ಕಿಸಾನ್ ಸಮ್ಮಾನ್ ನೋಂದಣಿಗೆ ರೈತರಿಗೆ ಕರೆ

Source: so news | By Manju Naik | Published on 19th June 2019, 8:03 PM | Coastal News | Don't Miss |

ಕಾರವಾರ: ರೈತರು ತಮ್ಮ ಆದಾಯ ವೃದ್ಧಿಸಿಕೊಳ್ಳಲು ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕಾರವಾರ ತಹಸೀಲ್ದಾರ್ ಆರ್.ವಿ.ಕಟ್ಟಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಕುರಿತು ಕಾರವಾರಲ್ಲಿ ಬುಧವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಲಾಭದಾಯಕವಾಗಿದ್ದು ಅರ್ಹ ರೈತರು ತಮ್ಮ ಸಮೀಪದ ಗ್ರಾಮ ಪಂಚಾಯ್ತಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ನಾಡಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿ ಆಧಾರ ಕಾರ್ಡು, ಬ್ಯಾಂಕ್ ಪಾಸ್‍ಬುಕ್ ಹಾಗೂ ಸ್ವಯಂ ದೃಢೀಕರಣಪತ್ರದೊಂದಿಗೆ ತಮ್ಮ ಹೆಸರನ್ನು ನೋಂದಾಯಿಸುವಂತೆ ತಿಳಿಸಿದರು.

ಕಿಸಾನ್ ಸಮ್ಮಾನ್ ಯೋಜನೆಗೆ ಈ ಹಿಂದೆ ಇದ್ದ 2 ಹೆಕ್ಟೇರ್ ಕ್ಷೇತ್ರದ ಮಿತಿಯನ್ನು ತೆಗೆದು ಹಾಕಲಾಗಿದ್ದು ರೈತರು ಈ ಯೋಜನೆಯ ಲಾಭ ಪಡೆಯುವಂತೆ ಅವರು ಕೋರಿದ್ದಾರೆ.

ಸಭೆಯಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್, ಸಹಾಯಕ ಕೃಷಿ ನಿರ್ದೇಶಕ ಗುಡಿಗಾರ್ ಉಪಸ್ಥಿತರಿದ್ದರು. ತಾಲೂಕಿನ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಸಿಬ್ಬಂದಿಗೆ ರೈತರ ನೋಂದಣಿ ಕುರಿತಂತೆ ತರಬೇತಿ ನೀಡಲಾಯಿತು.

Read These Next

ಜಿಲ್ಲೆಯ ಅಂಗನವಾಡಿ, ಶಾಲೆ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ - ಎನ್. ಕೃಷ್ಣಮೂರ್ತಿ

ಕೋಲಾರ : 3 ದಿನಗಳ ಕಾಲ ಜಿಲ್ಲೆಯ ಅಂಗನವಾಡಿ, ಶಾಲೆ, ನ್ಯಾಯಬೆಲೆ ಅಂಗಡಿಗಳು, ಗೋಡನ್‍ಗಳು ಹಾಗೂ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ಇಲ್ಲಿನ ...