ಚೀನಾ: ಬಸ್ ಅಪಘಾತದಲ್ಲಿ 27 ಸಾವು, ಈ ವರ್ಷ ದೇಶ ಕಂಡ ಅತ್ಯಂತ ಭೀಕರ ರಸ್ತೆ ಅಪಘಾತ

Source: AFP | By MV Bhatkal | Published on 19th September 2022, 12:30 AM | Global News |

ಬೀಜಿಂಗ್: ನೈರುತ್ಯ ಚೀನಾದಲ್ಲಿ ಭಾನುವಾರ ಸಂಭವಿಸಿದ ಬಸ್ ಅಪಘಾತದಲ್ಲಿ 27 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಇದು ಈ ವರ್ಷ ಇದುವರೆಗಿನ ದೇಶದ ಅತ್ಯಂತ ಭೀಕರ ರಸ್ತೆ ಅಪಘಾತ ಎನ್ನಲಾಗಿದೆ.

ಒಟ್ಟು 47 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಗ್ರಾಮೀಣ ಗೈಝೌ ಪ್ರಾಂತ್ಯದ ಹೆದ್ದಾರಿಯಲ್ಲಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನೆಯಲ್ಲಿ 27 ಜನರು ಸಾವಿಗೀಡಾಗಿದ್ದು, ಉಳಿದ 20 ಜನ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವಾರು ಜನಾಂಗೀಯ ಅಲ್ಪಸಂಖ್ಯಾತರ ನೆಲೆಯಾಗಿರುವ ಗುಯಿಝೌನ ಬಡ, ದೂರದ ಮತ್ತು ಪರ್ವತ ಭಾಗ ಕಿಯಾನ್ನಾನ್ ಪ್ರಿಫೆಕ್ಚರ್‌ನಲ್ಲಿ ಅಪಘಾತ ಸಂಭವಿಸಿದೆ.

ಜೂನ್‌ನಲ್ಲಿ, ಗೈಝೌ ಪ್ರಾಂತ್ಯದಲ್ಲಿ ಹೈಸ್ಪೀಡ್ ರೈಲು ಹಳಿತಪ್ಪಿದ ನಂತರ ಚಾಲಕನೊಬ್ಬ ಮೃತಪಟ್ಟಿದ್ದ ಮತ್ತು ಮಾರ್ಚ್‌ನಲ್ಲಿ ಚೀನಾದ ಪ್ರಯಾಣಿಕ ವಿಮಾನ ಪತನದಲ್ಲಿ ಎಲ್ಲಾ 132 ಜನರು ಸಾವಿಗೀಡಾಗಿದ್ದರು. ಇದು ದಶಕಗಳಲ್ಲಿ ಚೀನಾದಲ್ಲಿ ನಡೆದ ಅತ್ಯಂತ ಭೀಕರ ವಾಯುಯಾನ ಅಪಘಾತವಾಗಿದೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...