ಪ್ಯಾಂಗಾಂಗ್‌ನ ಅತಿಕ್ರಮಿತ ಪ್ರದೇಶದಲ್ಲಿ ಚೀನಾದಿಂದ ಸೇತುವೆ ನಿರ್ಮಾಣ; ಕೇಂದ್ರ ಸರಕಾರದ ಖಂಡನೆ

Source: VB News | By I.G. Bhatkali | Published on 7th January 2022, 4:57 PM | National News |

ಹೊಸದಿಲ್ಲಿ: ಪೂರ್ವ ಲಡಾಖ್‌ನ   ಪ್ಯಾಂಗಾಂಗ್ ಸರೋವರಕ್ಕೆ ಚೀನಾ ಸೇತುವೆ ನಿರ್ಮಿಸುತ್ತಿರುವುದನ್ನು ಭಾರತ ಗುರುವಾರ ಬಲವಾಗಿ ಖಂಡಿಸಿದೆ. 

ಚೀನಾವು ಕಳೆದ 60 ವರ್ಷಗಳಿಂದ ಅದು ಅಕ್ರಮವಾಗಿ  ಸ್ವಾಧೀನದಲ್ಲಿಟ್ಟುಕೊಂಡಿರುವ ಪ್ರದೇಶದಲ್ಲಿ ಈ ಸೇತುವೆಯನ್ನು ನಿರ್ಮಿಸುತ್ತಿದೆಯೆಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಕ್ರೋಶ ವ್ಯಕ್ತಪಡಿಸಿದೆ.

“ಪ್ಯಾಂಗಾಂಗ್ ಸರೋವರದ ಚೀನಾ ಭಾಗದಿಂದ ಸೇತುವೆ 66 ನಿರ್ಮಾಣಗೊಳ್ಳುತ್ತಿರುವುದರ ಬಗ್ಗೆ ಕೇಂದ್ರ ಸರಕಾರವು ನಿಕಟವಾದ ನಿಗಾವಿರಿಸಿದೆ. 60 ವರ್ಷಗಳಿಂದ ಚೀನಾದ ಅಕ್ರಮ ಸ್ವಾಧೀನದಲ್ಲಿರುವ ಪ್ರದೇಶಗಳಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದೆ' ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಆರಿಂದಮ್ ಬಾಗ್‌ಚಿ ಗುರುವಾರ ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

“ನಿಮಗೆ ತಿಳಿದಿರುವಂತೆ ಭಾರತವು ಚೀನಾದ ಈ ಕಾನೂನು ಬಾಹಿರ ಅತಿಕ್ರಮಣವನ್ನು ಯಾವತ್ತೂ ಒಪ್ಪಿಕೊಂಡಿಲ್ಲ ಹಾಗೂ ನಮ್ಮ ದೇಶದ ಭದ್ರತಾ ಹಿತಾಸಕ್ತಿಗಳು ಸಂಪೂರ್ಣವಾಗಿ 

ಸುರಕ್ಷಿತವಾಗಿರುವುದನ್ನು ಖಾತರಿಪಡಿಸಲು ಕೇಂದ್ರ ಸರಕಾರವು ಅಗತ್ಯವಿರುವ ಎಲ್ಲ ಹೆಜ್ಜೆಗಳನ್ನು ಇಡಲಿದೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಭಾರತೀಯ ಸಶಸ್ತ್ರ ಪಡೆಗಳಿಗೆ ಉತ್ತಮವಾದ ವ್ಯೂಹಾತ್ಮಕ ಬೆಂಬಲವನ್ನು ಒದಗಿಸುವುದಾಗಿ ಗಡಿ ಮೂಲ ಸೌಕರ್ಯ (ರಸ್ತೆಗಳು ಹಾಗೂ ಸೇತುವೆಗಳು) ಅಭಿವೃದ್ಧಿಗಾಗಿ ನೀಡಲಾಗು ವ ಹಣಕಾಸು ನೆರವಿನಲ್ಲಿ ಗಣನೀಯ ಏರಿಕೆ ಮಾಡಲಾಗುವುದೆಂದು ಬಾಗ್ಚಿ ತಿಳಿಸಿದರು.

