ಭಟ್ಕಳ ತಾಲೂಕಾ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ

Source: S.O. News Service | By MV Bhatkal | Published on 19th October 2021, 12:08 PM | Coastal News | Don't Miss |


ಭಟ್ಕಳ:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ ಮತ್ತು ತಾಲೂಕಾಸ್ಪತ್ರೆ ಭಟ್ಕಳ ವತಿಯಿಂದ ಸ್ತನ ಕ್ಯಾನ್ಸರ್ ಜಾಗ್ರತಿ ಮಾಸಾಚಾರಣೆಯನ್ನು ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ನಡೆಸಲಾಯಿತು. 


ಕಾರ್ಯಕ್ರಮವನ್ನು ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ಉದ್ಘಾಟಿಸಿ ಮಾತನಾಡಿದ್ದು'ಸ್ತನ ಕ್ಯಾನ್ಸರ್ ಜಾಗ್ರತಿ ಮಾಸಾಚಾರಣೆಯನ್ನು ಆರೋಗ್ಯ ಇಲಾಖೆ ವತಿಯಿಂದ ಪ್ರತಿ ವರ್ಷ ಆಕ್ಟೋಬರ್ ತಿಂಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಸ್ತನ ಕ್ಯಾನ್ಸರ್ ಎನ್ನುವುದು ಗಂಭೀರ ವಿಷಯವಾಗಿದ್ದು ಅದನ್ನು ನಾವು ಅಪಾಯಕಾರಿ ಮಟ್ಟಕ್ಕೆ ತೆಗೆದುಕೊಂಡು ಹೋಗದೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳ ಬೇಕು ಎಂದ ಅವರು ಸಾಮಾನ್ಯ ನಮ್ಮ ಆರೋಗ್ಯ ತಪಾಸಣೆಯಲ್ಲೇ ಇದು ಒಂದು ಭಾಗವಾಗಿದ್ದು, ಈ ಸಮಸ್ಯೆಯನ್ನು ಯಾರೊಂದಿಗಾದರು ಹಂಚಿಕೊಳ್ಳಲು ಹಿಂಜರಿ ಮಾಡಿಕೊಳ್ಳದೇ ವೈದ್ಯರ ಬಳಿ ನಿಮ್ಮ ಸಮಸ್ಯೆ ಬಗ್ಗೆ ಹೇಳಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ ಹಾಗೂ ತಾಲೂಕಾಸ್ಪತ್ರೆಯಿಂದ ಹಮ್ಮಿಕೊಂಡ ಜಾಗ್ರತಿ ಮಾಸಾಚಾರಣೆ ಸಾಕಷ್ಟು ಪರಿಣಾಮಕಾರಿಯಾಗಿ ಸಮಾಜದ ಹೆಣ್ಣು ಮಕ್ಕಳಿಗೆ ಸರಿಯಾಗಿ ತಲುಪಬೇಕು ಮತ್ತು ಈ ಸಮಸ್ಯೆ ಬಂದ ಯಾವುದೇ ಹೆಣ್ಣು ಮಕ್ಕಳು ಹಿಂಜರಿಯದೆ ತಾಲೂಕಾಸ್ಪತ್ರೆಗೆ ಬಂದು ವೈದ್ಯರ ಬಳಿ ಸರಿಯಾದ ಸಲಹೆ ಪಡೆದುಕೊಳ್ಳಿ ಎಂದರು. 

