ಕಾರವಾರ: ತೌಕ್ತೆ ಚಂಡಮಾರುತದಿಂದ ನಷ್ಟದ ಕುರಿತು ಮಾಹಿತಿ ಪಡೆಯಲು ಕೇಂದ್ರದ ಅಧಿಕಾರಿಗಳ ತಂಡ ಜಿಲ್ಲಾಧಿಕಾರಿ ಕಚೇರಿಗೆ ಭೇಟೆ

Source: S.O. News service | By S O News | Published on 17th June 2021, 1:19 PM | Coastal News |

ಕಾರವಾರ: ತೌಕ್ತೆ ಚಂಡಮಾರುತದಿಂದ ಉತ್ತರ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ ತಿಂಗಳು ಅಂದರೆ ಮೇ 14-17ರ ವರೆಗೆ ಸಂಭವಿಸಿದ ನಷ್ಟದ ಕುರಿತು ಮಾಹಿತಿ ಪಡೆಯಲು ಬಂದಂತಹ ಕೇಂದ್ರದ ಅಧಿಕಾರಿಗಳ ತಂಡಕ್ಕೆ ರಾಜ್ಯ ಕಂದಾಯ ಇಲಾಖೆ ಆಯುಕ್ತರಾದ ಡಾ. ಮನೋಜ್ ರಾಜನ್ ಅವರ ನೇತೃತ್ವದಲ್ಲಿ ಮಾಹಿತಿ ನೀಡಲಾಯಿತು.

ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಭೇಟಿ ನೀಡಿದ ಕೇಂದ್ರ ಅಧಿಕಾರಿಗಳ ತಂಡಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ. ಪಿ. ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಜಗಧೀಶ ಅವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಸಂಭವಿಸಿದ ಹಾನಿಗಳ ಕುರಿತು ವಿವರಿಸಿದರು.

ರಾಜ್ಯ ವಿಪತ್ತು ಪರಿಹಾರ ನಿಧಿ ಹಾಗೂ ಕೇಂದ್ರ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಅನ್ವಯ 27.71 ಕೋಟಿ ಮತ್ತು ಸಮುದ್ರ ಕೊರೆತದಿಂದ 77.40 ಕೋಟಿಯಂತೆ ಒಟ್ಟು ಅಂದಾಜು 105.11 ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿರುತ್ತದೆ. 164.58 ಹೆಕ್ಟರ್ ಕೃಷಿಭೂಮಿ, 164 ಮನೆ, 33 ಸೇತುವೆಗಳು,

ಭಾಗಶಃ 230 ಬೋಟ್‍ಗಳು, ಶಾಲಾ ಮತ್ತು ಸರ್ಕಾರಿ ಕಟ್ಟಡಗಳು ಸೇರಿದಂತೆ 22 ಕಟ್ಟಡಗಳು, ಭಟ್ಟಳ ಹಾಗೂ ಕುಮಟಾದಲ್ಲಿ ತಲಾ ಒಂದರಂತೆ 2 ಜೀವಗಳು ತೌಕ್ತೆ ಚಂಡಮಾರುತದಿಂದ ಹಾನಿಗೊಂಡಿವೆ ಎಂದು ಉತ್ತರ ಕನ್ನಡÀ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಉಡಪಿ ಜಿಲ್ಲೆಯಲ್ಲಿ ಈ ಚಂಡ ಮಾರುತದಿಂದಾಗಿ 8 ಮನೆಗಳು ಸಂಪೂರ್ಣ ಭಾಗಶಃ 158 ಮನೆಗಳು, 5 ಜಾನುವಾರು ಹಾಗೂ ಒಬ್ಬ ವ್ಯಕ್ತಿಯ ಜೀವ ಹಾನಿಯಾಗಿದ್ದು, ಮೀನುಗಾರರ 33 ಬೋಟ್‍ಗಳು, 14 ದೊಡ್ಡ ಬಲೆಗಳು 32 ಹೆಕ್ಟರ್ ಕೃಷಿ ಭೂಮಿ, ಸಮುದ್ರ ಕೊರೆತದಿಂದ 5.271 ಕಿಮೀ ಪ್ರದೇಶ, ಶಾಲೆಗಳು ಹಾಗೂ ಸರ್ಕಾರಿ ಕಟ್ಟಡಗಳು ಸೇರಿದಂತೆ 18 ಕಟ್ಟಡಗಳು, 39 ಸೇತುವೆಗಳು ಸೇರಿದಂತೆ ಒಟ್ಟು 7017.79 ಲಕ್ಷ ನಷ್ಟವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗಧೀಶ್ ಸಭೆಗೆ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಕೇಂದ್ರ ತಂಡದ ಅಧಿಕಾರಿಗಳಾದ ಸುಶೀಲ್ ಪಾಲ್. ಸದಾನಂದ ಬಾಬು, ಓಂ ಕೀಶೋರ, ಡಾ. ಪುನ್ನು ಸ್ವಾಮಿ, ಡಾ ಶ್ರೀನಿವಾಸ ರೆಡ್ಡಿ, ಮಹೇಶ ಕುಮಾರ, ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ. ಕೆ. ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನವೀನ್ ಭಟ್ ಸೇರಿದಂತೆ ಇತರರು ಇದ್ದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...