ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಿ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ

Source: SO News | By Laxmi Tanaya | Published on 14th January 2022, 9:43 PM | State News | Don't Miss |

ಧಾರವಾಡ : ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಜನನಿಬಿಡ ಹಾಗೂ ವಾಹನ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ಜಿಬ್ರಾ ಕ್ರಾಸಿಂಗ್ ಅಳವಡಿಸಬೇಕು. ಅಪಾಯಕಾರಿ ರಸ್ತೆ ಉಬ್ಬುಗಳನ್ನು ವೈಜ್ಞಾನಿಕವಾಗಿ ಸರಿಪಡಿಸಿ, ರಿಫ್ಲೆಕ್ಟರುಗಳನ್ನು ಅಳವಡಿಸಬೇಕು ಎಂದು   ಮಹಾನಗರಪಾಲಿಕೆ ಹಾಗೂ  ಲೋಕೋಪಯೋಗಿ ಇಲಾಖೆಯ  ರಾಷ್ಟ್ರೀಯ ಹೆದ್ದಾರಿ ವಿಭಾಗದ  ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಸೂಚಿಸಿದರು . 

ವಿಡಿಯೋ ಸಂವಾದದ ಮೂಲಕ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಧಾರವಾಡ -ಅಮ್ಮಿನಭಾವಿ- ಸವದತ್ತಿ  ರಸ್ತೆಯಲ್ಲಿರುವ ಅವೈಜ್ಞಾನಿಕ ಉಬ್ಬುಗಳು   ಅಪಾಯಕಾರಿಯಾಗಿದ್ದು , ಒಂದು ವಾರದೊಳಗೆ ಅವುಗಳನ್ನು ತೆರವುಗೊಳಿಸಬೇಕು  ಎಂದು  ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಸೂಚಿಸಿದರು.

ನೈಋತ್ಯ ರೇಲ್ವೆಯ ವಿಭಾಗೀಯ ರೇಲ್ವೆ ವ್ಯವಸ್ಥಾಪಕ ಅರವಿಂದ ಮಾಳಖಂಡ ಮಾತನಾಡಿ,  ರೇಲ್ವೆ ಸ್ಟೇಶನ್ ಸುತ್ತಮುತ್ತ  ಹಾಗೂ ರೈಲ್ವೆ ಸ್ಟೇಶನ್‌ಗೆ ಆಗಮಿಸುವ ರಸ್ತೆಗಳಲ್ಲಿ ಅನಗತ್ಯ ವಾಹನಗಳ ನಿಲುಗಡೆಯಾಗುತ್ತಿವೆ. ಅಂಗಡಿ - ಮುಂಗಟ್ಟುಗಳು ರಸ್ತೆಯನ್ನು ಆಕ್ರಮಿಸಿಕೊಂಡಿರುವುದರಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ ಎಂದು  ಸಭೆಯ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಗಳು ಸ್ಪಂದಿಸಿ , ಮಹಾನಗರ ಪಾಲಿಕೆ ಹಾಗೂ  ಪೊಲೀಸ್ ಇಲಾಖೆ ಅಗತ್ಯ ಕ್ರಮ ಜರುಗಿಸಲು ನಿರ್ದೇಶನ ನೀಡಿದರು.

 ರಸ್ತೆ ಸುರಕ್ಷತಾ ಬಾಬತ್ತಿನಲ್ಲಿ ಬಾಕಿ ಉಳಿದಿರುವ ಅನುದಾನವನ್ನು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ  ರಸ್ತೆಯ ಉಬ್ಬುಗಳಿಗೆ ರಿಫ್ಕೆಕ್ಟರ್‌ಗಳನ್ನು  ಅಳವಡಿಸಲು ಬಳಸಬೇಕು. ಪಾಲಿಕೆಯ ಅನುದಾನವನ್ನೂ ಸಹ ಹೆಚ್ಚುವರಿಯಾಗಿ ಬಳಸಿಕೊಳ್ಳಬೇಕು ಎಂದರು.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ   2021 ರ ಸೆಪ್ಟಂಬರ್‌ನಿಂದ  ಡಿಸೆಂಬರ್ ರವರೆಗೆ ವಿವಿಧ ವರ್ಗದ ಸಾರಿಗೆ ವಾಹನಗಳಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ನೀಡಲಾದ ರಹದಾರಿಗಳಿಗೆ ಘಟನೋತ್ತರ ಅನುಮೋದನೆಯನ್ನು ನೀಡಲಾಯಿತು.

 ವಿ.ಆರ್‌.ಎಲ್‌.ಸಮೂಹ ಸಂಸ್ಥೆಯವರು ಕ್ಯಾರೇಜ್ ಬೈ ರೋಡ್ ಆಕ್ಟ್ ಅಡಿಯಲ್ಲಿ ಲೈಸೆನ್ಸ್ ನವೀಕರಣಕ್ಕಾಗಿ ಸಲ್ಲಿಸಲಾದ ಅರ್ಜಿಯನ್ನು ಸಭೆಯಲ್ಲಿ  ಪರಿಶೀಲಿಸಿ ಮುಂದಿನ ಅವಧಿಗೆ ನವೀಕರಿಸಲು ಅನುಮೋದನೆ ನೀಡಲಾಯಿತು .
  
ಪಿಂಕ್ ಆಟೋರಿಕ್ಷಾ ಪರಿಕಲ್ಪನೆಯಡಿಯಲ್ಲಿ ಮಹಿಳಾ ಆಟೋ ರಿಕ್ಷಾ ಚಾಲಕರುಗಳಿಗೆ ಉತ್ತೇಜನ ನೀಡಿ, ಮಹಿಳಾ ಸಬಲೀಕರಣಗೊಳಿಸಲು ಇನ್ನರ್‌ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಸಂಸ್ಥೆಯು  ಮಹಿಳಾ ಆಟೋರಿಕ್ಷಾ ಚಾಲಕರಿಗೆ ಹೊಸದಾಗಿ ರಹದಾರಿ ನೀಡುವಂತೆ ಮಾಡಿಕೊಂಡಿರುವ ಮನವಿಯನ್ನು ಪ್ರಾಧಿಕಾರದಲ್ಲಿ ಪರಿಶೀಲಿಸಿ , ರಹದಾರಿ ಮಂಜೂರಾತಿಗೆ ಘಟನೋತ್ತರ ಅನುಮೋದನೆಯನ್ನು ನೀಡಲಾಯಿತು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಬಿ.ಶಂಕರಪ್ಪ,ಕೆ.ದಾಮೋದರ , ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ.ಚೌಡಣ್ಣವರ ಮತ್ತಿತರರು ಇದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...