 


ನಂತರ ಮಾತನಾಡಿದ ಸ್ತ್ರಿರೋಗ ತಜ್ಞೆ ಡಾ. ಶಮ್ಸ್‌ ನೂರ್‌ ಕಾರ್ಯಕ್ರಮದಲ್ಲಿ ಭಾಗವಹಿದ್ದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸುವುದರ ಜೊತೆಯಲ್ಲಿ ಈ ಸಮಸ್ಯೆಯಿಂದ ಬಳಲುವ ಮಹಿಳೆಯರು ಅಥವಾ ಹೆಣ್ಣು ಮಕ್ಕಳು ಮುಜುಗರ ಮರೆತು ವೈದ್ಯರ ಬಳಿ ಬಂದು ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು. 
ನಂತರ ಕಾರ್ಯಕ್ರಮದ ಬಳಿಕ ತಾಲೂಕಾಸ್ಪತ್ರೆಯಿಂದ ಚಾಲನೆಗೊಂಡ ಜಾಗ್ರತಿ ಜಾಥಾ ಸಂತೆ ಮಾರುಕಟ್ಟೆ ಮೂಲಕ ತಾಲೂಕಾ ಪಂಚಾಯತ ಮಾರ್ಗವಾಗಿ ಸಂಶುದ್ದೀನ್ ಸರ್ಕಲ್ ಮೂಲಕ ಪುನಃ ತಾಲೂಕಾಸ್ಪತ್ರೆಗೆ ತೆರಳಿ ಜಾಥಾ ಮುಕ್ತಾಯಗೊಂಡಿತು. 
ಈ‌ ಸಂಧರ್ಭದಲ್ಲಿ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಆರ್.ಎಫ್.ಓ ಸವಿತಾ ದೇವಾಡಿಗೆ, ನಗರ ಠಾಣೆಯ ಪಿ.ಎಸ್.ಐ ಸುಮಾ ಬಿ,ಗ್ರಾಮೀಣ ಠಾಣೆ ಪಿ.ಎಸ್.ಐ ರತ್ನಾ ಕುರಿ, ಸಿಡಿಪಿಒ ಸುಶೀಲ ಮೊಗೇರ,ಹಾಗೂ  ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕರು, ಮಹಿಳಾ ಪೊಲೀಸ ಸಿಬ್ಬಂದಿ, ಮತ್ತು ತಾಲೂಕಾಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

Read These Next

ವಿಶ್ವ ವಿಕಲಚೇತನರ ದಿನಾಚರಣೆ ಕಾನೂನು ಸೇವಾ ಪ್ರಾಧಿಕಾರದಿಂದ ಸಹಕಾರ, ನ್ಯಾಯಾಧೀಶೆ ಪುಪ್ಷಲತಾ.

ಧಾರವಾಡ : ವಿಕಲಚೇತನರಿಗೆ ಅನುಕಂಪದ ಕಾರಣದಿಂದ ಅವಕಾಶ ವಂಚಿತರಾಗಬಾರದು, ಇಂತಹ ಮಕ್ಕಳಿಗೆ ಅಸಡ್ಯೆ ತೋರದೆ ಕಾಳಜಿ ಪೂರ್ವಕವಾಗಿ ...

ಎಸ್ ಡಿ ಎಂ ಹೊರ ಮತ್ತು ಒಳ ರೋಗಿಗಳ ವಿಭಾಗ ಸೇವೆಗಳ ಪುನರಾರಂಭಕ್ಕೆ ಷರತ್ತುಬದ್ಧ ಅನುಮತಿ : ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ.

ಧಾರವಾಡ : ಸತ್ತೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ(ಎಸ್‌ಡಿಎಂಸಿಹೆಚ್)ಯ ಆವರಣದಲ್ಲಿ ಕಳೆದ ...

ಗೃಹರಕ್ಷಕರ ಈಶಾನ್ಯ ವಲಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟ ದೈಹಿಕ, ಮಾನಸಿಕವಾಗಿ ಸದೃಢರಾಗಿರಲು ಕ್ರೀಡೆಯಲ್ಲಿ ಪಾಲ್ಗೊಳ್ಳಿ: ವಿಮ್ಸ್ ನಿರ್ದೇಶಕ ಗಂಗಾಧರ್

ಬಳ್ಳಾರಿ : ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಯಾವುದಾದರೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿಮ್ಸ್ ನಿರ್ದೇಶಕ ...