ಭಟ್ಕಳದಲ್ಲಿ ಕ್ವಾರಂಟೈನ್ ಉಲ್ಲಂಘನೆ : ವ್ಯಕ್ತಿ ವಿರುದ್ಧ ದೂರು ದಾಖಲು 

Source: S.O. News Service | By I.G. Bhatkali | Published on 6th April 2020, 11:30 AM | Coastal News | Don't Miss |

ಭಟ್ಕಳ: ಕೊರೊನ ಕ್ವಾರಂಟೈನ್ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ. 

ತಾಲೂಕಿನ ಫಾರೂಕಿ ಸ್ಟ್ರೀಟ್ ನ ನಿವಾಸಿ ಸಂಶುದ್ದೀನ್ ನವೀದ್ ಮೌಲಾ ಕಂಡಿ (೩೬) ಇವರನ್ನು ಕ್ವಾರಂಟೈನ್ ಉಲ್ಲಂಘಿಸಿದ ವ್ಯಕ್ತಿ ಎಂದು ಆರೋಪಿಸಲಾಗಿದೆ. ಈತ ಮಾ. ೧೭ ರಂದು ದುಬೈ ನಿಂದ ಭಟ್ಕಳಕ್ಕೆ ಬಂದಿದ್ದು, ಏ.೩ ರಂದು ಈತ ಹೊಟ್ಟೆ ನೋವು ಎಂದು ಹೇಳಿಕೊಂಡು ಭಟ್ಕಳ ಸರಕಾರಿ ಆಸ್ಪತ್ರೆಗೆ ಬಂದಿದ್ದ. ವಿದೇಶದಿಂದ ಬಂದ ಕಾರಣಕ್ಕಾಗಿ ಹೋಂ ಕ್ವಾರಂಟೈನ್ ಗೆ ಸೂಚಿಸಿ ವೈದ್ಯಾಧಿಕಾರಿಗಳು ಮುದ್ರೆ ಹಾಕಿದ್ದರು. ಆದರೆ ಈತ ಕ್ವಾರಂಟೈನ್ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದ ಎಂದು ಆರೋಪಿಸಿ ಭಟ್ಕಳ ಆರೋಗ್ಯಾಧಿಕಾರಿ ಡಾ. ಮೂರ್ತಿ ಭಟ್ ಪೊಲೀಸ್ ರಿಗೆ ದೂರು ನೀಡಿದ್ದಾರೆ. 

ಮರಳಿ ಆಸ್ಪತ್ರೆಗೆ:
ಆರೋಗ್ಯಾಧಿಕಾರಿಗಳು ದೂರು ನೀಡುತ್ತಿದ್ದಂತೆಯೇ ಎಚ್ಛೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಪತ್ತೆ ಹಚ್ಚಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Read These Next

ಭಟ್ಕಳದಲ್ಲಿ ಭಾರಿ ಮಳೆಗಾಳಿಗೆ 7 ವಿದ್ಯುತ್ ಕಂಬಗಳು ಧರಾಶಾಹಿ, 3 ಟ್ರಾನ್ಸ್‍ಫಾರ್ಮರ್ಸ್ ಗೆ ಬೆಂಕಿ ಅಂದಾಜು ರೂ.1.10 ಲಕ್ಷ ಹಾನಿ

ಭಟ್ಕಳ: ಭಟ್ಕಳ ತಾಲೂಕಿನಾದ್ಯಂತ ಭಾರಿ ಬಿರುಗಾಳಿಯಿಂದ ಮಳೆ ಬೀಳುತ್ತಿದ್ದು ಪ್ರತಿ ಗಂಟೆಗೆ 50-60ಕಿ.ಮೀ ವೇಗದಲ್ಲಿ ಗಾಳಿ ಬೀಸುವ ...