಕ್ಕಾಗಿ ಮಿಡಿಯುವ ಇವರ ಹೃದಯ, ಭಟ್ಕಳದಲ್ಲಿ ಹಿಂದೂ-ಮುಸ್ಲಿಮ್ ಸೌಹಾರ್ಧತೆಗೆ ಹತ್ತುಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅಲ್ಲದೆ ಇಲ್ಲಿನ  ಯುವ ಸಮುದಾಯ ನಿರುದ್ಯೋಗದ ಭೂತದಿಂದ ಹೊರಬರಬೇಕೆಂದು ಸದಾ ಚಿಂತನೆಯಲ್ಲಿರುವ ಇವರು ಭಟ್ಕಳದಲ್ಲಿ ಔದ್ಯೋಗಿಕ ಕ್ರಾಂತಿಯನ್ನು ತರುವ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಭಟ್ಕಳಕ್ಕೆ ವೈದ್ಯಕೀಯ ಶಿಕ್ಷಣದ ಅಗತ್ಯತೆ, ಹಾಗೂ ಇಲ್ಲಿ ಉತ್ತಮ ಆಸ್ಪತ್ರೆಯನ್ನು ಸ್ಥಾಪಿಸುವ ನಿಟ್ಟಿನಲ್ಲೂ ಹಲವು ಬಾರಿ ಇವರು ತಮ್ಮ ಭಾಷಣಗಳ ಮೂಲಕ ವಿಚಾರಗಳನ್ನು ವ್ಯಕ್ತಪಡಿಸಿದ್ದಿದೆ. 
ಸಮುದಾಯದ ಸುಪುತ್ರನಿಗೆ ಹತ್ತುಹಲವು ಪ್ರಶಸ್ತಿಗಳು, ಗೌರವಗಳು ತನ್ನಿಂತಾನೆ ಹುಡುಕಿಕೊಂಡು ಬರುತ್ತಿದ್ದು ರಾಜ್ಯ ಸರ್ಕಾರದ ಪ್ರತಿಷ್ಟಿತ ರಾಜ್ಯೋತ್ಸವ ಪ್ರಶಸ್ತಿ, ಐರ್ಲೆಂಡ್ ದೇಶದ ಗೇಟ್ ಕಾಲೇಜಿನ ಗೌರವ ಡಾಕ್ಟರೇಟ್, ಅಲ್ಲದೆ ಲೆಕ್ಕವಿಲ್ಲದಷ್ಟು ಸನ್ಮಾನಗಳು ಇವೆಲ್ಲವೂ ಡಾ.ಸೈಯ್ಯದ್ ಖಲೀಲುರ್ರಹ್ಮಾನ್ ರ ವ್ಯಕ್ತಿತ್ವವನ್ನು ಪರಿಚಯಿಸುತ್ತಿವೆ. 

‘ಭಟ್ಕಳದ ಪ್ರಪ್ರಥಮ ಚಾರ್ಟರ್ಡ್ ಅಕೌಂಟಂಟ್ ಗಳಲ್ಲಿ ಒಬ್ಬರು’ ಎಂಬ ಹೆಗ್ಗಳಿಕೆಯ ಸಯ್ಯದ್ ಖಲೀಲ್ ಅವರು ಆರ್ಥಿಕ ತಜ್ಞರಾಗಿ ಮಾತ್ರವಲ್ಲದೆ , ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಂಚೂಣಿಯ ನಾಯಕರಾಗಿ ಜನಪ್ರಿಯರಾಗಿದ್ದಾರೆ. ಭಟ್ಕಳದ ಪ್ರತಿಷ್ಠಿತ ಅಂಜುಮನ್ ಶಿಕ್ಷಣ ಸಂಸ್ಥೆಗಳು, ರಾಬಿತಾ ಸೊಸೈಟಿ ಇತ್ಯಾದಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಭಟ್ಕಳದ ಎಲ್ಲ ಸಮುದಾಯಗಳ ಜನರ ಅಪಾರ ಪ್ರೀತಿ , ಗೌರವಗಳಿಗೆ ಪಾತ್ರವಾಗಿರುವ ಖಲೀಲ್ ಸಾಹೇಬರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತುಂಬು ಪ್ರೋತ್ಸಾಹ ನೀಡಿ , ಶೈಕ್ಷಣಿಕ ಸಂಸ್ಥೆಗಳನ್ನು ಬೆಳೆಸಿದವರು. ದೇಶ ವಿದೇಶಗಳ ಪ್ರಭಾವಿ ರಾಜಕೀಯ ನಾಯಕರು, ಸಾಮಾಜಿಕ, ಧಾರ್ಮಿಕ ಧುರೀಣರು ಸಯ್ಯದ್ ಖಲೀಲ್ ಅವರ ಆಪ್ತ ವಲಯದಲ್ಲಿದ್ದಾರೆ.

ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಸಲ್ಲಿಸಲಾದ ಕೊಡುಗೆಗಾಗಿ ಈ ಹಿಂದೆಯೂ ಹಲವು ಬಾರಿ ಖಲೀಲುರ್ರಹ್ಮಾನ್ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ಅವರಿಗೆ 'ರಾಜ್ಯೋತ್ಸವ ಪ್ರಶಸ್ತಿ' ಪ್ರದಾನಿಸಿ ಗೌರವಿಸಿದೆ. ಐರ್ಲ್ಯಾಂಡ್ ನ 'ಆಲ್ಡರ್ಸ್ ಗೇಟ್ ಕಾಲೇಜ್' ಖಲೀಲುರ್ರಹ್ಮಾನ್ ಅವರಿಗೆ ಡಾಕ್ಟರೇಟ್ ನೀಡಿದೆ.

‘ಅರೇಬಿಯನ್ ಬಿಸಿನೆಸ್’ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಭಾರತೀಯರಾದ ತುಂಬೆ ಗ್ರೂಪ್ ಅಧ್ಯಕ್ಷ ತುಂಬೆ ಮೊಹಿದ್ದೀನ್, ಡೆನುಬ್ ಗ್ರೂಪ್ ನ ಚೇರ್ ಮೆನ್ ಮತ್ತು ಸ್ಥಾಪಕ ರಿಝ್ವಾನ್ ಸಾಜನ್, ಲುಲು ಗ್ರೂಪ್ ನ ಅಧ್ಯಕ್ಷ ಯೂಸುಫ್ ಅಲಿ, ಅಸ್ದಾ ಬರ್ಸೆನ್-ಮರ್ಸ್ಟೆಲ್ಲಾ ಸಿಇಒ ಸುನಿಲ್ ಜಾನ್, ಎನ್ ಎಂ ಸಿ ಹೆಲ್ತ್ ಕೇರ್ ಸ್ಥಾಪಕ ಡಾ.ಬಿ.ಆರ್. ಶೆಟ್ಟಿ, ಪ್ಲ್ಯಾನ್ ಬಿ ಗ್ರೂಪ್ ಸಿಇಒ ಹಾಗೂ ಸ್ಥಾಪಕ ಹರ್ಮೀಕ್ ಸಿಂಗ್, ಕೊಕೂನ್ ಸೆಂಟರ್ ಫಾರ್ ಆಸ್ತಾಟಿಕ್ ಟ್ರಾನ್ಸ್ ಫಾರ್ಮೇಶನ್ ನ ಸಿಇಒ ಡಾ.ಸಂಜಯ್ ಪರಾಶನ್, ಲಸಿಕ್ ಶಸ್ತ್ರಚಿಕಿತ್ಸಕ ಡಾ. ಪ್ರಮೋದ್ ವಾರ್ ಹೇಕರ್, ವಿಪಿಎಸ್ ಹೆಲ್ತ್ ಕೇರ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಶಂಶೀರ್ ವಯಲಿಲ್ ಹಾಗೂ ಜೆಮ್ಸ್ ಎಜುಕೇಶನ್ ಚೇರ್ ಮೆನ್ ಸನ್ನಿ ವರ್ಕೀ ಸ್ಥಾನ ಪಡೆದಿದ್ದಾರೆ.

Read These Next

ಬಾಬರಿ ಮಸಿದಿ ಐತಿಹಾಸಿಕ ತೀರ್ಪಿಗೆ ಕ್ಷಣಗಣನೆ ಆರಂಭ; ಶನಿವಾರ ಬೆಳಿಗ್ಗೆ ೧೦:೩೦ಕ್ಕೆ ಮಹಾತೀರ್ಪು ಪ್ರಕಟ

ಹೊಸದಿಲ್ಲಿ: ದೇಶದಲ್ಲಿ ಅಸಹನೆ, ಕೋಮುಗಲಭೆ, ಅಶಾಂತಿಗೆ ಕಾರಣವಾಗಿದ್ದ ಭೂ ಒಡೆತನಕ್ಕೆ ಸೇರಿದ ೧೩೪ ವರ್ಷಗಳ ಅತ್ಯಂತ ಹಳೆಯ ಹಾಗೂ ...

