ಮಂಗಳೂರಿನಲ್ಲಿ ಮಟ್ಕಾ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ‌. ಐವರ ಬಂಧನ.

Source: SO News | By Laxmi Tanaya | Published on 5th March 2021, 6:28 PM | Coastal News |

ಮಂಗಳೂರು :  ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡಾ ಮೇಲೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಐವರನ್ನ ಬಂಧಿಸಿದ್ದಾರೆ.

 ನಂದನ್ ಎಸ್ ನಾಯ್ಕ್(35) ಅತ್ತಾವರ, ಪ್ರಶಾಂತ್(47) ಬರ್ಕೆ,  ಅನಿಲ್ ಕುಮಾರ್(44), ಉರ್ವಾ, ದಿನಕರ ಆಳ್ವಾ(44)ಕೊಡಿಯಾಲ್ ಬೈಲ್, ಅನಿಲ್ ಕುಮಾರ್(42), ಕಾವೂರು  ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

 ಬಂಧಿತರಿಂದ 30,130 ರೂ. ಹಾಗೂ 5 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದ್ದು,  ಒಟ್ಟು 66,130/- ರೂಪಾಯಿ ಮೌಲ್ಯದ ಸೊತ್ತುಗಳನ್ನು, ಮಟ್ಕಾ ಬರೆಯುವ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ, ಬರ್ಕೆ, ಮಂಗಳೂರು ಉತ್ತರ, ಕಾವೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

Read These Next

ಮಂಗಳ ಗ್ರಹದ ಆಚ್ಚಾದನೆ ವೀಕ್ಷಣೆ

ಮಂಗಳೂರು : ಖಗೋಳದ ಅಪರೂಪ ವಿದ್ಯಮಾನವಾದ ಚಂದ್ರನಿಂದ ಮಂಗಳ ಗ್ರಹದ ಆಚ್ಚಾದನೆಯನ್ನು  ಎಪ್ರಿಲ್ 17 ರಂದು ಸಂಜೆ ಪಿಲಿಕುಳ ಪ್ರಾದೇಶಿಕ ...

ಭಟ್ಕಳದಲ್ಲಿ ಉದ್ಯೋಗ ಸಂದರ್ಶನ

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು, ...