ಬ್ರಿಟನ್ ಸಂಸತ್ತಿನಲ್ಲಿ ಪ್ರತಿದ್ವನಿಸಲಿರುವ ಪೌರತ್ವ ತಿದ್ವುಪಡಿ ಕಾಯ್ದೆ

Source: sonews | By Staff Correspondent | Published on 21st January 2020, 10:57 PM | Global News |

ಲಂಡನ್: ವಿವಾದಾತ್ಮಕ ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿಯಿಂದ ಭಾರತದ ಜನತೆಗೆ ಉಂಟಾಗಿರುವ ಆತಂಕದ ಬಗ್ಗೆ ಬ್ರಿಟನ್ ಸಂಸತ್ತಿನಲ್ಲಿ ಶೀಘ್ರ ನಿರ್ಣಯ ಮಂಡಿಸಿ ಚರ್ಚೆ ನಡೆಸಲಾಗುವುದು ಎಂದು ಬ್ರಿಟನ್‌ನ ಲೇಬರ್ ಪಕ್ಷದ ಸಂಸದರು ಭರವಸೆ ನೀಡಿದ್ದಾರೆ.

ಸೋಮವಾರ ಬ್ರಿಟನ್‌ನ ಪ್ಯಾಲೇಸ್ ಆಫ್ ವೆಸ್ಟ್‌ಮಿನಿಸ್ಟರ್‌ನಲ್ಲಿ ಸೌತ್ ಏಶ್ಯಾ ಸಾಲಿಡ್ಯಾರಿಟಿ ಗ್ರೂಫ್, ಕ್ಯಾಚ್‌ವಾಚ್ ಯುಕೆ ಸಂಘಟನೆಯ ಸದಸ್ಯರು ಹಾಗೂ ಕಾನೂನು ತಜ್ಞ ಗೌತಮ್ ಭಾಟಿಯಾ ಬ್ರಿಟನ್‌ನ ಸಂಸದರಾದ ಸ್ಟೀಫನ್ ಟಿಮ್ಸ್, ರೂಪಾ ಹಕ್, ಕ್ಲಾಡಿಯಾ ವೆಬ್‌ರನ್ನು ಭೇಟಿಯಾಗಿ ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿಯಿಂದ ಭಾರತದ ಜನರಲ್ಲಿ ಉಂಟಾಗಿರುವ ಆತಂಕವನ್ನು ವಿವರಿಸಿದರು.

ಈ ಸಂದರ್ಭ ಸಂಸದರು ಪೌರತ್ವ ಕಾಯ್ದೆ ಜಾರಿಯಿಂದ ಭಾರತದಲ್ಲಿ ಅಲ್ಪಸಂಖ್ಯಾತರ ಸಾಮೂಹಿಕ ಹಕ್ಕು ನಿರಾಕರಣೆಯ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಅಲ್ಲದೆ ಓವರ್‌ಸೀಸ್ ಸಿಟಿಜನ್ಸ್ ಆಫ್ ಇಂಡಿಯಾ ಸ್ಥಾನಮಾನ ಹೊಂದಿರುವ ಬ್ರಿಟಿಷ್ ಪೌರರಿಗೆ ಆಗಲಿರುವ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೆ ಸಂಸತ್ತಿನಲ್ಲಿ ಇದರ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಮಂಡಿಸುವ ಭರವಸೆ ನೀಡಿದ್ದಾರೆ ಎಂದು ಭಾಟಿಯಾ ಹೇಳಿದ್ದಾರೆ.

Read These Next

ಕಾಬೂಲ್: ಅಫ್ಘಾನಿಸ್ತಾನ: ಕಂದಹಾರ್‌ಗೆ ತಾಲಿಬಾನ್ ಲಗ್ಗೆ ಭಾರತದಿಂದ ರಾಯಭಾರ ಕಚೇರಿ ತೆರವು

ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತದ ಕಂದಹಾರ್ ನಲ್ಲಿ ಇನ್ನಷ್ಟು ಪ್ರದೇಶ ತಾಲಿಬಾನ್ ಪಡೆಗಳ ನಿಯಂತ್ರಣಕ್ಕೆ ಬಂದಿದ್ದು ನಗರದಲ್ಲಿ ...

ರಿಯೊಡಿಜನೈರೊ: ಕೋವ್ಯಾಕ್ಸಿನ್ ಖರೀದಿ ಒಪ್ಪಂದ ವಿವಾದ: ಬ್ರೆಝಿಲ್ ಅಧ್ಯಕ್ಷರ ವಿರುದ್ಧ ತನಿಖೆಗೆ ಸುಪ್ರೀಂ ಒಪ್ಪಿಗೆ

ಭಾರತದಿಂದ ಕೋವ್ಯಾಕ್ಸಿನ್ ಲಸಿಕೆ ಖರೀದಿ ಪ್ರಕ್ರಿಯೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಎದುರಿಸುತ್ತಿರುವ ಬ್ರೆಝಿಲ್ ಅಧ್ಯಕ್ಷ ಜೈರ್ ...

ಹಜ್ಜ್ ಯಾತ್ರೆಗೆ ಹೊರಗಿನವರಿಗೆ ಪರ್ವೇಶ್ ವಿಲ್ಲಾ; ಈ ವರ್ಷವು ಸೀಮಿತ್ ಮಂದಿಗೆ ಅವಕಾಶ'

ಕೊರೊನಾ ಸೋಂಕಿನಿಂದಾಗಿ ಈ ಬಾರಿ ಹಜ್ ಯಾತ್ರೆಗೆ ಸೌದಿ ಅರೇಬಿಯಾದ  60 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಿ ಸೌದಿ ಅರೇಬಿಯಾ ಸರ್ಕಾರ ...

ಏ.10 ರಿಂದ 20 ರ ವರೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ಕರ್ಫ್ಯೂಜಾರಿ-ಜಿಲ್ಲಾಧಿಕಾರಿ

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂದಿಸಿದಂತೆ ಜಿಲ್ಲಾಡಳಿತ ಎಲ್ಲಾ ಅವಶ್ಯ ಕ್ರಮಗಳನ್ನು ...