ಶಿರಸಿಯಲ್ಲಿ ಅಂಬರಗ್ರೀಸ್ ಸಾಗಾಟ ಮಾಡುತ್ತಿದ್ದ ಇಬ್ಬರ ಸೆರೆ.

Source: SO News | By Laxmi Tanaya | Published on 26th October 2021, 5:31 PM | Coastal News | Don't Miss |

ಶಿರಸಿ : ಅಂಬರ್ಗ್ರೀಸ್  (ತಿಮಿಂಗಿಲ ವಾಂತಿ) ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ  ಇಬ್ಬರನ್ನ ಶಿರಸಿ  ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. 

ಬೆಳಗಾವಿಯ ಸಂತೋಷ್ ಕಾಮತ್, ರಾಜೇಶ್ ನಾಯ್ಕ  ಎಂಬುವವರನ್ನ ಬಂಧಿಸಲಾಗಿದೆ. ಬಂಧಿತರಿಂದ ಸುಮಾರು ಐದು ಕೋಟಿ ರೂ. ಮೌಲ್ಯದ ಸುಮಾರು  ಐದುವರೆ ಕೆಜಿ ತೂಕದ ತಿಮಿಂಗಿಲ ವಾಂತಿ ವಶಕ್ಕೆ ಪಡೆಯಲಾಗಿದೆ.

ಹಾವೇರಿ ಮೂಲದ ಮಹಿಳೆಯೋರ್ವಳಿಂದ ಅಂಬರಗ್ರೀಸ್ ಪಡೆದ ಆರೋಪಿಗಳು ಸ್ವಿಪ್ಟ್ ಕಾರಿನಲ್ಲಿ ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದರು.  ಶಿರಸಿ ಮಾರ್ಕೆಟ್  ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗಿದೆ.

Read These Next