ಮಕ್ಕಳಮುಂದೆ ಪಾಲಕರು ದುಶ್ಚಟಗಳನ್ನು ಮಾಡಬಾರದು : ಬಿಇಒ ಪಟಗಾರ

Source: S O News Service | By SahilOnline Staff | Published on 16th February 2020, 10:17 PM | Coastal News |

ಮುಂಡಗೋಡ : ವಾರ್ಷಿಕ ಸ್ನೇಹ ಸಮ್ಮೇಳನವೆಂದರೆ ಪಾಲಕರಿಗೆ ಹಬ್ಬವಿದ್ದಂತೆ ಪಾಲಕರ ಸಲಹೆ ಮತ್ತು ಶಿಕ್ಷಕರ ಬೋಧನೆಯಿಂದ ಮಕ್ಕಳು ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ ಎಂದು ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ ಹೇಳಿದರು.  
ತಾಲೂಕಿನ ಚಿಗಳ್ಳಿಯಲ್ಲಿ ಶುಕ್ರವಾರ ಜರುಗಿದ ಹುಲಿಗೆಮ್ಮದೇವಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವರ್ಷವಿಡೀ ಮಕ್ಕಳು ಶಾಲೆಯಲ್ಲಿ ಏನು ಸಾಧನೆ ಮಾಡಿದ್ದಾರೆ ಎನ್ನುವ ಕುತೂಹಲ ಎಲ್ಲ ಪಾಲಕರಲ್ಲಿ ಇರುತ್ತದೆ. ಮಕ್ಕಳ ಬೆಳವಣಿಗೆಗೆ ಪಾಲಕರ ಸಹಕಾರ ಮುಖ್ಯ ಎಂದರು.
ಟಿಎಪಿಸಿಎಂಎಸ್‍ನ ಅಧ್ಯಕ್ಷ ಪಿ.ಎಸ್. ಸಂಗೂರಮಠ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯಾದ ಶಿಕ್ಷಣ ಸಂಸ್ಥೆಗಳು ಇರುವುದು ವಿರಳ. ಸಂಸ್ಥೆಗೆ ಬೇಕಾದ ಸೌಕರ್ಯಗಳನ್ನು ಮುಂಬರುವ ದಿನಗಳಲ್ಲಿ ಒದಗಿಸುತ್ತೇನೆ ಎಂದರು. 
ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಬಿಇಒ ವೆಂಕಟೇಶ ಪಟಗಾರ ಮಾತನಾಡಿ ತಮ್ಮ ಮಕ್ಕಳ ಯಶಸ್ಸು ಬಯಸಿ ಕಾರ್ಯಕ್ರಮದಲ್ಲಿ ಪಾಲಕರು ಭಾಗವಹಿಸಿರುವುದು ಉತ್ತಮ ಬೆಳವಣಿಗೆ. ಪಾಲಕರು ಯಾವುದೇ ದುಶ್ಚಟಗಳನ್ನು ಮಕ್ಕಳ ಮುಂದೆ ಮಾಡಬಾರದು ಎಂದರು.
ಸಂಸ್ಥೆಯ ಅಧ್ಯಕ್ಷ ಮಂಜುನಾಥ ವಡ್ಡರ ಮಾತನಾಡಿ ಮನೆಯೇ ಮೊದಲ ಪಾಠ ಶಾಲೆ. ಮಕ್ಕಳನ್ನು ತಿದ್ದಿ-ತೀಡಿ ಮೂರ್ತಿಯನ್ನಾಗಿ ಮಾಡುವುದು ಶಿಕ್ಷಕರ ಜವಾಬ್ದಾರಿ ಎಂದರು.   
ಇದೇ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ, ಪಿ.ಎಸ್. ಸಂಗೂರಮಠ, ರಾಜ್ಯ ಪ್ರಶಸ್ತಿ ಪುರಸ್ಕøತ ಪತ್ರಕರ್ತ ರಾಜಶೇಖರ ನಾಯ್ಕ, ಬಿಇಒ ವೆಂಕಟೇಶ ಪಟಗಾರ ಪತ್ರಕರ್ತ ಶಶಿಧರ ಕುಲಕರ್ಣಿ ಇವರನ್ನು ಸನ್ಮಾನಿಸಲಾಯಿತು ಮತ್ತು ನವೋದಯ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ ಹಾನಗಲ್ಲ, ಮಂಜುನಾಥ ಕಲಾಲ, ಶಕುಂತಲಾ ಅಂತೋಜಿ, ಪ್ರಭಾವತಿ ಹಾಪಡೆ, ಪೂಜಾ, ರೇಖಾ ಹಾನಗಲ್ಲ ಮತ್ತು ಪದ್ಮಾವತಿ ವಡ್ಡರ ಇದ್ದರು.   
ಶಾಲಾ ಮಕ್ಕಳು ಪ್ರಾರ್ಥಿಸಿದರು. ಚನ್ನಮ್ಮ ಕೆರಿಮನಿ ಸ್ವಾಗತಿಸಿದರು. ವಿನಾಯಕ ಕಲಾಲ ಪ್ರಾಸ್ತಾವಿಕ ಮಾತನಾಡಿದರು. ನಿರ್ಮಲಾ ಡೊಳ್ಳೇಶ್ವರ ವಂದಿಸಿದರು. ನಂತರ ಜರುಗಿದ ಮನರಂಜನಾ ಕಾರ್ಯಕ್ರಮಗಳು ಜನಮನ ರಂಜಿಸಿದವು.   

