ಸರ್ಕಾರಿ ಜಮೀನುಗಳ ಒತ್ತುವರಿ ತೆರವು - ಸಿ.ಸತ್ಯಭಾಮ

Source: sonews | By Staff Correspondent | Published on 2nd June 2020, 10:52 PM | State News |

ಕೋಲಾರ; ಜಿಲ್ಲೆಯ ಸರ್ಕಾರಿ ಜಮೀನುಗಳಾದ ಸ್ಮಶಾನ, ಗುಂಡುತೋಪು, ಬಂಡಿದಾರಿ, ಕೆರೆ ಜಮೀನುಗಳು ಒತ್ತುವರಿಯಾಗಿದ್ದು, ಕಳೆದ ವಾರದಲ್ಲಿ ಜಿಲ್ಲೆಯಲ್ಲಿ ಒಟ್ಟು 16 ಸರ್ಕಾರಿ ಸರ್ವೆನಂಬರ್‍ಗಳಲ್ಲಿ ಒಟ್ಟು 6-04 ಎಕರೆ ಜಮೀನು ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವುಗೊಳಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ ಅವರು ತಿಳಿಸಿದ್ದಾರೆ.

ತೆರವುಗೊಳಿಸಿದ ಜಮೀನಿನ ವಿವರ:  ಕೋಲಾರ ತಾಲ್ಲೂಕಿನ ಕಸಬಾ ಹೋಬಳಿಯ ಕೋಡಿ ಕಣ್ಣೂರು ಗ್ರಾಮದ ಕೆರೆಯ ಅಂಗಳ ಸರ್ವೆ ನಂಬರ್ 129 ರಲ್ಲಿ ವೆಂಕಟೇಶಪ್ಪ ಬಿನ್ ಮುನಿಯಪ್ಪ ಎಂಬುವರಿಂದ 0-16 ಎಕರೆ, ಸಂಗೊಂಡಹಳ್ಳಿ ಗ್ರಾಮದ ಕೆರೆ ನೀರು ಮುಳುಗಡೆ ಸರ್ವೆ ನಂಬರ್ 21 ರಲ್ಲಿ ಜಮದಗ್ನಿ ಬಿನ್ ಲೇಟ್ ಬಂಗಾರಪ್ಪ ಎಂಬುವರಿಂದ 0-16 ಎಕರೆಯನ್ನು ತೆರವುಗೊಳಿಸಲಾಗಿದೆ.

ಮಾಲೂರು ತಾಲ್ಲೂಕಿನ ಕಸಬಾ ಹೋಬಳಿಯ ಮಾಲೂರಿನ ಸರ್ಕಾರಿ ಕುಂಟೆ ಸರ್ವೆ ನಂಬರ್ 172 ರಲ್ಲಿ ತಾಯಪ್ಪ ಬಿನ್ ಮುನಿಯಪ್ಪ ಎಂಬುವರಿಂದ 0-3-08 ಎಕರೆ,ಲಲಿತಮ್ಮ ಕೋಂ ಬಾಬುರೆಡ್ಡಿ ಎಂಬುವರಿಂದ 0-02-08 ಎಕರೆ ತೆರವುಗೊಳಿಸಲಾಗಿದೆ.

ಬಂಗಾರಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಕೊಪ್ಪ ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 246 ರಲ್ಲಿ ಕಾಶಿ ಬಿನ್ ಚಿನ್ನಕಂದಪ್ಪ ಎಂಬುವರಿಂದ 0-05 ಎಕರೆ,ಗಂಗಾಧರ್ ಬಿನ್ ವೆಂಕಟಯ್ಯ ಎಂಬುವರಿಂದ 0-02 ಎಕರೆ, ಕಣ್ಣಪ್ಪ ಬಿನ್ ಪರಶುರಾಮ ಎಂಬುವರಿಂದ 0-01 ಎಕರೆ, ಕೇಶವ ಎಂಬುವರಿಂದ 0-05 ಎಕರೆ, ವೆಂಕಟೇಶ ಎಂಬುವರಿಂದ 0-05 ಎಕರೆಯನ್ನು ತೆರವುಗೊಳಿಸಲಾಗಿದೆ.

