ಕಾರವಾರ : ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಗೆ ಕೇಂದ್ರ ರಕ್ಷಣಾ ಸ್ಥಾಯಿ ಸಮಿತಿ ಸದಸ್ಯರು ಬುಧವಾರ ಭೇಟಿ ನೀಡಿ ವಾಪಾಸ್ಸಾಗಿದ್ದಾರೆ.
ನೌಕಾನೆಲೆ ಎರಡನೇ ಹಂತದ ಕಾಮಗಾರಿ ಮತ್ತು ಮತ್ತು ವ್ಯವಸ್ಥೆಗಳ ಬಗ್ಗೆ ಭದ್ರತಾ ಸ್ಥಾಯಿ ಸಮಿತಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬೆಳಿಗ್ಗೆ 11-45ರ ಸುಮಾರಿಗೆ ಆಗಮಿಸಿದ ತಂಡ 4ಗಂಟೆಗೆ ವಾಪಸ್ ಗೋವಾ ಕಡೆ ತೆರಳಿದ್ದಾರೆ
ರಾಜ್ಯಸಭಾ ಸದಸ್ಯ ಶರದ್ ಪವಾರ್ ಸೇರಿ 20 ಸದಸ್ಯರ ತಂಡ ಆಗಮಿಸಿದ್ದರು. ವೈ ಪ್ಲಸ್ ಶ್ರೇಣಿಯ ಭದ್ರತೆಯಲ್ಲಿ
ಸಮಿತಿ ಅಧ್ಯಕ್ಷ ಜುವೆಲ್ ಓರ್, ಅಜಯ್ ಭಟ್, ಪ್ರೊ. ಡಾ. ರಾಮಶಂಕರ್ ಕಠೇರಿಯಾ, ಜುಗಲ್ ಕಿಶೋರ್ ಶರ್ಮ, ಡಾ. ಶ್ರೀಕಾಂತ್ ಏಕನಾಥ್ ಶಿಂಧೆ, ಪ್ರೇಮಚಂದ್ರ ಗುಪ್ತ, ಸಂಜಯ್ ರಾವತ್, ಕಾಮಖ್ಯ ಪ್ರಸಾದ್, ಸುಧಾನ್ಶು ತ್ರಿವೇದಿ ಸೇರಿ ಇತರ ಅಧಿಕಾರಿಗಳು ಆಗಮಿಸಿದ್ದರು.
ತಂಡದ ಆಗಮನ ಹಿನ್ನೆಲೆಯಲ್ಲಿ ನೌಕಾಪಡೆಯ ಪೋಲಿಸರು ಮತ್ತು ಕಾರವಾರ ಪೋಲಿಸರು ಭದ್ರತೆ ವಹಿಸಿದ್ದರು.