ಅರುಣಾಚಲ ಪ್ರದೇಶದ ಕೆಲವು ಭಾಗಗಳಿಗೆ ಚೀನಾವು ಮರುನಾಮಕರಣ ಮಾಡಿರುವುದನ್ನೂ ಬಾಗ್ಚಿ ಖಂಡಿಸಿದರು. ಪೂರ್ವ ಲಡಾಕ್‌ ಗಡಿ ವಿವಾದವನ್ನು ಚೀನಾವು ಭಾರತದೊಂದಿಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದವರು ಹೇಳಿದರು.

ದೇಶಭ್ರಷ್ಟ ಟಿಬೆಟ್ ಸಂಸತ್ ಕಳೆದ ವಾರ ದಿಲ್ಲಿಯಲ್ಲಿ ಆಯೋಜಿಸಿದ ಸತ್ಕಾರಕೂಟದಲ್ಲಿ ಪಾಲ್ಗೊಂಡಿದ್ದ ಭಾರತೀಯ ಸಂಸದರಿಗೆ ಚೀನಾದ ರಾಯಭಾರಿ ಕಚೇರಿಯು ಬರೆದ ಪತ್ರದ ಧಾಟಿಯು ಸ್ವೀಕಾರಾರ್ಹವಲ್ಲವೆಂದು ಅರಿಂದಮ್ ತಿಳಿಸಿದರು.

ಚೀನಾವು ಪೂರ್ವ ಲಡಾಕ್‌ನ ಪ್ಯಾಂಗಾಂಗ್ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿರುವುದನ್ನು ಸೂಚಿಸುವ ಉಪಗ್ರಹ ಚಿತ್ರಗಳು ಭೌಗೋಳಿಕ-ಬೇಹುಗಾರಿಕಾ ತಜ್ಞ ಡ್ಯಾಮಿಯೆನ್ ಸೈಮೊನ್ ಅವರಿಗೆ ಲಭ್ಯವಾಗಿರುವುದಾಗಿ ಎನ್‌ಡಿಟಿವಿ ಸುದ್ದಿವಾಹಿನಿಯು ಸೋಮವಾರ ವರದಿ ಮಾಡಿತ್ತು.

Read These Next

ಹೈದರಾಬಾದ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ; ಆರೋಪಿಗಳ ಎನ್‌ಕೌಂಟರ್‌ ನಕಲಿ. ಸುಪ್ರೀಂ ಕೋರ್ಟ್ ನೇಮಿತ ಆಯೋಗ

ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನಿಂದ ...

ಶಾಲಾ ಪಠ್ಯ ಪುಸ್ತಕಗಳು ಆರೆಸಸ್ ಮಯ; ಕೇಜ್ರಿವಾಲ್, ಭಗವಂತ್ ಮಾನ್ ಸಹಿತ ಹಲವು ಮುಖಂಡರಿಂದ ಆಕ್ರೋಶ

ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ರಂತಹ ರಾಷ್ಟ್ರ ಪ್ರೇಮಿಗಳ ಅಧ್ಯಾಯಗಳನ್ನು ಕಿತ್ತು ಹಾಕಿ, ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವೂ ...

ದೇಶದ್ರೋಹ ಕಾನೂನಿಗೆ ತಡೆ; ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪು; ಪುನರ್‌ಪರಿಶೀಲನೆ ಪೂರ್ಣಗೊಳ್ಳುವವರೆಗೆ ವಿರಾಮ

ಸರಕಾರದಿಂದ ದೇಶದ್ರೋಹ ಕಾನೂನಿನ ಪುನರ್‌ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಈ ವಿವಾದಾತ್ಮಕ ಕಾನೂನಿನಿಂದ ಕೇಂದ್ರ ಮತ್ತು ರಾಜ್ಯ ...