ಎಸ್ ಜಿ ಕೋಟೆ ಗ್ರಾಮದ ಗುಂಡುತೋಪು ಜಮೀನಾದ ಸರ್ವೆ ನಂಬರ್ 42 ರಲ್ಲಿ ಪಾಪಣ್ಣ ಬಿನ್‍ಶಿವಪ್ಪ  ಎಂಬುವರಿಂದ 0-10ಎಕರೆ, ಮಂಜುನಾಥ್ ಬಿನ್ ನಾರಾಯಣಪ್ಪ ಎಂಬುವರಿಂದ 0-20 ಎಕರೆ, ಶ್ರೀನಿವಾಸ್ ಬಿನ್ ಚಿಕ್ಕಗಂಗಪ್ಪ ಎಂಬುವರಿಂದ 2-00 ಎಕರೆ, ತಂಗರಾಜ್ ಬಿನ್ ವರದರಾಜ್ ಎಂಬುವರಿಂದ 0-05 ಎಕರೆ, ನಾರಾಯಣಸ್ವಾಮಿ ಬಿನ್ ಜಯರಾಮಯ್ಯ ಎಂಬುವರಿಂದ 0-02 ಎಕರೆ, ವೆಂಕಟಮುನಿಯಪ್ಪ ಬಿನ್ ಚಿಕ್ಕಗಂಗಪ್ಪ ಎಂಬುವರಿಂದ 0-05 ಎಕರೆ , ನಾರಾಯಣಸ್ವಾಮಿ ಬಿನ್ ಚಿಕ್ಕಗಂಗಪ್ಪ ಎಂಬುವರಿಂದ 0-05 ಎಕರೆ, ಹಾಗೂ ಡಿ ಕೆ ಹಳ್ಳಿ ಪ್ಲಾಂಟೆಷನ್ ರಾಜಕಾಲುವೆಗೆ ಸೇರಿದ ಸರ್ವೆ ನಂಬರ್ 5/1 ಮತ್ತು 5/2 ರಲ್ಲಿ ಶ್ರೀಮತಿ ರಾಣಿ ಎಂಬುವರಿಂದ 6 ಅಡಿಗಳನ್ನು ತೆರವುಗೊಳಿಸಲಾಗಿರುತ್ತದೆ.

ಕೆಜಿಎಫ್ ತಾಲ್ಲೂಕಿನ ರಾಬರ್ಟ್‍ಸನ್ ಪೇಟೆ ಹೋಬಳಿಯ ಘಟ್ಟಕಾಮದೇನಹಳ್ಳಿ ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 134ರಲ್ಲಿ ಎನ್ ರಮೇಶ್ ಬೆಂಗಳೂರು ಹಾಗೂ ಎನ್ ರಾಮು ಪೆದ್ದಪಲ್ಲಿ ಗ್ರಾಮ ಇವರಿಂದ 0-03 ಎಕರೆ, ಸರ್ವೆ ನಂಬರ್ 49ರಲ್ಲಿ ವೇಣುಗೋಪಾಲ್,ನಿರಂಜನ್,ಸತೀಶ್ ಎಂಬುವರಿಂದ 0-02ಎಕರೆ, ಹಾಗೂ ಬೇತಮಂಗಲ ಹೋಬಳಿಯ ಬೇತಮಂಗಲ ಸರ್ಕಾರಿ ಕುಂಟೆ ಸರ್ವೆ ನಂಬರ್ 556ರಲ್ಲಿ ಸುಜಾತಮ್ಮ ಕೋಂ ಸೀತರಾಮಪ್ಪ ಎಂಬುವರಿಂದ 0-10 ಎಕರೆ, ಹಾಗೂ ಕ್ಯಾಸಂಬಳ್ಳಿ ಹೋಬಳಿಯ ಸುವರ್ಣಹಳ್ಳಿ ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 51 ರಲ್ಲಿ ನಾರಾಯಣಪ್ಪ ಬಿನ್ ಮುನಿವೆಂಕಟಪ್ಪ ಎಂಬುವರಿಂದ 0-01-08 ಎಕರೆ ಜಮೀನನ್ನು ತೆರವುಗೊಳಿಸಲಾಗಿದೆ.

