ಜೂನ್ 27ರಂದು ಸಿಜಿಕೆ ರಂಗ ಪುರಸ್ಕಾರ:ಭಟ್ಕಳದ ಅಶೋಕ ಮಹಾಲೆ ಆಯ್ಕೆ

Source: S.O. News Service | By MV Bhatkal | Published on 25th June 2019, 8:00 PM | Coastal News | Don't Miss |

ಭಟ್ಕಳ:ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮ ಭಟ್ಕಳದ ದಿ ನ್ಯೂ ಇಂಗ್ಲೀಷ್ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ಜೂನ್ 27ರಂದು ಬೆಳಿಗ್ಗೆ 10 ಗಟೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕ ಹಾಗೂ ಅಂಕೋಲಾದ ಸಂಗಾತಿ ರಂಗಭೂಮಿಯ ಕಾರ್ಯಾಧ್ಯಕ್ಷ ಕೆ.ರಮೇಶ್ ತಿಳಿಸಿದ್ದಾರೆ. ಅಉರು ಇಲ್ಲಿನ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ಬೀದಿನಾಟಕ ಅಕಾಡೆಮಿ, ಸಂಗಾತಿ ರಂಗಭೂಮಿ ಅಂಕೋಲಾ, ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಪತ್ರಕರ್ತರ ಸಂಘ ಭಟ್ಕಳ, ದಿ ನ್ಯೂ ಇಂಗ್ಲೀಷ್ ಪದವಿ ಪೂರ್ವ ಕಾಲೇಜು ಮತ್ತು ಪ್ರಾರ್ಥನಾ ಪ್ರತಿಷ್ಠಾನ ಭಟ್ಕಳದ ಸಹಯೋಗದಲ್ಲಿ ಸಿಜಿಕೆ ಬೀದಿ ರಂಗದಿನದ ಪ್ರಯುಕ್ತ ಸಿಜಿಕೆ ರಂಗ ಪುರಸ್ಕಾರ ಪ್ರದಾನ ನಡೆಯಲಿದೆ. ಈ ಪುರಸ್ಕಾರಕ್ಕೆ  ಭಟ್ಕಳದ ಹಿರಿಯ ರಂಗಕರ್ಮಿ ಅಶೋಕ ಮಹಾಲೆ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಭಟ್ಕಳ ತಾಲೂಕಿನಲ್ಲಿ  ನಾಟಕ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕೆ.ಆರ್.ನಾಯ್ಕ, ಎಸ್.ಎನ್.ದೇವಡಿಗ,ರಾಮನಾಥ್ ಮಹಾಲೆ, ಗೋವಿಂದ ದೇವಡಿಗ, ನಜೀರ್ ಸಾಬ್ ಈ ಐವರಿಗೆ ಸನ್ಮಾನಿಸಿ ಗೌರವಿಸಲಿದೆ. ಕಾರ್ಯಕ್ರಮವು ಜೂನ್ 27ನೇ ತಾರೀಖಿನಂಧು ಭಟ್ಕಳದ ದಿ ನ್ಯೂ ಇಂಗ್ಲೀಷ್ ಪದವಿ ಪೂರ್ವ ಕಾಲೇಜಿನಲ್ಲಿ ಮುಂಜಾನೆ 10 ಗಂಟೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಲಿದ್ದು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಿ ನ್ಯೂ ಇಂಗ್ಲೀಷ್ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ವೀರೇಂದ್ರ ಶಾನಭಾಗ , ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್, ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ ಹಾಗೂ ಉದ್ಯಮಿ ರಾಘವೇಂದ್ರ ಎಮ್.ನಾಯ್ಕ ಉಪಸ್ಥಿತರಿರಲಿದ್ದಾರೆ ಎಂದು  ಕಾರ್ಯಕ್ರಮದ ಸಂಘಟಕ ಹಾಗೂ ಅಂಕೋಲಾದ ಸಂಗಾತಿ ರಂಗಭೂಮಿಯ ಕಾರ್ಯಾಧ್ಯಕ್ಷ ಕೆ.ರಮೇಶ್ ತಿಳಿಸಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ಪತ್ರಕರ್ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ, ನ್ಯೂ ಇಂಗ್ಲೀಷ್ ಪ.ಪೂ.ಕಾಲೇಜಿನ ಪ್ರಾಚಾರ್ಯ ಈರೇಂದ್ರ ಶಾನಭಾಗ ಉಪಸ್ಥಿತರಿದ್ದರ

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...