ವಿದ್ಯಾರ್ಥಿಗಳಲ್ಲಿನ  ವ್ಯವಹಾರಿಕ ಜ್ಞಾನಕ್ಕೆ ಮಕ್ಕಳ ಸಂತೆ ಸಹಕಾರಿ- ಡಾ.ಸುರೇಶ ನಾಯಕ

Source: sonews | By Staff Correspondent | Published on 8th July 2019, 6:55 PM | Coastal News | Don't Miss |

ಭಟ್ಕಳ: ವಿದ್ಯಾರ್ಥಿ ದೆಸೆಯಲ್ಲಿಯೆ ಮಕ್ಕಳು ವಿದ್ಯಾಭ್ಯಾಸದೊಂದಿಗೆ ವ್ಯವಹಾರಿಕ ಜ್ಞಾನವನ್ನು ಪಡೆಯುವಂತಾಗಬೇಕು. ಇದರಿಂದ ಕಲಿಕೆಯ ಜೊತೆ ವ್ಯಕ್ತಿತ್ವದ ವಿಕಸನ ಸುಲಭವಾಗುತ್ತದೆ ಎಂದು ಭಟ್ಕಳ ಎಜುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ. ಸುರೇಶ ನಾಯಕ ಹೇಳಿದರು.

ಅವರು ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಹಾಗೂ ಸಂವಹನ ಕೌಶಲವನ್ನು ಅಭಿವೃದ್ಧಿಗೊಳಿಸಲು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದ ಪ್ರಯತ್ನ ಶ್ಲಾಘನೀಯ ಎಂದರು. ವಿವಿಧ ತರಹದ ತರಕಾರಿ, ಸಸ್ಯಗಳು, ಹಣ್ಣುಗಳು, ದಿನೋಪಯೋಗಿ ವಸ್ತುಗಳನ್ನು ಮಕ್ಕಳು ಮಾರಾಟ ಮಾಡಿದರು.

ವಿದ್ಯಾರ್ಥಿಗಳು ಮಾರಾಟ ಮಾಡಿದ ವಿವಿದ ಗೃಹಪಯೋಗಿ ವಸ್ತುಗಳನ್ನು ಡಾ. ಸುರೇಶ ನಾಯ್ಕ ಖರೀಧಿಸಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ರೂಪಾ ರಮೇಶ ಖಾರ್ವಿ ಹಾಗೂ ಶಿಕ್ಷಕಕರು ಇದ್ದರು.
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...