ಮುಳಬಾಗಿಲು ತಾಲ್ಲೂಕಿನ ಕಸಬಾ ಹೋಬಳಿಯ ಹೊಸಹಳ್ಳಿ ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 21 ರಲ್ಲಿ ಆನಂದಪ್ಪ ಬಿನ್ ನಾರಾಯಣಪ್ಪ ಎಂಬುವರಿಂದ 0-03ಎಕರೆ, ಬೈರಕೂರು ಹೋಬಳಿಯ ಚೀಕೂರು ಹೊಸಹಳ್ಳಿ ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 96 ರಲ್ಲಿ ವಿ ಜೆ ಜಯರಾಮರೆಡ್ಡಿ ಬಿನ್ ವೆಂಕÀಟರೆಡ್ಡಿ ಎಂಬುವರಿಂದ 0-10 ಎಕರೆ, ರೆಡ್ಡಪ್ಪ ಬಿನ್ ಮುನಿಶಾಮಿ ಎಂಬುವರಿಂದ 0-04 ಎಕರೆ, ಚಿಕ್ಕರಾಮಯ್ಯ ಬಿನ್ ಗೋಪಾಲರೆಡ್ಡಿ ಎಂಬುವರಿಂದ 0-02 ಎಕರೆ ಹಾಗೂ ಆವಣಿ ಹೋಬಳಿಯ ದೊಡ್ಡಮಾದೇನಹಳ್ಳಿ ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 60 ರಲ್ಲಿ ರಾಮಚಂದ್ರಪ್ಪ ಬಿನ್ ತಿಮ್ಮಪ್ಪ ಎಂಬುವರಿಂದ 0-04ಎಕರೆ, ಶಂಕರಪ್ಪ ಬಿನ್ ಗೋವಿಂದಪ್ಪ ಎಂಬುವರಿಂದ 0-06 ಎಕರೆ, ವೆಂಕಟೇಶಪ್ಪ ಬಿನ್ ನಾರಾಯಣಪ್ಪ ಎಂಬುವರಿಂದ 0-03 ಎಕರೆ, ಲಕ್ಷ್ಮಪ್ಪ ಬಿನ್ ಗಂಟ್ಲಪ್ಪ ಎಂಬುವರಿಂದ 0-07 ಎಕರೆ, ಹಾಗೂ ದುಗ್ಗಸಂದ್ರ ಹೋಬಳಿಯ ಉತ್ತನೂರು ಗ್ರಾಮದ ಸ್ಮಶಾನ ಭೂಮಿಯಾದ ಸರ್ವೆ ನಂಬರ್ 146ರಲ್ಲಿ ನಾರಾಯಣಸ್ವಾಮಿ ಬಿನ್ ಮುನಿಯಪ್ಪ ಎಂಬುವರಿಂದ 0-03ಎಕರೆ, ವೆಂಕಟೇಶಪ್ಪ ಬಿನ್ ರಾಮಪ್ಪ ಎಂಬುವರಿಂದ 0-02-08 ಎಕರೆ ಭೂಮಿಯನ್ನು ತೆರೆವುಗೊಳಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಸಿ ಸತ್ಯ ಭಾಮ ಅವರು ತಿಳಿಸಿದ್ದಾರೆ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ


 

Read These Next

ಲಕ್ಷಣರಹಿತ ರೋಗಿಗಳಿಗೆ ಇನ್ಮುಂದೆ ಹೋಂ ಐಸೋಲೇಶನ್ 1ಲಕ್ಷ ಆಂಟಿಜೆನ್ ಕಿಟ್ ಖರೀದಿಗೆ ನಿರ್ಧಾರ: ಸಚಿವ ಶ್ರೀರಾಮುಲು

ಲಕ್ಷಣರಹಿತ ರೋಗಿಗಳಿಗೆ ಇನ್ಮುಂದೆ ಹೋಂ ಐಸೋಲೇಶನ್ 1ಲಕ್ಷ ಆಂಟಿಜೆನ್ ಕಿಟ್ ಖರೀದಿಗೆ ನಿರ್ಧಾರ: ಸಚಿವ ಶ್ರೀರಾಮುಲು