ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರದ್ದುಗೊಳಿಸಿ ಸಾಹಿತಿ, ಚಿಂತಕರು, ಶಿಕ್ಷಣ ತಜ್ಞರ ಸಭೆ: ಒಕ್ಕೊರಲಿನ ಕೂಗು

Source: Vb | By I.G. Bhatkali | Published on 27th May 2022, 10:16 AM | State News |

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರದ್ದುಗೊಳಿಸಿ, ಈ ಹಿಂದಿನ ಪಠ್ಯವನ್ನೇ ಮುಂದುವರಿಸಬೇಕು ಎಂದು ನಾಡಿನ ಚಿಂತಕರು, ಹೋರಾಟಗಾರರು, ಶಿಕ್ಷಣ ತಜ್ಞರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಬುಧವಾರ ನಗರದ ಗಾಂಧಿ ಭವನ ಸಭಾಂಗಣದಲ್ಲಿ ಪಠ್ಯ ಪುಸ್ತಕ ರಚನೆ, ಪರಿಷ್ಕರಣೆ, ಮರು ಪರಿಷ್ಕರಣೆ ಕುರಿತು ಶಿಕ್ಷಣ ತಜ್ಞರು ಚಿಂತಕರೊಂದಿಗೆ ನಡೆದ ಸಮಾಲೋಚನೆ, ಚರ್ಚೆಯಲ್ಲಿ ಚಿಂತಕರು ತಮ್ಮ ಹಕ್ಕೊತ್ತಾಯ ಮಂಡಿಸಿ, ರೋಹಿತ್ ಚಕ್ರತೀರ್ಥ ಸಮಿತಿ ವಿವಾದ, ಗೊಂದಲಗಳನ್ನು ಹುಟ್ಟು ಹಾಕಿರುವುದರಿಂದ ಈ ಪಠ್ಯಗಳನ್ನು ಯಾವುದೇ ಕಾರಣಕ್ಕೂ ಜಾರಿ ಮಾಡದೆ ಹಿಂದಿನ ಪಠ್ಯ ಪುಸ್ತಕಗಳನ್ನು ಮುಂದುವರಿಸಬೇಕು ಎಂದರು.

ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದಾಗಿ ಮಕ್ಕಳ ಕಲಿಕೆಯ ಅಂತರ ಹೆಚ್ಚಾಗಿದೆ. ಇದರಿಂದ ಕಲಿಕೆಯ ನಷ್ಟವಾಗಿದೆ. ಇಂತಹ ಬಿಕ್ಕಟ್ಟಿನಲ್ಲಿ ಪಠ್ಯಕ್ರಮ ಮರುರಚನೆಯಂತಹ ಯಾವುದೇ ಅನಗತ್ಯ ಪ್ರಯೋಗಗಳಿಗೆ ಕೈ ಹಾಕದೆ ಮತ್ತು ಆ ಮೂಲಕ ಇನ್ನಷ್ಟು ಕಲಿಕೆಯ ನಷ್ಟಕ್ಕೆ ಕಾರಣವಾಗದೆ ಈ ಒಂದು ವರ್ಷ ಮುಂದುವರಿಸಿಕೊಂಡು ಕೆಂದು ಯಥಾಸ್ಥಿತಿಯನ್ನು ಹೋಗಬೇ ಒತ್ತಾಯಿಸಿದರು. ಅದೇ ರೀತಿ, ಸಾಮಾಜಿಕ ಸಂಘಟನೆಗಳು, ಶಿಕ್ಷಣ ತಜ್ಞರ ಮೇಲೂ ಜವಾಬ್ದಾರಿ ಇದ್ದು, ಇವರೆಲ್ಲಾ ಒಗ್ಗೂಡಿರಾಜ್ಯವ್ಯಾಪಿ ಈ ಮರು ಪರಿಷ್ಕರಣಾ ಸಮಿತಿಯ ಅರ್ಹತೆಯನ್ನು ವಿವಿಧ ನೆಲೆಯಲ್ಲಿ ಪ್ರಶ್ನಿಸಬೇಕು. ಅನಗತ್ಯ ವಾಗಿ ಮರು ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರನ್ನು ವಜಾಗೊಳಿಸಬೇಕು ಎಂದು ಉಲ್ಲೇಖಿಸಿದರು. ಪೋಷಕರ ಜೊತೆ, ಸ್ಥಳೀಯ ಸಂಸ್ಥೆಗಳ ಜೊತೆ, ಎಸ್ ಡಿಎಂಸಿಗಳ ಜೊತೆ, ಶಿಕ್ಷಣದ ಭಾಗೀದಾರರ ಜೊತೆಗೆ ನಿರಂತರವಾಗಿ ಸಮಾಲೋಚನೆ, ಚರ್ಚೆ, ಸಂವಾದ ನಡೆಸಬೇಕು. ಅವರಿಗೆ ಈ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯ ಶಿಫಾರಸುಗಳ ಅಪಾಯಗಳನ್ನು ಮನವರಿಕೆ ಮಾಡಿಕೊಡಬೇಕು ಮತ್ತು ಇವರೆಲ್ಲರೂ ಮುಂದಾಗಿ ಈ ಪರಿಷ್ಕರಣೆಯನ್ನು ಕೈ ಬಿಡಬೇಕೆಂದು ಒತ್ತಾಯಿಸುವಂತಾಗಬೇಕು ಎಂದು ಸೂಚನೆ ನೀಡಲಾಗಿದೆ. 

ಮುಖ್ಯವಾಗಿ ಸರಕಾರಗಳು ಬದಲಾದಂತೆ ಆಯಾ ಪಕ್ಷಗಳ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯಗಳು ಸಹ ಬದಲಾಗುತ್ತಿರುವುದು ಆತಂಕದ ಸಂಗತಿಯಾಗಿದ್ದು, ಇದು ಅಂತ್ಯಗೊಳ್ಳಬೇಕಾಗಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಈ ಪಠ್ಯಕ್ರಮಗಳನ್ನು ಮನಸೋ ಇಚ್ಛೆ ಬದಲಾಯಿಸದಂತೆ ಒಂದು ವ್ಯವಸ್ಥೆಯ ಕುರಿತು ನಾವೆಲ್ಲರೂ ಯೋಚಿಸಬೇಕಾಗಿದೆ ಎಂದು ಹೇಳಿದರು.

ಜನತೆಗೆ ನಿಜಾರ್ಥದಲ್ಲಿ ಸಂವಿಧಾನದ ಆಶಯಗಳನ್ನುಳ್ಳ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪಿಕೊಂಡ, ಸಾಮಾಜಿಕ ನ್ಯಾಯವನ್ನು ಪಾಲಿಸುವ, ಲಿಂಗ ಸಮಾನತೆಯನ್ನು ಗೌರವಿಸುವ, ಬಹುಸಂಸ್ಕೃತಿಯನ್ನು, ಕನ್ನಡದ ಅಸ್ಥಿತೆಯನ್ನು ಒಳಗೊಂಡ ಒಂದು ಮಾದರಿ ಪರ್ಯಾಯ ಪಠ್ಯಕ್ರಮವನ್ನು ರೂಪಿಸಬೇಕಾಗಿದೆ. ಇದರಲ್ಲಿ ಈ ಬಿಜೆಪಿ ಸರಕಾರ ಯಾವರೀತಿ ತಪ್ಪುಗಳನ್ನು ಮಾಡಿದೆ ಎಂಬುದನ್ನು ಸಹ ವಿವರಿಸಬೇಕು. ಈ ಕಾರ್ಯಯೋಜನೆಗಾಗಿ ಒಂದು ತಜ್ಞರ ಸಮಿತಿ ರಚಿಸಬೇಕು. ನಿರ್ದಿಷ್ಟ ಕಾಲಮಿತಿಯೊಳಗಡೆ ಈ 'ಮಾದರಿ ಪರ್ಯಾಯ ಪಠ್ಯಕ್ರಮ'ವನ್ನು ಅಂತಿಮಗೊಳಿಸಿ ಸಾರ್ವಜನಿಕ ಚರ್ಚೆಗೆ ಬಿಡಬೇಕು ಎಂದು ಚಿಂತಕರು ಸರಕಾರಕ್ಕೆ ಆಗ್ರಹಿಸಿದರು.

