ಫೇಸ್ಬುಕ್ ಪೊಲ್ ನಲ್ಲಿ ಕೆನರಾ ಸಂಸದರಿಗೆ ಹಿನ್ನೆಡೆ; ಪಕ್ಷೇತರ ಅಭ್ಯರ್ಥಿಯ ಪರ ಮತದಾರನ ಒಲವು

Source: sonews | By sub editor | Published on 1st April 2019, 4:20 PM | Coastal News | Don't Miss |

ಭಟ್ಕಳ: ಇಲ್ಲಿನ ಫೇಸ್ಬುಕ್ ಖಾತೆದಾರರೊಬ್ಬರು ಉತ್ತರಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲಿರುವ ಹಾಲಿ ಸಂಸದರೂ ಕೇಂದ್ರ ಸಚಿವರೂ ಆಗಿರುವ  ಅನಂತ್ ಕುಮಾರ್ ಹೆಗಡೆ ಹಾಗೂ ಕಲ್ಪಿತ ಪಕ್ಷೇತರ ಅಭ್ಯರ್ಥಿ ಮಾಯ್ತಪ್ಪಣಾ ಎಂಬುವವರ ನಡುವೆ ಫೇಸ್ಬುಕ್ ಪೊಲ್ ಸೃಷ್ಟಿಸಿದ್ದು ಆಶ್ಚರ್ಯಕರ ರೀತಿಯಲ್ಲಿ ಕಳೆದ 5 ಅವಧಿಯಲ್ಲಿ ಉತ್ತರಕನ್ನಡ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದಿರುವ ಅನಂತ್ ಕುಮಾರ್ ಹೆಗಡೆಯವರು ಹಿನ್ನಡೆ ಸಾಧಿಸಿದ್ದು ಪಕ್ಷೇತರ ಅಭ್ಯರ್ಥಿ ಶೇ.52% ಮತಗಳನ್ನು ಪಡೆದುಕೊಂಡರೆ ಅನಂತ್ ಕುಮಾರ್ ಹೆಗಡೆಯವರು ಕೇವಲ 48% ಮತಗಳನ್ನು ಪಡೆದುಕೊಂಡಿರುವುದು ಫೇಸ್ಬುಕ್ ಖಾತೆದಾರರನ್ನು ನಗೆಪಾಟೀಲಕ್ಕೀಡಾಗುವಂತೆ ಮಾಡಿದ್ದಾರೆ. 

ಕಳೆದ 25ವರ್ಷಗಳಿಂದ ಸಂಸದನಾಗಿ ಕ್ಷೇತ್ರದಲ್ಲಿ ಗೂಟ ಜಡಿದುಕೊಂಡಿ ಕುಂತಿರುವ ಅನಂತ್ ಕುಮಾರ್ ಆಡಳಿತಕ್ಕೆ ಜನರು ಈ ರೀತಿಯ ಬೇಸರ ವ್ಯಕ್ತಪಡಿಸಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ಎಷ್ಟು ಮತಗಳನ್ನು ಪಡೆಯಲಿದ್ದಾರೆ ಎಂಬುದನ್ನು ನಿರ್ಧರಿಸಲಿದೆ. 

ಕೇವಲ ಕೋಮು ಭಾವನೆಗಳನ್ನು ಕೆರಳಿಸುವುದರ ಮೂಲಕ ರಾಜಕೀಯ ಮಾಡಿಕೊಂಡಿದ್ದು ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಯಾವೊಬ್ಬ  ಮತದಾರರಿಗೆ ಕಾಣದ ಅನಂತ್ ಕುಮಾರ್ ಹೆಗಡೆ ಚುನಾವಣೆ ಸಮೀಸುತ್ತಿದ್ದಂತೆ ಧಿಡೀರ್ ಆಗಿ ಕಾಣಿಸಿಕೊಂಡು ಜನರ ಕೋಮುಭಾವನೆಗಳನ್ನು ಕೆರಳಿಸುವುದರ ಮೂಲಕ ಹಿಂದೂಗಳ ಮತಗಳನ್ನು ಪಡೆದುಕೊಳ್ಳುತ್ತಿದ್ದು ಇತಿಹಾಸವಾದರೆ ಈ ಬಾರಿ ಚುನಾವಣೆ ಮಾತ್ರ ಅವರಿಗೆ ಅಗ್ನಿಪರೀಕ್ಷೆಯಾಗಿದ್ದು ಕೇತ್ರದ ಸಾಮಾನ್ಯ ಮತದಾರರನೂ ಕಂಡಕಂಡಂತೆ ಮಾತಾಡಿಕೊಳ್ಳುತ್ತಿದ್ದಾರೆ. ಆದರೂ ಕೆಲವು ಮೋದಿ ಭಕ್ತರು ಮಾತ್ರ ಅನಂತ್ ಕುಮಾರ್ ಎನೂ ಮಾಡದಿದ್ದರೂ ಪರವಾಗಿಲ್ಲ ನಾವೂ ಮೋದಿಗಾಗಿ ಮತ ನೀಡುತ್ತೇವೆ ಎನ್ನುವುದು ಮಾತ್ರ ಅವರ ಬೌದ್ಧಿಕ ದಿವಾಳಿತನ ಎತ್ತಿ ತೋರಿಸುತ್ತದೆ ಎಂದು ಪ್ರಜ್ಞಾವಂತರು ಮಾತಾಡಿಕೊಳ್ಳುತ್ತಿದ್ದಾರೆ. 
 

Read These Next