Read These Next

ಭಟ್ಕಳದಲ್ಲಿ ಮತ್ತೊಂದು ಕೋವಿಡ್-19ಪ್ರಕರಣ ಪತ್ತೆಯೊಂದಿಗೆ  ರಾಜ್ಯದಲ್ಲಿ100 ರ ಗಡಿ ತಲುಪಿದ ಕೊರೋನ ಪೀಡಿತರು

ಭಟ್ಕಳ: ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಕೊರೋನ ಮಹಾಮಾರಿ ಮಂಗಳವಾರ (ಬೆಳಿಗ್ಗೆ ೮ಗಂಟೆಗೆ ಇದ್ದಂತೆ) ಮತ್ತೆ ತನ್ನ ...

ಭಟ್ಕಳದ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು 24x7 ಸಹಾಯವಾಣಿ ಸಿದ್ಧ; ಮನೆಬಾಗಿಲಿಗೆ ವೈದ್ಯರ ಸೇವೆ

ಭಟ್ಕಳ: ಕೊರೋನ ಮಹಾಮಾರಿ ಹಿನ್ನೆಲೆಯಲ್ಲಿ ತಾಲೂಕಿನಾದ್ಯನ ಜನರ ಸಮಸ್ಯೆಗಳಿಗೆ ಸ್ಪಂಧಿಸಲು ದಿನ ೨೪ಗಂಟೆಯೂ ಸಹಾಯವಾಣಿ ಸಿದ್ದವಿದ್ದು ...

ಸಾಮಾಜಿಕ ಜಾಲಾತಾಣದಲ್ಲಿ ಕೊರೋನ ಜಿಹಾದ್; ಗಮನಕ್ಕೆ ತಂದಲ್ಲಿ ಕ್ರಮ-ಜಿಲ್ಲಾ ಎಸ್.ಪಿ ಶಿವಪ್ರಕಾಶ

ಭಟ್ಕಳ:ಸಾಮಾಜಿಕ ಜಾಲಾತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಕುರಿತಂತೆ ತಮ್ಮ ಗಮನಕ್ಕೆ ತಂದರೆ ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ...

ಹೈಪೋಕ್ಲೋರೈಡ್ ದ್ರಾವಣ ಸಿಂಪರಣೆ

ಶ್ರಿನಿವಾಸಪುರ: ಅಡ್ಡಗಲ್‍ನ ಗ್ರಾ.ಪಂ. ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪಂಚಾಯಿತಿಗೆ ಸಂಬಂದಿಸಿದ ಕೊಪ್ಪವಾರಿಪಲ್ಲಿ, ...