ಸಭೆಯಲ್ಲಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಸಾಹಿತಿಗಳಾದ ಪ್ರೊ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಡಾ.ಬಂಜ ಗೆರೆ ಜಯಪ್ರಕಾಶ್, ಪ್ರೊ.ರಾಜೇಂದ್ರ ಚೆನ್ನಿ, ಪ್ರೊ.ಎಚ್.ಎಸ್. ರಾಘವೇಂದ್ರರಾವ್, ಡಾ.ಟಿ.ಆರ್.ಚಂದ್ರಶೇಖರ್, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ, ಡಾ.ವಿಜಯಾ, ಲೇಖಕಿ ಡಾ.ವಸುಂಧರಾ ಭೂಪತಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಾಮಾಜಿಕ ಸಂಘಟಕ ಶ್ರೀಪಾದ ಭಟ್, ಬರಹಗಾರ ಶಿವಸುಂದರ್, ರುದ್ರಪ್ಪ ಹನಗವಾಡಿ, ಬಿ.ರಾಜಶೇಖರ ಮೂರ್ತಿ, ಕೆ.ಎಸ್.ವಿಮಲಾ, ಪ್ರಜ್ವಲ್ ಶಾಸ್ತ್ರಿ, ಟಿ.ಎಂ.ಕುಮಾರ್, ಕುಮಾರಸ್ವಾಮಿ ಬೆಜ್ಜವಳ್ಳಿ, ಡಾ.ಎನ್.ಗಾಯತ್ರಿ ಸೇರಿದಂತೆ ಪ್ರಮುಖರು ಮಂಡಿಸಿದ ಹಕ್ಕೊತ್ತಾಯ ಪ್ರಸ್ತಾವನೆಗೆ ಸಹಮತ ಸೂಚಿಸಿದರು.

ತಜ್ಞರ ಸಮಿತಿ ರಚಿಸಬೇಕು:
ಜನತೆಗೆ ನಿಜಾರ್ಥದಲ್ಲಿ ಸಂವಿಧಾನದ ಆಶಯಗಳನ್ನುಳ್ಳ, ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಒಪ್ಪಿಕೊಂಡ, ಸಾಮಾಜಿಕ ನ್ಯಾಯವನ್ನು ಪಾಲಿ ಸುವ, ಲಿಂಗ ಸಮಾನತೆಯನ್ನು ಗೌರವಿ ಸುವ, ಬಹುಸಂಸ್ಕೃತಿಯನ್ನು, ಕನ್ನಡದ ಅಸ್ಥಿತಿಯನ್ನು ಒಳಗೊಂಡ ಒಂದು ಮಾದರಿ ಪರ್ಯಾಯ ಪಠ್ಯಕ್ರಮವನ್ನು ರೂಪಿಸಬೇಕಾಗಿದೆ.ಈಕಾರ್ಯಯೋಜ ನೆಗಾಗಿ ಒಂದು ತಜ್ಞರ ಸಮಿತಿ ರಚಿಸಬೇಕು ಎಂದು ಸಭೆಯಲ್ಲಿ ಚಿಂತಕರು ನಿರ್ಣಯ ಮಂಡಿಸಿದರು.

