ಶಿರಸಿಯಲ್ಲಿ ಲಾಕ್ ಡೌನ್ ವೇಳೆ ಕಳ್ಳತನ. ಆರೋಪಿಗಳನ್ನ ಬಂಧಿಸಲು ಯಶಸ್ವಿಯಾದ ಪೊಲೀಸರು.

Source: SO News | By Laxmi Tanaya | Published on 10th June 2021, 10:17 PM | Coastal News | Don't Miss |

ಶಿರಸಿ : ಲಾಕ್ ಡೌನ್ ಸಂದರ್ಭದಲ್ಲಿ ಅಂಗಡಿ ಕಳ್ಳತನ ನಡೆಸಿದ್ದ ನಾಲ್ವರು ಆಸಾಮಿಗಳನ್ನ  ಶಿರಸಿ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

ಶಿರಸಿ ಕರಿಗುಂಡಿಯ ಭರತ ಗಣಪತಿ ನಾಯ್ಕ  (20), ಕೋಟೆಗಲ್ಲಿಯ  ಪ್ರಕಾಶ ಗುಡ್ಡಪ್ಪ ತಳವಾರ(22) ಮತ್ತು ಇಬ್ಬರು ಅಪ್ರಾಪ್ತ ಬಾಲಕರನ್ನ ಬಂಧಿತರಾಗಿದ್ದಾರೆ.

 ಜೂನ್ 6 ರಂದು  ಬಸ್ ನಿಲ್ದಾಣದ ಸಮೀಪ ಇರುವ ಶಿರಸಿಯ ಕೃಷ್ಣ ಮೆಡಿಕಲ್ ಸ್ಟೋರ್ ಕಳ್ಳತನ ‌ನಡೆಸಲಾಗಿತ್ತು. ಮತ್ತು ಅದೇ ದಿನ  ಸಿ ಪಿ ಬಜಾರ ರಸ್ತೆಯಲ್ಲಿ ಕೆಲ ಅಂಗಡಿಗಳ ಕಳ್ಳತನ ಯತ್ನ ನಡೆಸಲಾಗಿತ್ತು. 

 ಕೃಷ್ಣಾ ಮೆಡಿಕಲ್ ಸ್ಟೋರ್ನಿಂದ  ಕಳ್ಳರು ಲ್ಯಾಪ್ಟಾಪ್ ಮತ್ತು  20ಸಾವಿರ ರೂ. ನಗದು ಕಳ್ಳತನ ಮಾಡಿದ್ದರು. ಕಳ್ಳರ ಪತ್ತೆಗಾಗಿ ಶಿರಸಿ ಪೊಲೀಸರು ವಿಶೇಷ ತಂಡ ರಚಿಸಿದ್ದರು. ತನಿಖೆ ನಡೆಸಿದ ಪೊಲೀಸರು 
ಆರೋಪಿಗಳನ್ನ ಬಂಧಿಸಲು ಯಶಸ್ವಿಯಾಗಿದ್ದಾರೆ.

 ವಿಚಾರಣೆಯಿಂದಾಗಿ ಆರೋಪಿಗಳು  ಹಲವು ಕಳ್ಳತನ ಮಾಡಿರೋದನ್ನ ಒಪ್ಪಿಕೊಂಡಿದ್ದಾರೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಎಸ್ಪಿ ಶಿವಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬದ್ರಿನಾಥ್, ಶಿರಸಿ ಡಿವೈಎಸ್ಪಿ ರವಿ ದಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ, ಪಿಎಸ್ಐ ರಾಜಕುಮಾರ, ಭೀಮಾಶಂಕರ, ಈರಯ್ಯ,   ಮೋಹಿನಿ ಶೆಟ್ಟಿ , ಸಿಬ್ಬಂದಿಗಳಾದ  ಪ್ರಶಾಂತ ಪಿ. ಪಾವಸ್ಕರ,  ಗಣಪತಿ ಎಸ್ ಪಟಗಾರ,  ಕೂಟೇಶ ನಾಗರವಟ್ಟಿ, ಮಹಬೂಬ  ಸೇರಿದಂತೆ ಇತರರು  ಪಾಲ್ಗೊಂಡಿದ್ದರು.. 

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...