ಹೊಸದಿಲ್ಲಿ: ಛತ್ತೀಸ್‌ಗಡ: ನಕ್ಸಲರಿಂದ ಭೀಕರ ದಾಳಿ 22 ಯೋಧರು ಬಲಿ

Source: VB | By S O News | Published on 5th April 2021, 7:28 PM | National News |

ಹೊಸದಿಲ್ಲಿ: ಛತ್ತೀಸ್‌ಗಡದ ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಗಳ ನಡುವಿನ ಗಡಿಯಲ್ಲಿ ಇರುವ ಅರಣ್ಯದಲ್ಲಿ ಶನಿವಾರ ನಕ್ಸಲ್ ನಿಗ್ರಹ ಕಾರ್ಯಾಚರಣೆಯ ವೇಳೆ ಮಾವೋವಾದಿಗಳು ನಡೆಸಿದ ಭೀಕರ ದಾಳಿಗೆ ಭದ್ರತಾ ಪಡೆಯ 22ಕ್ಕೂ ಅಧಿಕ ಯೋಧರು ಸಾವನ್ನಪ್ಪಿದ್ದಾರೆ. ಇತರ 30 ಮಂದಿ ಯೋಧರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎಪ್ರಿಲ್ 4ರಂದು ಬೆಳಗ್ಗೆ 17 ಯೋಧರ ಮೃತದೇಹಗಳು ಪತ್ತೆಯಾಗಿರುವುದನ್ನು ಬಿಜಾಪುರ ಪೊಲೀಸ್ ಅಧೀಕ್ಷಕರು ದೃಢಪಡಿಸಿದ್ದಾರೆ. ಇದಕ್ಕಿಂತ ಒಂದು ದಿನ ಮುನ್ನ ಐವರು  ಯೋಧರ ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

ಶನಿವಾರ ಐವರು ಯೋಧರು ಸಾವನ್ನಪ್ಪಿದ್ದ ಹಾಗೂ ಇತರ 30 ಮಂದಿ ಗಾಯಗೊಂಡ

ಛತ್ತೀಸ್‌ಗಡದಲ್ಲಿ ಮಾವೋವಾದಿ ಗಳ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಭದ್ರತಾ ಪಡೆಯ ಯೋಧರು ಹುತಾತ್ಮರಾಗಿದ್ದಾರೆ. ಇದು ಅತ್ಯಂತ ದುಃಖದ ವಿಚಾರವಾಗಿದೆ. ಇಡೀ ದೇಶ ಈ ನೋವನ್ನು ಹಂಚಿಕೊಳ್ಳಲಿದೆ. ಯೋಧರ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ. 

ರಾಮನಾಥ್ ಕೋವಿಂದ್, ರಾಷ್ಟ್ರಪತಿ

ಯೋ ಧರ ಬಲಿದಾನ ವನ್ನು ಎಂದಿಗೂ ಮರೆಯುವುದಿಲ್ಲ. ಹುತಾತ್ಮರಾದವರ ಕುಟುಂಬಗಳೊಂದಿಗೆ ನಮ್ಮ ಪ್ರಾರ್ಥನೆ ಇರಲಿದೆ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.

ನರೇಂದ್ರ ಮೋದಿ, ಪ್ರಧಾನಿ

ಛತ್ತೀಸ್‌ಗಡ ಎನ್‌ಕೌಂಟರ್‌ನಲ್ಲಿ ವೀರ ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಸೂಕ್ತ ಸಮಯದಲ್ಲಿ ತಕ್ಕ ಪ್ರತ್ಯುತ್ತರ ನೀಡಲಾಗುವುದು.

ಅಮಿತ್ ಶಾ, ಕೇಂದ್ರ ಗೃಹ ಸಚಿವ

ಬಳಿಕ 18 ಸಿಬ್ಬಂದಿ ನಾಪತ್ತೆಯಾಗಿದ್ದರು. ರವಿ ವಾರ ಶೋಧ ಕಾರ್ಯಾಚರಣೆ ಸಂದರ್ಭ 17 ಯೋಧರ ಮೃತದೇಹಗಳು ಪತ್ತೆಯಾಗಿವೆ. ಇದ ರೊಂದಿಗೆ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಯೋಧರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಾವೋವಾದಿಯೆಂದು ಹೇಳಲಾದ ಮಹಿಳೆಯೋರ್ವಳ ಮೃತದೇಹ ಕೂಡ ಎನ್‌ಕೌಂಟರ್‌ ನಡೆದ ಸ್ಥಳದಲ್ಲಿ ಪತ್ತೆಯಾಗಿದೆ. ಭದ್ರತಾ ಪಡೆಯ ಕೆಲವು ಶಸ್ತ್ರಾಸ್ತ್ರಗಳು ನಾಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