`ಪಾಕಿಸ್ತಾನಕ್ಕೆ ಕರೆದೊಯ್ಯಲು ಬಂದಿದ್ದ ಆ ಗಾಡಿಯಲ್ಲಿ ನನ್ನ ದೇಹ ಇತ್ತು, ಆದರೆ ಅದಕ್ಕೆ ಜೀವ ಇದ್ದಿರಲಿಲ್ಲ...!'

ಭಾರತ ವಿದೇಶಾಂಗ ಇಲಾಖೆಯ ಆಜ್ಞಾನುಸಾರ ಹಡೆದ 3 ಮಕ್ಕಳನ್ನು ಭಾರತದಲ್ಲಿಯೇ ಬಿಟ್ಟು ಪಾಕಿಸ್ತಾನಕ್ಕೆ ಹೊರಟಿದ್ದ ಭಟ್ಕಳದ ಶಂಕಿತ ...

ಬ್ಯಾಂಕುಗಳ ವಿಲೀನ ಉನ್ಮಾದ

ವಾಸ್ತವಗಳು ಬ್ಯಾಂಕುಗಳ ಗಾತ್ರ ಮತ್ತು ದಕ್ಷತೆಯ ನಡುವಿನ ಸಂಬಂಧಗಳ ಒದಗಿಸುವ ತಿಳವಳಿಕೆಗಳಿಗೆ ಪೂರಕವಾಗಿಯೇನೂ ಇಲ್ಲ. ಉದಾಹರಣೆಗೆ ...

ಅಂಜುಮನ್ ಶಿಕ್ಷಣ ಸಂಸ್ಥೆಯ ಸುಪುತ್ರಿ ಶಿರಾಲಿಯ ಡಾ. ಅನಿಸಾ ಶೇಖ್ ಗೆ ದಂತ ವೈದ್ಯಕೀಯದಲ್ಲಿ ಪುರಸ್ಕಾರ

ಭಟ್ಕಳ: ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ‘ದುಖ್ತರ್-ಎ-ಅಂಜುಮನ್(ಅಂಜುಮನ್ ಪುತ್ರಿ) ಪ್ರಶಸ್ತಿ ...

ಭಟ್ಕಳ ಅಧಿಕಾರಿಗಳ ರಾಜಾಶ್ರಯದಲ್ಲಿ ಮಿತಿಮೀರಿದ ಗಣಿಗಾರಿಕೆ! ಇದ್ದೊಂದು ಗುಡ್ಡವನ್ನೂ ಕೊರೆದರು; ದನಿ ಕಳೆದುಕೊಳ್ಳುತ್ತಿರುವ ಜನರು

ಭಟ್ಕಳಕ್ಕೆ ಸಹಾಯಕ ಆಯುಕ್ತರಾಗಿ, ತಹಸೀಲ್ದಾರರಾಗಿ ಹಲವಾರು ಅಧಿಕಾರಿಗಳು ಬಂದು ಹೋಗಿದ್ದಾರೆ. ಯಾವುದೇ ಸಹಾಯಕ ಆಯುಕ್ತರು, ...

`ಪಾಕಿಸ್ತಾನಕ್ಕೆ ಕರೆದೊಯ್ಯಲು ಬಂದಿದ್ದ ಆ ಗಾಡಿಯಲ್ಲಿ ನನ್ನ ದೇಹ ಇತ್ತು, ಆದರೆ ಅದಕ್ಕೆ ಜೀವ ಇದ್ದಿರಲಿಲ್ಲ...!'

ಭಾರತ ವಿದೇಶಾಂಗ ಇಲಾಖೆಯ ಆಜ್ಞಾನುಸಾರ ಹಡೆದ 3 ಮಕ್ಕಳನ್ನು ಭಾರತದಲ್ಲಿಯೇ ಬಿಟ್ಟು ಪಾಕಿಸ್ತಾನಕ್ಕೆ ಹೊರಟಿದ್ದ ಭಟ್ಕಳದ ಶಂಕಿತ ...