ಇಂದು ಕಾರವಾರದಲ್ಲಿ ಕ್ಯಾನ್ಸರ್ ತಪಾಸಣೆ; ಬೃಹತ್ ವೈದ್ಯಕೀಯ ಶಿಬಿರ

Source: S O News | By I.G. Bhatkali | Published on 25th June 2022, 10:24 AM | Coastal News | Don't Miss |

ಕಾರವಾರ: ಕಾರವಾರದ ಗಿರಿಜಾ ಬಾಯಿ ಸೈಲ್ ಮೆಮೋರಿಯಲ್ ಎಜ್ಯುಕೇಷನ್ ಟ್ರಸ್ಟ ಮತ್ತು ಇಂಡಿಯಾನಾ ಆಸ್ಪತ್ರೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 25 ಹಾಗೂ 26 ರಂದು ಕಾರವಾರದ ಹಿಂದು ಹೈಸ್ಕೂಲ್‌ನಲ್ಲಿ ಕ್ಯಾನ್ಸರ್ ತಪಾಸಣಾ ಮತ್ತು ಬೃಹತ್ ವೈದ್ಯಕೀಯ ಶಿಬಿರ ನಡೆಯಲಿದೆ ಎಂದು ಜಿ ಎಸ್ ಐ ಟಿ ಚೇರ್ಮನ್ ಮಾಜಿ ಶಾಸಕ ಸತೀಶ್ ಸೈಲ್ ಮತ್ತು ಇಂಡಿಯಾನಾ ಆಸ್ಪತ್ರೆ ಅಧ್ಯಕ್ಷ ಡಾ. ಆಲಿ ಕುಂಬ್ಳೆ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ.25 ರಂದು ಕ್ಯಾನರ್ ತಪಾಸಣಾ ಶಿಬಿರ ನಡೆಯಲಿದ್ದು, ಈ ಶಿಬಿರದಲ್ಲಿ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಮತ್ತು ಗರ್ಭಕೋಶ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಲಿದ್ದು ಇದರ ನೇತೃತ್ವವನ್ನು ಖ್ಯಾತ ಕ್ಯಾನ್ಸರ್ ವೈದ್ಯರಾದ ಡಾ. ಭಾವನಾ ಶೇರಿಗಾರ ಮತ್ತು ಡಾ. ಅಜಯ್ ಕುಮಾರ್ ವಹಿಸಲಿದ್ದಾರೆ.

ಜೂ. 26 ರಂದು ಹೃದಯರೋಗ ತಪಾಸಣೆ( ಇ ಸಿ ಜಿ ಮತ್ತು ಇಕೋ), ಚರ್ಮ ರೋಗ, ಕಣ್ಣಿನ ತಪಾಸಣೆ, ಎಲುಬು ಮತ್ತು ಕೀಲು ರೋಗ ತಪಾಸಣೆ, ಸಾಮಾನ್ಯ ಕಾಯಿಲೆ ಮತ್ತು ಸಕ್ಕರೆ ಕಾಯಿಲೆ ಮತ್ತು ತುರ್ತು ಚಿಕಿತ್ಸಾ ಶಿಬಿರಗಳು ನಡೆಯಲಿದೆ. ಈ ಶಿಬಿರದಲ್ಲಿ ಖ್ಯಾತ ವೈದ್ಯರುಗಳಾದ ಹೃದ್ರೋಗ ತಜ್ಞ ಡಾ. ಯೂಸೂಫ್ ಕುಂಬ್ಳೆ, ಫಿಸಿಯನ್ ಡಾ. ಷಾ ಆಲಂ, ಕಣ್ಣಿನ ತಜ್ಞೆ ಡಾ. ಕೃತಿ,, ಎಲುಬು ತಜ್ಞ ಡಾ. ನವೀನ್‌ಚಂದ್ರ ಆಳ್ವ, ಹೃದ್ರೋಗ ತಜ್ಞೆ ಡಾ. ಲತಾ, ಮಕ್ಕಳ ತಜ್ಞ ಡಾ. ಅಭಿಷೇಕ್, ಚರ್ಮ ರೋಗ ತಜ್ಞೆ ಡಾ. ಶುಭಾ, ತುರ್ತು ಚಿಕಿತ್ಸಾ ತಜ್ಞ ಡಾ. ಶಫಿರ್, ಕರುಳು ಬೇನೆ ತಜ್ಞ ಡಾ. ಅಪೂರ್ವ ಜಯದೇವ್ ಭಾಗವಹಿಸಲಿರುವರು.

ವೈದ್ಯಕೀಯ ಶಿಬಿರದ ಎರಡೂ ದಿನ ಅರುವತ್ತು ವರ್ಷದ ಕೆಳಗಿನ ವಯಸ್ಸಿನವರಿಗೆ ಉಚಿತವಾಗಿ ಕೊವಿಡ್ ಬೂಸ್ಟರ್ ಲಸಿಕೆ ನೀಡಲಾಗುವುದು. ಈ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸುವವರು ತಮ್ಮ ಹೆಸರುಗಳನ್ನು ಕಾರ್ಯಕ್ರಮ ಸಂಯೋಜಕ ಜಿ ಪಿ ನಾಯಕ್ ಪ್ರಿನ್ಸಿಪಾಲರು ಸಿದ್ದ‌ ಪದವಿ ಪೂರ್ವ ಕಾಲೇಜ್ ಇವರ ಮೊಬೈಲ್ ಸಂಖ್ಯೆ (944862862)ಗೆ ಕರೆ ಮೊಲಕ ನೋಂದಣಿ ಮಾಡಿಕೊಳ್ಳಬಹುದು. ಮತ್ತು ಪ್ರತಿದಿನ ಸ್ಥಳದಲ್ಲಿಯೇ ಹೆಸರು ಸೇರಿಸುವ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ. ಆದ್ದರಿಂದ ಈ ಉಚಿತ ಕ್ಯಾನ್ಸರ್ ತಪಾಸಣಾ ಮತ್ತು ಇತರ ವೈದ್ಯಕೀಯ ತಪಾಸಣಾ ಶಿಬಿರದ ಸದುಪಯೋಗವನ್ನು ಕಾರವಾರ ಅಂಕೋಲಾ ಕ್ಷೇತ್ರದ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನತೆ ಪಡಕೊಳ್ಳಬೇಕೆಂದು ಮಾಜಿ ಶಾಸಕ ಸತೀಶ್ ಸೈಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...