ಕೇಂದ್ರ ವಲಯ ಐಜಿಪಿ ಶರತ್‍ಚಂದ್ರ ಭೇಟಿ, ಪರಿಶೀಲನೆ

Source: sonews | By Staff Correspondent | Published on 2nd June 2020, 11:02 PM | State News |

ಕೆಜಿಎಫ್ : ಕೋವಿಡ್-19 ಪ್ರಯುಕ್ತ ನಿರ್ಮಿಸಿದ ಕೆಜಿಎಫ್ ಪೊಲೀಸ್ ಜಿಲ್ಲೆಯ ಗಡಿ ಭಾಗದ ಚೆಕ್‍ಪೋಸ್ಟ್‍ಗಳಿಗೆ ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್‍ಚಂದ್ರ ಅವರು ಮಂಗಳವಾರದಂದು ಭೇಟಿ ನೀಡಿ, ಪರಿಶೀಲನೆ ನಡೆಸಿ, ನಂತರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್‍ಚಂದ್ರ ಅವರು ಕೆಜಿಎಫ್ ವ್ಯಾಪ್ತಿಯ ಆಂಧ್ರಪ್ರದೇಶ ಗಡಿ ಭಾಗದಲ್ಲಿ ನಿರ್ಮಿಸಿರುವ ವೆಂಕಟಾಪುರ ಮತ್ತು ರಾಜ್‍ಪೇಟ್‍ರೋಡ್ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ, ಅಲ್ಲಿನ ಅಧಿಕಾರಿ, ಸಿಬ್ಬಂದಿಗಳ ಜೊತೆ ಸಮಾಲೋಚಿಸಿ, ಸಮಸ್ಯೆಗಳನ್ನು ತಿಳಿದುಕೊಂಡರು.

ಸರ್ಕಾರದ ಆದೇಶಗಳಂತೆ ಚೆಕ್‍ಪೋಸ್ಟ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳು ಜನಸಾಮಾನ್ಯರೊಂದಿಗೆ ಸೌಜನ್ಯದಿಂದ ಸ್ಪಂಧಿಸುವಂತೆ ಕರೆ ನೀಡಿದರು. ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳ ಗಡಿಭಾಗ ದಲ್ಲಿ ವಲಸಿಗರು, ಹೊರ ರಾಜ್ಯದವರು ಹೆಚ್ಚು ಹೆಚ್ಚಾಗಿ ಓಡಾಡುವ ಪ್ರಮೆಯವಿದ್ದು, ಅವಶ್ಯಕತೆಗಳಿಗನುಗುಣವಾಗಿ ಪರಿಶೀಲಿಸಿ ಕ್ರಮವಿಡಬೇಕೆಂದು ಐಜಿಪಿ ಶರತ್‍ಚಂದ್ರ ಅವರು ತಿಳಿಸಿದರು.

ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‍ರೆಡ್ಡಿ ಮತ್ತು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರುಗಳು ಐಜಿಪಿ ಅವರೊಂದಿಗೆ ಹಾಜರಿದ್ದು, ಅಗತ್ಯ ಮಾಹಿತಿ ಒದಗಿಸಿದರು.

ಐಜಿಪಿ ಕೆ.ವಿ. ಶರತ್‍ಚಂದ್ರ ಅವರು ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿ, ಗೌರವ ರಕ್ಷೆ ಸ್ವೀಕರಿಸಿದರು. ನಂತರ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಕೊರೋನಾ ವೈರಸ್ ಹರಡುವಿಕೆಯ ವಿಚಾರವಾಗಿ ಕಳೆದ ಮೂರ್ನಾಕ್ಕು ತಿಂಗಳುಗಳಿಂದ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹಗಲಿರುಳೆನ್ನದೆ ಬಿಡುವಿಲ್ಲದೇ ದುಡಿಯುತ್ತಿದ್ದು, ಪೊಲೀಸರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲೂ ಇನ್ನೂ ಉತ್ತಮ ಸೇವೆ ಮುಂದುವರೆಸುವಂತೆ ಕರೆ ನೀಡಿದರು.

ಗಡಿಭಾಗದ ಚೆಕ್‍ಪೋಸ್ಟ್‍ಗಳ ಮೂಲಕ ಹೊರಹೋಗುವ ಮತ್ತು ಒಳಬರುವ ವಾಹನಗಳು, ಜನಸಾಮಾನ್ಯರ ಚಲನವಲನಗಳ ಕುರಿತು ಪೊಲೀಸರು ನಿಗಾವಹಿಸಿ, ಪರಿಶೀಲನೆ ನಡೆಸಿ, ಜಿಲ್ಲಾಡಳಿತದ ಜೊತೆ ಚರ್ಚಿಸಿ ಆಗಿಂದಾಗ್ಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಐಜಿಪಿ ಶರತ್‍ಚಂದ್ರ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಬಿ.ಕೆ. ಉಮೇಶ್, ಜಿಲ್ಲೆಯ ಸರ್ಕಲ್‍ಇನ್ಸ್‍ಪೆಕ್ಟರ್‍ಗಳು, ಪಿಎಸ್‍ಐಗಳು ಉಪಸ್ಥಿತರಿದ್ದರು.

ಕೇಂದ್ರ ವಲಯ ಐಜಿಪಿ ಶರತ್‍ಚಂದ್ರ ಅವರು ವೆಂಕಟಾಪುರ, ರಾಜ್‍ಪೇಟ್‍ರೋಡ್ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್‍ಚಂದ್ರ ಅವರು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕೋಲಾರದ ಎಸ್‍ಪಿ ಕಾರ್ತಿಕ್‍ರೆಡ್ಡಿ, ಕೆಜಿಎಫ್ ಎಸ್ಪಿ ಮಹಮ್ಮದ್ ಸುಜೀತ ಹಾಜರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!