ಮುಸುಕಿನ ಜೋಳ ಸಹಾಯಧನ : ದಾಖಲೆ ಸಲ್ಲಿಸಲು ಸೂಚನೆ

Source: sonews | By Staff Correspondent | Published on 5th August 2020, 5:00 PM | Coastal News |

ಕಾರವಾರ:   ಕೋವಿಡ್-19 ಲಾಕ್‍ಡೌನ ಸಮಸ್ಯೆಯಿಂದ ಸಂಕಸ್ಟಕ್ಕೆ ಒಳಗಾಗಿರುವ ಮುಸುಕಿನ ಜೋಳ ಬೆಳೆದ ರೈತರಿಗೆ ರೂ.5 ಸಾವಿರ ಆರ್ಥಿಕ ನೆರವಿನ ಪ್ರಯೋಜನ ಪಡೆಯಲು ಜಂಟಿ ಖಾತೆ ಮತ್ತು FRUITS ತಂತ್ರಾಂಶದಲ್ಲಿ ನೋಂದಣಿಯಾಗದ ರೈತರು ತುರ್ತಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆರ್ಥಿಕ ನೆರವಿನ ಪ್ರಯೋಜನ ಪಡೆಯಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜಂಟಿ ಖಾತೆ ಹೊಂದಿದಲ್ಲಿ  ಒಬ್ಬ ರೈತರಿಗೆ ಮಾತ್ರ ಆರ್ಥಿಕ ನೆರವು ವರ್ಗಾವಣೆಗೆ ಅವಕಾಶವಿರುವುದರಿಂದ ಉಳಿದ ಖಾತೆದಾರರಿಂದ ಒಪ್ಪಿಗೆ ಪತ್ರವನ್ನು ನೋಟರಿಯಿಂದ ದೃಢಿಕರಿಸಿ ಸಲ್ಲಿಸತಕ್ಕದ್ದು.

FRUITS ತಂತ್ರಾಂಶದಲ್ಲಿ ನೋಂದಣಿಯಾಗದ ರೈತರು ತಮ್ಮ ಆಧಾರ ನಂಬರ, ಬ್ಯಾಂಕ ಖಾತೆ, ಆರ್.ಟಿ.ಸಿ ಜಮೀನಿನ ದಾಖಲೆಗಳು, ಮೋಬೈಲ್ ಸಂಖ್ಯೆ ಹಾಗೂ ಸಂಪೂರ್ಣ ವಿಳಾಸ ಸಲ್ಲಿಸಿ ನೋಂದಣಿ ಮಾಡಿಕೊಳ್ಳುವುದು.
ಪೌತಿ ಪ್ರಕರಣಗಳಲ್ಲಿ ರೈತರು ಗ್ರಾಮ ಲೆಕ್ಕಾಧಿಕಾರಿಗಳಿಂದ Certificate of succession ಪಡೆಯುವುದು ಹಾಗೂ ಇತರೆ ಕುಟುಂಬ ಸದಸ್ಯರಿಂದ ನಿರಾಕ್ಷೇಪಣಾ ಪತ್ರದೊಂದಿಗೆ ಮೇಲಿನ ದಾಖಲೆಗಳನ್ನು ಸಲ್ಲಿಸುವಂತೆ ಜಂಟಿ ನಿರ್ದೇಶಕರು ಕೋರಿದ್ದಾರೆ.              

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...