ಹೆಬಳೆಯ ಶ್ರೀ ಶೇಡಬರಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನ - ಖಾಲಿ ಹುಂಡಿ ನದಿಯಲ್ಲಿ ಎಸೆದು ಕಳ್ಳರು ಪರಾರಿ

Source: so news | Published on 28th July 2020, 12:55 AM | Coastal News | Don't Miss |

ಭಟ್ಕಳ ತಾಲೂಕಿನ ಪುರಾಣ ಪ್ರಸಿದ್ಧ ದೇವಾಲಯವಾದ ಹೆಬಳೆಯ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನಕ್ಕೆ ಶನಿವಾರ ತಡ ರಾತ್ರಿ ಹಿಂಬದಿಯ ಗೋಡೆಯನ್ನು ಹತ್ತಿ ಒಳನುಗ್ಗಿದ ಕಳ್ಳರು ಕಾಣಿಕೆ ಡಬ್ಬವನ್ನು ಎತ್ತಿಕೊಂಡು ಹೋಗಿ ಕಾಣಿಕೆ ಹುಂಡಿಯಲ್ಲಿ ಇದ್ದ ಅಂದಾಜು ೩೦ ಸಾವಿರ ರೂಪಾಯಿ ಅಧಿಕ ಹಣವನ್ನು ಸಂಪೂರ್ಣ ದೋಚಿಕೊಂಡು ಹೋಗಿ ಕಾಣಿಕೆ ಡಬ್ಬವನ್ನು ವೆಂಕಟಾಪುರ ಹೊಳೆಯಲ್ಲಿ ಎಸೆದು ಕಳ್ಳರು ಪರಾರಿಯಾಗಿದ ಘಟನೆ ನಡೆದಿದೆ.
ದೇವಸ್ಥಾನದ ಒಳ ನುಗ್ಗುವಾಗ ಗೋಡೆಯನ್ನು ಹಾರಿ ಬಂದ ಕಳ್ಳರು ಹೊರ ಹೋಗುವಾಗ ಕಾಣಿಕೆಹುಂಡಿಯ ಭಾರದಿಂದಾಗಿ ಹಿಂದಿನ ದ್ವಾರದ ಬೀಗವನ್ನು ಮುರಿದು ಅದೇ ದ್ವಾರದ ಮೂಲಕ ಪರಾರಿಯಾಗಿರುವುದು ಕಂಡುಬದಿದೆ. ರವಿವಾರ ಬೆಳಿಗ್ಯೆ ನಿತ್ಯ ಪೂಜೆ ಗೆಂದು ಬರುತ್ತಿದ ಪೂಜಾರಿ ದೇವಸ್ತಾನ ಬಂದಾಗ ಕಾಣಿಕೆಹುಂಡಿಯೂ ಇಲ್ಲದೆ, ಅದನ್ನು ಇಟ್ಟಂತಹ ಕಟ್ಟಿಗೆಯ ಪೀಠವೂ ಚೆಲ್ಲಾಪಿಲ್ಲಿಯಾಗಿದ್ದು, ಇನ್ನೊಂದು ಡಬ್ಬ ಹಾಗೂ ಹಿಂದುಗಡೆಯ ದ್ವಾರವೂ ಕೂಡ ತೆರೆದಿರುವುದನ್ನು ನೋಡಿ ಕಂಗಾಲಾಗಿ ಕೂಡಲೇ ದೇವಸ್ಥಾನದ ಕಮಿಟಿಯ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣವೇ ಅಧ್ಯಕ್ಷರು ಕಮಿಟಿಯ ಎಲ್ಲ ಸದಸ್ಯರುಗಳಿಗೆ ತಿಳಿಸಿ, ಪೋಲೀಸ್ ರಿಗೆ ದೇವಸ್ಥಾನ ಕಳ್ಳತನ ವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಿ.ಪಿ.ಐ. ದಿವಾಕರ, ಪಿ.ಎಸ್.ಐ. ಭರತ್ ಹಾಗೂ ಗ್ರಾಮೀಣ ಠಾಣೆಯ ಎ.ಎಸ್.ಐ. ಮಂಜುನಾಥ ಗೌಡ ತಮ್ಮ ಸಿಬ್ಬಂದಿಗಳೊದಿಗೆ ಸ್ಥಳಕ್ಕಾಗಮಿಸಿ ಕಳ್ಳತನವಾದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕಾಣಿಕೆಹುಂಡಿಯನ್ನು ಹೊತ್ತೊಯ್ದು ಪರಾರಿಯಾಗಿರುವ ಕಳ್ಳರನ್ನು ಕೂಡಲೇ ಪತ್ತೆಹಚ್ಚಿ ಬಂಧಿಸುವುದಾಗಿ ಸಿ.ಪಿಐ ದಿವಾಕರ ಭರವಸೆ ನೀಡಿದ್ದಾರೆ.ನಂತರ ಸಂಜೆ ತನಕ ದೇವಸ್ಥಾನ ಆಡಳಿತ ಕಮಿಟಿಯ ಸದಸ್ಯರು ಕಳ್ಳತನ ಆಗಿದ್ದ ಕಾಣಿಕೆ ಹುಂಡಿ ಹೂಡಿಕಿದಾಗ ವೆಂಕಟಾಪುರ ಹೊಳೆಯಲ್ಲಿ ಕಾಲಿ ಕಾಣಿಕೆ ಹುಂಡಿ ಪತ್ತೆಯಾಗಿದೆ. ತನಿಖೆ ಕೈಗೊಂಡಿದ್ದಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...