"2,000 ಸಂಖ್ಯೆಯ ಯೋಧರಿದ್ದ ಭದ್ರತಾ ಪಡೆಗಳ ಪ್ರತ್ಯೇಕ ಜಂಟಿ ತಂಡ ಮಾವೋವಾದಿಗಳ ಭದ್ರಕೋಟೆಯಾಗಿರುವ ದಕ್ಷಿಣ ಬಸ್ತಾರ ಅರಣ್ಯದ ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಗಳಲ್ಲಿ ಶುಕ್ರವಾರ ಮಾವೋ ನಿಗ್ರಹ ಕಾರ್ಯಾಚರಣೆ ಆರಂಭಿಸಿತ್ತು' ಎಂದು ರಾಜ್ಯ ಡಿಐಜಿ (ಮಾವೋವಾದಿ ನಿಗ್ರಹ ಕಾರ್ಯಾಚರಣೆ) ಒ.ಪಿ. ಪಾಲ್ ಹೇಳಿದ್ದಾರೆ.

ಮಾವೋವಾದಿಗಳಿಂದ ಲಘು ಮೆಷಿನ್ ಗನ್, ದೇಶಿ ರಾಕೆಟ್ ಬಳಕೆ: ಅಧಿಕಾರಿಗಳು

ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್ ಸಂದರ್ಭ ಮಾವೋವಾದಿಗಳು ಭದ್ರತಾ ಪಡೆ  ಮೇಲೆ ಲಘು ಮೆಷಿನ್ ಗನ್ (ಎಲ್‌ಎಂಜಿ), ಅಂಡರ್ ಬ್ಯಾರಲ್ ಗ್ರೆನೇಡ್ ಲಾಂಚರ್ (ಯುಬಿಜಿಎಲ್) ಹಾಗೂ ದೇಶಿ ರಾಕೆಟ್ ಬಳಸಿ ಮಾರಕ ದಾಳಿ ನಡೆಸಿದ್ದಾರೆ ಎಂದು ಸಿಆರ್ ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಮಾವೋವಾದಿಗಳು ಅಡಗಿ ಕುಳಿತು ಲಘು ಮೆಷಿನ್ ಗನ್ ನಿಂದ ದಾಳಿ ನಡೆಸಿದ್ದಾರೆ ಎಂದು ಪಡೆಯ ಕಮಾಂಡರ್ ನನಗೆ ತಿಳಿಸಿದ್ದಾರೆ. ಯುಬಿಜಿಎಲ್, ದೇಶಿ ರಾಕೆಟ್ ಮೊದಲಾದವುಗಳನ್ನು ಮಾವೋವಾದಿಗಳು ಈ ಹಿಂದೆ ಕೂಡ ಬಳಸಿದ್ದರು. ಆದರೆ, ಈ ಬಾರಿ ಅದರ ತೀವ್ರತೆ ಹೆಚ್ಚಾಗಿತ್ತು. ಮೃತಪಟ್ಟ ಹಾಗೂ ಗಾಯಗೊಂಡವರನ್ನು ಮಾವೋವಾದಿಗಳು ಟ್ರ್ಯಾಕ್ಟರ್‌ನಲ್ಲಿ ಕೊಂಡೊಯ್ದರು. ಅವರಿಗೆ ಆದ ಸಾವು-ನೋವನ್ನು ಈ ಮೂಲಕ ಗ್ರಹಿಸಬಹುದು ಎಂದು ಸಿಆರ್‌ಪಿಎಫ್‌ನ ಪ್ರಧಾನ ನಿರ್ದೇಶಕ (ಡಿಜಿ) ಕುಲದೀಪ್ ಸಿಂಗ್ ಹೇಳಿದ್ದಾರೆ.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಪತಂಜಲಿಯಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ; ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಪತಂಜಲಿಗೆ ಸುಪ್ರೀಂ ಕೋರ್ಟ್ ಚಾಟಿ

ವೈಜ್ಞಾನಿಕ ತಳಹದಿಯ ಔಷಧಿಗಳನ್ನು ಟೀಕಿಸುವ ಹಾಗೂ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ...