ಜಿಲ್ಲಾಡಳಿತದ ವತಿಯಿಂದ ಕೃಷ್ಣ ಜಯಂತಿ ಆಚರಣೆ

Source: S.O. News Service | Published on 11th August 2020, 7:55 PM | Coastal News | Don't Miss |

ಕಾರವಾರ : ಕೋವಿಡ್-19 ಹಿನ್ನಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅತ್ಯಂತ ಸರಳವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ ಅವರು ಶ್ರೀ ಕೃಷ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಿದರು. 
ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರು ಕೃಷ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿ, ಶ್ರೀ ಕೃಷ್ಣನು ಸಾರ್ವಕಾಲಿಕವಾಗಿದ್ದಾನೆ. ಅವನು ಗುರುವಾಗಿ, ನಾಯಕನಾಗಿ ರಾಜನೀತಿ ತಂತ್ರಜ್ಞನು ಆಗಿದ್ದನು ಎನ್ನುವ ಅವನ ಇತಿಹಾಸವೇ ನಮಗೆ ಮಾದರಿಯಾಗಿದೆ. ಕೃಷ್ಣ-ಸುಧಾಮರ ಸ್ನೇಹ ನಮ್ಮ ಅಹಂನ್ನು ಇಳಿಸುತ್ತದೆ. ಕೃಷ್ಣ-ರಾಧೆಯರದ್ದು ಕಲ್ಮಷವಿಲ್ಲದ ಪ್ರೀತಿ, ಕೃಷ್ಣನ ಕುರಿತು ಬರೆದ ಮೂಲ ಕೃತಿಗಳನ್ನು ಓದಿ ಕೃಷ್ಣನ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೊಣ ಎಂದು ಹೇಳಿದರು. 
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಂಜುನಾಥ ಮಡಿವಾಳ ಹಾಗೂ ಜಿಲ್ಲಾಧಿಕಾರಿ ಕಚೇರಿ ವಿವಿಧ ವಿಭಾಗಗಳ ಸಿಬ್ಬಂದಿ ಹಾಜರಿದ್ದರು.
                        

 

 

Read These Next

ನಾರಾಯಣ ಗುರುಗಳ ಜಯಂತ್ಯೋತ್ಸವ : ಕಾಸ್ಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಈಶ್ವರ ನಾಯ್ಕಗೆ ಪ್ರಶಸ್ತಿ ವಿತರಣೆ.

ಭಟ್ಕಳ: ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘವು(ಬಿ.ಎಸ್.ಎನ್.ಡಿ.ಪಿ.) ರಾಜ್ಯದಲ್ಲಿರುವ ಸಾಧಕರನ್ನು ಗುರುತಿಸಿ ...

ನಾರಾಯಣ ಗುರುಗಳ ಜಯಂತ್ಯೋತ್ಸವ : ಕಾಸ್ಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಈಶ್ವರ ನಾಯ್ಕಗೆ ಪ್ರಶಸ್ತಿ ವಿತರಣೆ.

ಭಟ್ಕಳ: ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘವು(ಬಿ.ಎಸ್.ಎನ್.ಡಿ.ಪಿ.) ರಾಜ್ಯದಲ್ಲಿರುವ ಸಾಧಕರನ್ನು ಗುರುತಿಸಿ ...

ಕಲಬುರಗಿ-ಬೀದರ ಜಿಲ್ಲೆಗಳಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ 3000 ಕೋಟಿ ರೂ. -ಬಿ.ಎಸ್.ಯಡಿಯೂರಪ್ಪ

ಕಲಬುರಗಿ : ಕಲಬುರಗಿ ಮತ್ತು ಬೀದರ ಜಿಲ್ಲೆಗಳಲ್ಲಿ 3000 ಕೋಟಿ ರೂ. ಗಳ ವೆಚ್ಚದಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಯೋಜನೆ ...