'ಬಾಲಕನ ರಕ್ಷಣೆ: ಪತ್ತೆಗೆ ಮನವಿ'

Source: sonews | Published on 22nd July 2019, 8:20 PM | Coastal News | Don't Miss |

ಭಟ್ಕಳ: ಬೈಂದೂರು-ಶಿರೂರಿನ ಮೈದಿನಪುರದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿರುವ, ಮಾತು ಬಾರದ ಸುಮಾರು 16 ವರ್ಷದ ಅಪರಿಚಿತ ಬಾಲಕನನ್ನು ಆರೋಗ್ಯದ ಸಮಸ್ಯೆ ಕಾರಣದಿಂದ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಲಾಗಿದೆ. ಗುಣಮುಖನಾದ ಬಳಿಕ ಬಾಲಕನನ್ನು ಶಂಕರಪುರದ ವಿಶ್ವಾಸದ ಮನೆ ಪುರ್ನವಸತಿ ಕೇಂದ್ರದಲ್ಲಿ ನೆಲೆ ಕಲ್ಪಿಸಲು ಅಧಿಕಾರಿಗಳು ಯೋಚಿಸಿದ್ದಾರೆಂದು ತಿಳಿದು ಬಂದಿದೆ.  

ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಉಡುಪಿ ಜಿಲ್ಲಾ ನಾಗರಿಕ ಸಮಿತಿ ಬಾಲಕನ ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದೆ. ಕಾರ್ಯಚರಣೆಯಲ್ಲಿ ಅಧಿಕಾರಿಗಳಾದ ರೊನಾಲ್ಡ್ ಪುರ್ಟಾಡೊ, ಮುರುಳಿಧರ್ ಶೆಟ್ಟಿ, ಮೋಹನ್ ಕುಮಾರ್, ಯೋಗಿಶ್, ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು ಪಾಲ್ಗೊಂಡಿದ್ದಾರೆ. ಬಾಲಕನ ಸಂಬಂಧಿಕರು ತುರ್ತಾಗಿ ಉಡುಪಿ ನಿಟ್ಟೂರು ಬಾಲಕಿಯರ ಬಾಲ ಮಂದಿರದ- ಮಕ್ಕಳ ಕಲ್ಯಾಣ ಸಮಿತಿ ಕಛೇರಿ, ಅಥವಾ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ಸಂಪರ್ಕಿಸಲು ತಿಳಿಸಲಾಗಿದೆ.   

Read These Next

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್