ಜನರ ಜೀವನವನ್ನು ಕೇಂದ್ರವಾಗಿಸಿ, ನಿಮ್ಮ ಕುರುಡು ದುರಹಂಕಾರವನ್ನಲ್ಲ: ಸೆಂಟ್ರಲ್ ವಿಸ್ಟಾ ಯೋಜನೆ ಕುರಿತು ರಾಹುಲ್ ಗಾಂಧಿ ವಾಗ್ದಾಳಿ

Source: PTI | Published on 7th May 2021, 3:49 PM | National News |

ನವದೆಹಲಿ: ಕೇಂದ್ರ ಸರ್ಕಾರದ "ಸೆಂಟ್ರಲ್ ವಿಸ್ಟಾ " ಯೋಜನೆ ಕುರಿತು ಟೀಕಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅದೊಂದು "ಕ್ರಿಮಿನಲ್ ವೇಸ್ಟ್" ಎಂದು ಕರೆದಿದ್ದಾರೆ. ಅಲ್ಲದೆ ತಮ್ಮ ಗಮನವನ್ನು ಜನರ ಜೀವನದ ಮೇಲೆ ಕೇಂದ್ರೀಕರಿಸುವಂತೆ ಒತ್ತಾಯಿಸಿದ್ದಾರೆ.

"ಸೆಂಟ್ರಲ್ ವಿಸ್ಟಾ" ಪುನರಾಭಿವೃದ್ಧಿ ಯೋಜನೆ - ದೇಶದ ವಿದ್ಯುತ್ ಕಾರಿಡಾರ್ - ಹೊಸ ಟ್ರಯಾಂಗಲ್ ಸಂಸತ್ತು ಕಟ್ಟಡ, ಸಾಮಾನ್ಯ ಕೇಂದ್ರ ಕಾರ್ಯದರ್ಶಿ ಮತ್ತು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ಗೆ ಮೂರು ಕಿ.ಮೀ ಉದ್ದದ ರಾಜ್‌ಪಥ್ ನವೀಕರಣ ಪ್ರಧಾನಿ ಹಾಗೂ ಉಪರಾಷ್ಟ್ರಪತಿಗಳಿಗೆ ಹೊಸ ನಿವಾಸಗಳ ನಿರ್ಮಾಣವನ್ನು ಒಳಗೊಂಡಿದೆ. ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಸಿಪಿಡಬ್ಲ್ಯುಡಿ ತನ್ನ ಅಂದಾಜು ವೆಚ್ಚವನ್ನು 11,794 ಕೋಟಿಯಿಂದ 13,450 ಕೋಟಿ ರೂ.ಗಳಿಗೆ ಪರಿಷ್ಕರಿಸಿದೆ.

"ಸೆಂಟ್ರಲ್ ವಿಸ್ಟಾ  ಯೋಜನೆ ಒಂದು ಕ್ರಿಮಿನಲ್ ವೇಸ್ಟ್ ಅದರ ಬದಲು ಜನರ ಜೀವನವನ್ನು ಕೇಂದ್ರವಾಗಿಸಿಕೊಳ್ಳಿ, ನಿಮ್ಮ ಕುರುಡು ದುರಹಂಕಾರವನ್ನಲ್ಲ" ಅವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಜನರ ಜೀವ ಉಳಿಸಲು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಬೇಕು, ಅದಕ್ಕಾಗಿ ಸೆಟ್ರಲ್ ವಿಸ್ಟಾ  ಯೋಜನೆಗಳನ್ನು ಸ್ಥಗಿತಗೊಳಿಸಲು ಮತ್ತು ವೈದ್ಯಕೀಯ ಮೂಲಸೌಕರ್ಯಗಳನ್ನು ಸುಧಾರಿಸಲು ಆದ್ಯತೆ ನೀಡಬೇಕು ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರವನ್ನು ಕೇಳುತ್ತಿದೆ.

ಸೆಂಟ್ರಲ್ ವಿಸ್ಟಾ  ಯೋಜನೆಯ "ಅಗತ್ಯ ಸೇವೆಗಳು" ಟ್ಯಾಗ್ ನಲ್ಲಿರಿಸಿರುವ ಸರ್ಕಾರದ ಕ್ರಮವನ್ನು ರಾಹುಲ್ ಟೀಕಿಸಿದ್ದಾರೆ. ಇದು ಸರ್ಕಾರದ ಆದ್ಯತೆಯು ತಪ್ಪಾಗಿದೆ ಎನ್ನುವುದರ ಸೂಚನೆ ಎಂದಿದ್ದಾರೆ. ರಾಷ್ಟ್ರದ ರಾಜಧಾನಿಯಲ್ಲಿ ಲಾಕ್ ಡೌನ್ ಹೊರತಾಗಿಯೂ  ಯೋಜನೆಯ ಕಾಮಗಾರಿ ಮುಂದುವರೆದಿದೆ ಯೋಜನೆಯ ನಿರ್ಮಾಣ ಕಾರ್ಯಗಳನ್ನು "ಅಗತ್ಯ ಸೇವೆಗಳ" ವ್ಯಾಪ್ತಿಗೆ ತರಲಾಗಿದೆ, ಇದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...