ಪವರ್ ಟಿವಿ ಪ್ರಸಾರ ಸ್ಥಗಿತಕ್ಕೆ ಕರಾವಳಿಯಲ್ಲಿ ಖಂಡನೆ. ಪ್ರಸಾರಕ್ಕೆ ಅವಕಾಶ ನೀಡುವಂತೆ ಮನವಿ.

Source: SO News | By Laxmi Tanaya | Published on 30th September 2020, 12:57 PM | Coastal News |

ಮಂಗಳೂರು :  ಬಿಎಸ್ವೈ ಸರಕಾರದಿಂದ ಪವರ್ ಟಿವಿ ನೇರಪ್ರಸಾರ ಸ್ಥಗಿತಕ್ಕೆ ರಾಜ್ಯದ  ಕರಾವಳಿಯಲ್ಲೂ ತೀವ್ರ ಖಂಡನೆ ವ್ಯಕ್ತವಾಗಿದೆ. 

ಪವರ್ ಟಿವಿ ಮೇಲಿನ ದಾಳಿ ಹಾಗೂ ನೇರಪ್ರಸಾರ ಸ್ಥಗಿತಗೊಳಿಸಿದ ಸರಕಾರದ ಕ್ರಮದ ವಿರುದ್ಧ  ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು. 

ತಕ್ಷಣವೇ ಪವರ್ ಟಿವಿ ಸ್ಥಗಿತಕ್ಕೆ ಕಾರಣವಾದ ನಿಲುವಿನಿಂದ ಸರಕಾರ ಹಿಂದೆ ಸರಿದು, ವಾಹಿನಿಯ ಪ್ರಸಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಿಎಂ ಅವರಿಗೆ ಒತ್ತಾಯಿಸಲಾಯಿತು. ಅಲ್ಲದೇ ಈ ರೀತಿಯ ಕ್ರಮ ಪ್ರಜಾಪ್ರಭುತ್ವ ಮೌಲ್ಯಕ್ಕೆ ಅಪಚಾರ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ತಾರನಾಥ ಗಟ್ಟಿ ತೀವ್ರವಾಗಿ ಖಂಡಿಸಿದರು. 

ಈ ಸಂದರ್ಭ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಗೌರವಾಧ್ಯಕ್ಷ ಶರೀಫ್ ಜಟ್ಟಿಪಳ್ಳ, ಸುಳ್ಯ ಘಟಕ ಪ್ರಧಾನ ಕಾರ್ಯದರ್ಶಿ ಯಶ್ವಿತ್ ಕಾಳಮ್ಮನೆ, ಸಂಘಟನಾ ಕಾರ್ಯದರ್ಶಿಗಳಾದ ವೈಲೆಟ್ ಪಿರೇರಾ ಮತ್ತು ಕೆನ್ವಿಟ್ ಜೆ. ಪಿಂಟೋ ಮತ್ತು ಸದಸ್ಯರಾದ ಕುಶಾಂತ್, ಪವರ್ ಟಿವಿ ಮಂಗಳೂರು ವರದಿಗಾರ ಇರ್ಷಾದ್ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...