ಉಡುಪಿ-ಮಂಗಳೂರು ನಡುವೆ ಪ್ರಯಾಣಿಕರಗನುಗುಣವಾಗಿ ಬಸ್ ಸಂಚಾರ.

Source: SO News | By Laxmi Tanaya | Published on 9th September 2020, 3:39 PM | Coastal News | Don't Miss |

ಮಂಗಳೂರು : ಉಡುಪಿ- ಮಂಗಳೂರು ನಡುವೆ ಪ್ರಯಾಣಿಕರ ಓಡಾಟ ನಿಧಾನವಾಗಿ ಹೆಚ್ಚುತ್ತಿದ್ದುದರಿಂದ  ಬಸ್‌ಗಳಿಗೆ ಬೇಡಿಕೆ ವ್ಯಕ್ತವಾಗಿದೆ. 

ಕೆಎಸ್‌ಆರ್‌ಟಿಸಿಯಿಂದಲೂ ಕೂಡ  ಈ ಎರಡು ನಗರಗಳ ನಡುವೆ ಬಸ್‌ಗಳನ್ನು ಸಂಚರಿಸುತ್ತಿವೆ. ಉಡುಪಿ-ಮಂಗಳೂರು ನಡುವಿನ ಪ್ರಮುಖ ಸಂಪರ್ಕ ಕೊಂಡಿಗಳಾಗಿರುವ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳು  ಕೆಲವು ದಿನಗಳಿಂದ ತನ್ನ ಬಸ್‌ಗಳ ಟ್ರಿಪ್‌ ಗಳನ್ನ ಜಾಸ್ತಿ ಮಾಡಿಕೊಂಡಿವೆ.

 ಈ ನಡುವೆ ಮಂಗಳೂರು ವಿಭಾಗದಿಂದ 5 ಎಕ್ಸಪ್ರೆಸ್‌ ಬಸ್‌ಗಳನ್ನು ತಲಾ 4 ಟ್ರಿಪ್‌ಗಳಲ್ಲಿ ಓಡಿಸಲಾಗುತ್ತಿದೆ. ಎರಡು ಟ್ರಿಪ್‌ಗಳಲ್ಲಿ ಸಾಕಷ್ಟು ಪ್ರಯಾಣಿಕರು ಸಂಚರಿಸುತ್ತಾರೆ.
ಈ ಹಿಂದೆ ಉಡುಪಿ ಮತ್ತು ಮಂಗಳೂರು ನಡುವೆ ಪ್ರತಿ 2 ನಿಮಿಷಕ್ಕೊಂದು ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ಈಗ ಪ್ರಯಾಣಿಕರ ಕೊರತೆಯಿಂದಾಗಿ ಶೇ. 60ರಷ್ಟು ಬಸ್‌ಗಳು ಮಾತ್ರ ಓಡಾಡುತ್ತಿವೆ. ಪ್ರಯಾಣಿಕರು ಹೆಚ್ಚಾಗಿರುವ ಬೆಳಗ್ಗೆ ಮತ್ತು ಸಂಜೆ ವೇಳೆ ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ಟ್ರಿಪ್‌ ಕಡಿತ ಮಾಡಲಾಗುತ್ತಿದೆ. ನಷ್ಟ ತಪ್ಪಿಸಲು ಇದು ಅನಿವಾರ್ಯ ಎನ್ನುತ್ತಾರೆ ಬಸ್‌ ಮಾಲಕರು.

ಲಾಕ್‌ಡೌನ್‌ ಮೊದಲು ಮಣಿಪಾಲ-ಸ್ಟೇಟ್‌ಬ್ಯಾಂಕ್‌ ನಡುವೆ ಸಂಚರಿಸುತ್ತಿದ್ದ ವೋಲ್ವೋ ಬಸ್‌ಗಳ ಬದಲಿಗೆ ಎಕ್ಸ್‌ಪ್ರೆಸ್‌ ಬಸ್‌ಗಳನ್ನು (ಸ್ಟೇಟ್‌ಬ್ಯಾಂಕಿನಿಂದ ಉಡುಪಿ ವರೆಗೆ) ಕೆಎಸ್‌ಆರ್‌ಟಿಸಿ ಓಡಿಸುತ್ತಿದೆ. ವೋಲ್ವೋಗಳು ಪ್ರತಿ ಅರ್ಧ ಗಂಟೆಗೊಮ್ಮೆ ಓಡಾಡುತ್ತಿದ್ದವು. ಈಗ ಜನಸಂದಣಿ ಕಡಿಮೆ ಇರುವುದರಿಂದ ಬೇಡಿಕೆಗೆ ತಕ್ಕಂತೆ ಬಸ್‌ಗಳನ್ನು ಬಿಡಲಾಗುತ್ತಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...