ಪಂಜಾಬ್‌ಗೆ ಮೊದಲ ದಲಿತ ಮುಖ್ಯಮಂತ್ರಿ; ಚರಣ್‌ಜೀತ್ ಸಿಂಗ್ ಚನ್ನಿಗೆ ಸಿಎಂ ಪಟ್ಟ, ಇಂದು ಪ್ರಮಾಣ

Source: VB News | By I.G. Bhatkali | Published on 20th September 2021, 11:45 AM | National News |

ಚಂಡಿಗಢ: ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹೈಕಮಾಂಡ್, ದಲಿತ ಸಿಖ್ ಸಮುದಾಯದ ನಾಯಕ ಚರ್ರನ್‌ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ರವಿವಾರ ಘೋಷಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಪಂಜಾಬ್ ಕಾಂಗ್ರೆಸ್ ನಲ್ಲಿ ಭುಗಿಲೆದ್ದಿದ್ದ ಅಂತಃಕಲಹದ ಬಳಿಕ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಅಮರೀಂದರ್ ಸಿಂಗ್ ಅವರ ಉತ್ತರಾಧಿಕಾರಿಯಾಗಿದ್ದಾರೆ.

ವಿಧಾನಸಭಾ ಚುನಾವಣೆಗೆ ದಲಿತ ಮತಗಳ ಒಲೈಕೆಗೆ ಯತ್ನ?

ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡಿರುವ ಆರೋಮಣಿ ಅಕಾಲಿದಳವು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮಾಯಾವತಿ ನೆತ್ತಾದ ಬಹುಜನ ಸಮಾಜ ಪಕ್ಷದ ಜೊತೆ ಕೈಜೋಡಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಮತಗಳು ತನಗೆ ತನ್ನವುದನ್ನು ತಡೆಯಲು ಕಾಂಗ್ರೆಸ್ ದಲಿತ ಸಮುದಾಯದ ಚನ್ನಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿರುವ ಚನ್ನಿ ಅವರು ಕೂಡಾ ವಿವಾದಗಳಿಂದ ಹೊರತಾಗಿಲ್ಲ. 2018ರಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಅವರು ಮೊಬೈಲ್‌ನಲ್ಲಿ ಅನುಚಿತವಾದ ಸಂದೇಶಗಳನ್ನು ಕಳುಹಿ ಸಿದ್ದಾರೆಂಬ ಆರೋಪಗಳು ಕೇಳಿಬಂದಿದ್ದು ಆದಾಗ್ಯೂ ಆ ಬಗ್ಗೆ ಮಹಿಳಾ ಐಎಎಸ್ ಅಧಿಕಾರಿ ಯಾವುದೇ ದೂರು ನೀಡಿರ ಲಿಲ್ಲ. ಆದರೆ ಮೇ ತಿಂಗಳಲ್ಲಿ ಪಂಜಾಬ್ ಮಹಿಳಾ ಆಯೋ ಗವು ಈ ಬಗ್ಗೆ ಪಂಜಾಬ್ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿ, ಅದರ ಪ್ರತಿಕ್ರಿಯೆ ಕೇಳಿತ್ತು.

"ಪಂಜಾಬ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಚರಣ್‌ಜೀತ್ ಸಿಂಗ್ ಚನಿ ಅವರನ್ನು ಅವಿರೋ ಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲು ನನಗೆ ಅಪಾರ ಸಂತಸವಾಗುತ್ತಿದೆ' ಎಂದು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್‌ ಟೀಟಿಸಿದ್ದಾರೆ.

58 ವರ್ಷ ವಯಸ್ಸಿನ ಚನ್ನಿ ಅವರು ಹಿಂದಿನ ಕ್ಯಾ ಅಮರೀಂದರ್ ಸಿಂಗ್ ನೇತೃತ್ವದ ಸರಕಾರದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು. ಅಮರೀಂದರ್ ಸಿಂಗ್ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ ಕಾಂಗ್ರೆಸ್ ನಾಯಕರಲ್ಲಿ ಚನ್ನಿ ಕೂಡಾ ಒಬ್ಬರಾಗಿದ್ದರು. 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಅಮರೀಂದರ್ ಸಿಂಗ್ ವಿಫಲರಾಗಿದ್ದರೆಂದು ಅವರು ಟೀಕಿಸಿದ್ದರು.

ಭಿನ್ನಮತದಿಂದ ಜರ್ಜರಿತವಾಗಿರುವ ಕಾಂಗ್ರೆಸ್ ಪಕವು ಮುಂದಿನ ಐದು ತಿಂಗಳೊಳಗೆ ಪಂಜಾಬ್ ವಿಧಾನಸಭೆಗೆ ಚುನಾವಣೆಯನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಚನ್ನಿ ಅವರ ಆಯ್ಕೆಯು ಹೆಚ್ಚಿನ ಮಹತ್ವ ಪಡೆದಿದೆ.

