ಉಪಚುನಾವಣೆ : ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ತಂಡ ರಚನೆ 

Source: sonews | By Staff Correspondent | Published on 12th November 2019, 5:41 PM | Coastal News |

ಕಾರವಾರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾ ಕಂಟೋಲ್ ರೂಮ್ ಹಾಗೂ ತಾಲೂಕಾವಾರು ತಂಡಗಳನ್ನು ರಚಿಸಿ ದಿನದ 24 ಗಂಟೆಯೂ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 

ಯಲ್ಲಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಆರ್.ವಿ.ತಳೇಕರ ನೋಡಲ್ ಅಧಿಕಾರಿ,  ಮೊಬೈಲ್ ಸಂಖ್ಯೆ 9449597124, 9538721125, ಜಿಲ್ಲಾ ಕಂಟ್ರೋಲ್ ರೂಮ್ ಟೋಲ್ ಫ್ರೀ ಸಂಖ್ಯೆ 18005997094, ಅಬಕಾರಿ ನಿರಿಕ್ಷಕರ ಕಚೇರಿ ಯಲ್ಲಾಪುರ ವಲಯ  08419-261510, ತಹಶೀಲ್ದಾರ ಕಚೇರಿ ಮುಂಡಗೋಡ ತಾಲೂಕು 08301-222122, ಅಬಕಾರಿ ನಿರಿಕ್ಷಕರ ಕಚೇರಿ ಶಿರಸಿ ವಲಯ 08384-224168 ಈ ದೂರವಾಣಿ ಸಂಖ್ಯೆಗಳಿಗೆ ಯಾವುದೇ ರೀತಿಯ ಅನಧೀಕೃತ ಮದ್ಯದ ದಾಸ್ತಾನು ಸಾಗಾಟ, ಮಾರಾಟ ಅಥವಾ ತಯಾರಿಕೆಗೆ ಸಂಬಂಧಿಸಿದ ವ್ಯವಹಾರಗಳು ಕಂಡು ಬಂದಲ್ಲಿ ಮಾಹಿತಿ ನೀಡಲು ವಿನಂತಿಸಲಾಗಿದೆ.      
 

Read These Next