ಭಟ್ಕಳ ಸಂಶುದ್ಧೀ‌ನ್ ಸರ್ಕಲ್ ಬಳಿ ಸ್ವಚ್ಚತೆ. ಅಧಿಕಾರಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ಭಾಗಿ.

Source: SO News | By Laxmi Tanaya | Published on 10th October 2020, 3:22 PM | Coastal News | Don't Miss |

ಭಟ್ಕಳ : ಅಕ್ಟೋಬರ್ 2 ಗಾಂಧಿಜಯಂತಿಯಿಂದ ಆರಂಭವಾಗಿದ್ದ ಸ್ವಚ್ಚತೆ ಕಾರ್ಯಕ್ರಮ ಇಂದು ಭಟ್ಕಳ ಪಟ್ಟಣದ  ಸಂಶುದ್ದೀನ್ ಸರ್ಕಲ್ ಆಸುಪಾಸಿನಲ್ಲಿ ಸ್ವಚ್ಚತೆ ಕೈಗೊಳ್ಳಲಾಯಿತು.

ಭಟ್ಕಳ ಪುರಸಭೆ, ತಾಲೂಕು ಆಡಳಿತ, ಜೆಸಿಐ, ಆಲ್ ಇಂಡಿಯಾ ಮೆಸೆಜ್ ಆಪ್ ಹ್ಯುಮಾನಿಟಿ, ಜಾಮಿಯಾ ಇಸ್ಲಾಮಿಯಾ  ಜಂಟಿಯಾಗಿ ಸ್ವಚ್ಚತೆಯಲ್ಲಿ ಪಾಲ್ದಗೊಂಡಿದ್ದರು. ಇಂದು ನೂರಾರು ಜನರು ಸ್ವಚ್ಚತೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಸಾಹಿಲ್ ಆನ್ಲೈನ್ ಜೊತೆ ಮಾತನಾಡಿದ ಮೌಲಾನಾ ಕೈಯಿಸ್ ನದ್ವಿ , ಇಸ್ಲಾಂ ಧರ್ಮದಲ್ಲಿ ಸ್ವಚ್ಚತೆಗೆ ಆದ್ಯತೆ ಇದೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರಾದಿಯಾಗಿ ಎಲ್ಲಾ ಧರ್ಮೀಯರು‌ ಭಟ್ಕಳದಲ್ಲಿ ಒಂದಾಗಿ ಸ್ವಚ್ಚತೆ ಮಾಡಬೇಕು. ತಮ್ಮತಮ್ಮ ಮನೆಯಲ್ಲಿ ಕೂಡ ಸ್ವಚ್ಚವಾಗಿಟ್ಟುಕೊಂಡು ಆರೋಗ್ಯಕರ ಜೀವನ‌ ನಡೆಸಬೇಕಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ದೇವರಾಜ, ವೇಣುಗೋಪಾಲ ಶಾಸ್ತ್ರಿ, ಸುಜಿಯಾ ಸೋಮನ್, ಭಟ್ಕಳ ಜಾಮಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು, ಜೆಸಿಐನ ಅಬ್ದುಲ್ ಜಬ್ಬರ್, ಸೋಶಿಯಲ್ ವರ್ಕರ್ ನಿಸಾರ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...