ಪಂಜಾಬ್‌ನಲ್ಲಿ ಒಂದು ವೇಳೆ ತಾನು ಅಧಿಕಾರಕ್ಕೆ ಬಂದಲ್ಲಿ, ದಲಿತ ಮುಖ್ಯಮಂತ್ರಿಯನ್ನು ನೇಮಿಸುವುದಾಗಿ ಬಿಜೆಪಿ ಈ ಮೊದಲು ಘೋಷಿಸಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಜೊತೆ ಚುನಾವಣಾ ಮೈತ್ರಿಯೇರ್ಪಡಿಸಿಕೊಳ್ಳುವುದಾಗಿ ಪ್ರಮುಖ ಪ್ರತಿಪಕ್ಷವಾದ ಶಿರೋಮಣಿ ಅಕಾಲಿ ದಳ ಈಗಾಗಲೇ ಘೋಷಿಸಿದೆ ಹಾಗೂ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಉಪಮುಖ್ಯಮಂತ್ರಿಯನ್ನಾಗಿ
ನೇಮಿಸುವುದಾಗಿ ಅದು ತಿಳಿಸಿದೆ.

ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕದ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಚನ್ನಿ ಅವರು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದರೆಂದು ಮೂಲಗಳು ತಿಳಿಸಿವೆ. ರಾವತ್ ಹಾಗೂ ಪಕ್ಷದ ಕೇಂದ್ರೀಯ ವೀಕ್ಷಕರಾದ ಅಜಯ್ ಮಾಕನ್ ಹಾಗೂ ಹರೀಶ್ ಚೌಧುರಿ ಅವರ ಜೊತೆಗಿದ್ದರು.

ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಚರಣ್ ಜಿತ್ ಸಿಂಗ್ ಚನ್ನಿ ಅವರಿಗೆ ನಿರ್ಗಮನ ಮುಖ್ಯಮಂತ್ರಿ ಶುಭ ಹಾರೈಸಿದ್ದಾರೆ. "ಗಡಿ ರಾಜ್ಯವಾದ ಪಂಜಾಬ್ ಸುರಕ್ಷಿತವಾಗಿರಿಸಲು ಚನ್ನಿ ಸಮರ್ಥರಾಗಲಿದ್ದಾರೆಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. “ಚನ್ನಿ ಅವರು ಗಡಿರಾಜ್ಯವಾದ ಪಂಜಾಬನ್ನು ಸುರಕ್ಷಿತವಾಗಿಡುವರು ಹಾಗೂ ಗಡಿಯಾಚೆಯಿಂದ ಹೆಚ್ಚುತ್ತಿರುವ ಭದ್ರತಾ ಬೆದರಿಕೆಯಿಂದ ನಮ್ಮ ಜನತೆಯನ್ನು ರಕ್ಷಿಸುವರೆಂದು ನಾನು ಆಶಿಸುವೆ'' ಎಂದವರು ಹೇಳಿದ್ದಾರೆ.

ಅಮರೀಂದರ್‌ ರಾಜೀನಾಮೆ ಬೆನ್ನಲ್ಲೇ ಪಂಜಾಬ್‌ನ ಇನ್ನೋರ್ವ ಕಾಂಗ್ರೆಸ್ ನಾಯಕ ಸುಖ್‌ಜೀಂದರ್‌ ಸಿಂಗ್ ರಾಂಧವಾ ಅವರು ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿ ಯಲ್ಲಿದ್ದರು. ಆದಾಗ್ಯೂ, ಚನ್ನಿ ಅವರ ಹೆಸರು ಘೋಷಣೆಯಾದ ಬೆನ್ನಲ್ಲೇ ರಾಂಧವಾ ಹೇಳಿಕೆಯೊಂದನ್ನು ನೀಡಿ, ಪಕ್ಷದ ಹೈಕಮಾಂಡ್‌ನ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಅವರಿಗೆ ಆಪ್ತರೆಂದು ಪರಿಗಣಿಸಲಾಗಿರುವ ಇನ್ನೋರ್ವ ಹಿರಿಯ ನಾಯಕ ಬ್ರಹ್ಮ ಮಹೀಂದ್ರ ಕೂಡಾ ಚನ್ನಿ ಅವರ ನೇಮಕವನ್ನು ಸ್ವಾಗತಿಸಿದ್ದಾರೆ. ಅಮರೀಂದರ್‌ ಸಿಂಗ್ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನ ಹೆಸರನ್ನು ಅಂತಿಮಗೊಳಿಸಲು ಕಾಂಗ್ರೆಸ್ ವರಿಷ್ಠರು ಬಿರುಸಿನ ಮಾತುಕತೆಗಳನ್ನು ನಡೆಸಿದ್ದರು. ಕಾಂಗ್ರೆಸ್ ಹೈಕಮಾಂಡ್‌ನ ಪ್ರತಿನಿಧಿಗಳಾದ ಹರೀಶ್ ರಾವತ್, ಅಜಯ್ ಮಾಕನ್ ಹಾಗೂ ಹರೀಶ್ ಚೌಧುರಿ ಚಂಡಿಗಡದ ಹೊಟೇಲ್ ಒಂದರಲ್ಲಿ ಮೊಕ್ಕಾಂ ಹೂಡಿದ್ದು, ಶಾಸಕರೊಂದಿಗೆ ಸಮಾಲೋಚನೆ ನಡೆಸಿ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...