ಹಿಂದಿನ ಪಠ್ಯವನ್ನೇ ಮುಂದುವರಿಸಲು ಸುತ್ತೋಲೆ ಹೊರಡಿಸಿ; ಸಿಎಂಗೆ ಹಂಪನಾ ಪತ್ರ:  ಶಾಲೆಗಳು ಆರಂಭವಾಗಿದ್ದು ಪಠ್ಯಪರಿಷ್ಕರಣೆಯ ವಿವಾದ ಚಕ್ರತೀರ್ಥದಲ್ಲಿ ಒದ್ದಾಡುತ್ತಾ ಸರಕಾರವನ್ನು ಪೇಚಿಗೆ ಸಿಲುಕಿಸಿದೆ. ಹಾಗಾಗಿ ಭಿನ್ನಾಭಿಪ್ರಾಯಗಳು ತಾರ್ಕಿಕ ಅಂತ್ಯವನ್ನು ಕಾಣುವವರೆಗೆ ಹೊಸಪಠ್ಯವನ್ನು ತಡೆಹಿಡಿದು, ಹಿಂದಿನ ಪಠ್ಯವನ್ನು ಮುಂದುವರಿಸುವಂತೆ ಸರಕಾರ ಸುತ್ತೋಲೆ ಹೊರಡಿಸಬೇಕು ಎಂದು ಹಿರಿಯ ಸಂಶೋಧಕ ಹಾಗೂ ಸಾಹಿತಿ ಹಂಪನಾ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

Read These Next

ಶಾಲಾ ಪಠ್ಯ ಪರಿಷ್ಕರಣೆ ವಿವಾದ; ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಮನವಿ

ಪಠ್ಯಪುಸ್ತಕ ಪರಿಷ್ಕರಣೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ವಿವಾದ ಉಂಟಾಗಿ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಸಿಎಂ ಕೂಡಲೇ ...

ಶಾಲಾ ಪಠ್ಯ ಪರಿಷ್ಕರಣೆ ವಿವಾದ; ತಪ್ಲೊಪ್ಪಿಕೊಂಡ ಶಿಕ್ಷಣ ಇಲಾಖೆ; ತಿದ್ದೋಲೆ ಹೊರಡಿಸಲು ರಾಜ್ಯ ಸರಕಾರದ ಆದೇಶ

ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಶಿಕ್ಷಣವನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂದು ರಾಜ್ಯದಲ್ಲಿ ವಿವಾದವು ...

ದಾಖಲೆ ನೆಪದಲ್ಲಿ ವಾಹನಗಳನ್ನು ತಡೆಯಬೇಡಿ, ತೊಂದರೆ ಕೊಡಬೇಡಿ; ಡಿಜಿಪಿ ಪ್ರವೀಣ್ ಸೂದ್

ವಾಹನ ಸವಾರರನ್ನು ದಾಖಲೆ ಪರಿಶೀಲನೆ ನೆಪದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಸುಗಮ ಸಂಚಾರ ವ್ಯವಸ್ಥೆಗೆ ತೊಂದರೆ ಉಂಟು ಮಾಡಬಾರದೆಂದು ...

ಕಾರ್ಮಿಕರ ಬದುಕು ಹಸನುಗೊಳಿಸಲು ಅನೇಕ ಕಾರ್ಯಕ್ರಮಗಳು : ಸಚಿವ ಶಿವರಾಮ್ ಹೆಬ್ಬಾರ್

ಶಿವಮೊಗ್ಗ : ವಿವಿಧ ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಕಾರ್ಮಿಕರ ಜೀವನದಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಕಾರ್ಮಿಕ ಇಲಾಖೆ ...

ಕಾರ್ಮಿಕರ ವಿಸ್ತೃತ ವಸತಿ ಸಮುಚ್ಚಯ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ : ಅರಬೈಲು ಶಿವರಾಮ್ ಹೆಬ್ಬಾರ್

ಶಿವಮೊಗ್ಗ : ಶಿವಮೊಗ್ಗ ಸಮೀಪದ ಸಿದ್ಲೀಪುರ ಗ್ರಾಮದಲ್ಲಿ 10 ಎಕರೆ ಜಾಗದಲ್ಲಿ 10ಕೋಟಿ ರೂ.ಗಳ ವೆಚ್ಚದಲ್ಲಿ 500ಮಂದಿ ಕಟ್ಟಡ ಮತ್ತು ಇತರೆ ...