ಹಣ ವರ್ಗಾವಣೆ ನಿಯಮಗಳಿಗೆ ಕೇಂದ್ರದ ತಿದ್ದುಪಡಿ; ಎನ್‌ಜಿಒಗಳ ತಪಾಸಣೆ ಮತ್ತಷ್ಟು ಬಿಗಿ

Source: Vb | By I.G. Bhatkali | Published on 12th March 2023, 12:27 PM | National News |

ಹೊಸದಿಲ್ಲಿ: ಸರಕಾರೇತರ ಸಂಘಟನೆ (ಎನ್‌ಜಿಒ)ಗಳ ಮೇಲಿನ ನಿಗಾವನ್ನು ಮತ್ತಷ್ಟು ಬಿಗಿಗೊಳಿಸಲು ಕೇಂದ್ರ ಸರಕಾರವು ಹಣ ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ ತಂದಿದೆ.

ವ್ಯಕ್ತಿಗಳು ಮತ್ತು ಸಂಘಟನೆಗಳ ಹಣಕಾಸು ವ್ಯವಹಾರಗಳ ಬಗ್ಗೆ ವಿವರಗಳನ್ನು ಪಡೆಯಲು ತಿದ್ದುಪಡಿಕೊಂಡ ನಿಯಮಗಳು ಜಾರಿ ನಿರ್ದೇಶನಾಲಯಕ್ಕೆ ಇನ್ನಷ್ಟು ಅಧಿಕಾರವನ್ನು ನೀಡುತ್ತವೆ. ನಿಯಮಗಳಿಗೆ ಆಗಿರುವ ತಿದ್ದುಪಡಿಗಳ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯವು ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ತನಿಖೆ ಮಾಡುವ ಮುಖ್ಯ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯವಾಗಿದೆ.

ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಹಣಕಾಸು ಸಚಿವಾಲಯವು ರಾಜಕೀಯವಾಗಿ ಸಕ್ರಿಯವಾಗಿರುವ ವ್ಯಕ್ತಿ'ಗಳನ್ನೂ ಜಾರಿ ನಿರ್ದೇಶನಾಲಯದ ಪರಿಶೀಲನೆಗೆ ಒಳಪಡಿಸಿದೆ.

“ರಾಜಕೀಯವಾಗಿ ಸಕ್ರಿಯವಾಗಿರುವ ವ್ಯಕ್ತಿ'ಗಳೆಂದರೆ, ಮಹತ್ವದ ಸಾರ್ವಜನಿಕ ಕಾರ್ಯಗಳನ್ನು ನಡೆಸಲು ವಿದೇಶವೊಂದು ನೇಮಿಸಿರುವ ವ್ಯಕ್ತಿಗಳು ಎಂಬ ವ್ಯಾಖ್ಯೆಯನ್ನು ಸಚಿವಾಲಯವು ನೀಡಿದೆ. ದೇಶಗಳು ಅಥವಾ ಸರಕಾರಗಳ ಮುಖ್ಯಸ್ಥರು, ಹಿರಿಯ ರಾಜಕಾರಣಿಗಳು, ಹಿರಿಯ ಸರಕಾರಿ ಅಥವಾ ನ್ಯಾಯಾಂಗ ಅಥವಾ ಸೇನಾ ಅಧಿಕಾರಿಗಳು, ಸರಕಾರಿ ಒಡೆತನದ ಕಾರ್ಪೊರೇಶನ್‌ಗಳ ಹಿರಿಯ ಅಧಿಕಾರಿಗಳು ಮತ್ತು ಪ್ರಮುಖ ರಾಜಕೀಯ 66 ಪಕ್ಷಗಳ ಅಧಿಕಾರಿಗಳು ರಾಜಕೀಯವಾಗಿ ಸಕ್ರಿಯವಾಗಿರುವ ವ್ಯಕ್ತಿ'ಗಳ ವಿಭಾಗಕ್ಕೆ ಸೇರುತ್ತಾರೆ.

ಈ 'ರಾಜಕೀಯವಾಗಿ ಸಕ್ರಿಯವಾಗಿರುವ ವ್ಯಕ್ತಿ'ಗಳು ಮತ್ತು ಎನ್‌ಜಿಒಗಳ ಹಣಕಾಸು ವ್ಯವಹಾರಗಳ ದಾಖಲೆಗಳನ್ನು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ದಾಖಲಿಸಿಡಬೇಕಾಗುತ್ತದೆ.

ಹಣಕಾಸು ಸಂಸ್ಥೆಗಳು ತಮ್ಮ ಎನ್ ಜಿಒ ಬಳಕೆದಾರರ ವಿವರಗಳನ್ನು ನೀತಿ ಆಯೋಗದ 'ದರ್ಪಣ್' ವೆಬ್‌ ಸೈಟ್ ನಲ್ಲಿ ನೋಂದಾಯಿಸಬೇಕಾಗಿದೆ ಹಾಗೂ ನಿರ್ದಿಷ್ಟ ಹಣಕಾಸು ಸಂಸ್ಥೆ ಮತ್ತು ಅದರ ಬಳಕೆದಾರನ ನಡುವಿನ ವ್ಯಾಪಾರ ಗುತ್ತಿಗೆಯು ಮುಕ್ತಾಯಗೊಂಡ ಅಥವಾ ಬಳಕೆದಾರನ ಖಾತೆ ಮುಚ್ಚಿದ ಬಳಿಕ ಐದು ವರ್ಷಗಳವರೆಗೆ ಕಾಪಿಡಬೇಕಾಗಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...