ರೆಮ್ಡಿಸಿವರ್ ಬಳಕೆ ದುರುಪಯೋಗ ಪಡಿಸಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

Source: SO News | By Laxmi Tanaya | Published on 20th April 2021, 8:27 AM | State News |

ಬೆಂಗಳೂರು : ಹೊಸಕೋಟೆ ಪಟ್ಟಣದ ಎಂ.ವಿ.ಜೆ. ಆಸ್ಪತ್ರೆಗೆ ಸೋಮವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಭೇಟಿ ನೀಡಿದರು.

 ಕೋವಿಡ್ ಸೋಂಕಿತರ ಆರೈಕೆ ಕುರಿತು ಪರಿಶೀಲಿಸಿದ ವೇಳೆ, ಎಂ.ವಿ.ಜೆ ಆಸ್ಪತ್ರೆಯ ಹೊರಗುತ್ತಿಗೆ ಫಾರ್ಮಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿನೇಶ್ ಎಂಬ ವ್ಯಕ್ತಿಯ ಕರಾಮತ್ತು ಪತ್ತೆ ಹಚ್ವಿದ್ದಾರೆ.

 ಎಂ.ವಿ.ಜೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಕೋವಿಡ್ ಸೋಂಕಿತರ ಹೆಸರಲ್ಲಿ ರೆಮ್ಡಿಸಿವರ್‌ಅನ್ನು ತರಿಸಿಕೊಂಡು, ಇತರೆ ಆಸ್ಪತ್ರೆಗಳಿಗೆ ಹಾಗೂ ವೈದ್ಯರು ಸೂಚನೆ ಇರುವ ಚೀಟಿಯುಳ್ಳವರಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ.

ಈ ಹಿನ್ನಲೆಯಲ್ಲಿ ಆರೋಪಿಯ ವಿರುದ್ಧ ಹೊಸಕೋಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 153/2021ಅನ್ನು ದಾಖಲಿಸಲಾಗಿದೆ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...