ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಬ್ರಹ್ಮಾವರ ತಾಲೂಕಿನ ವಿದ್ಯಾರ್ಥಿಗಳಿಗೆ ನಮ್ಮ ನಾಡ ಒಕ್ಕೂಟದಿಂದ ಸನ್ಮಾನ

Source: SO News | By Laxmi Tanaya | Published on 31st August 2021, 8:13 AM | Coastal News | Don't Miss |

ಬ್ರಹ್ಮಾವರ : ನಮ್ಮ ನಾಡ ಒಕ್ಕೂಟ ಬ್ರಹ್ಮಾವರ ತಾಲೂಕು ಘಟಕದ ವತಿಯಿಂದ  ಆದಿತ್ಯವಾರ ಬ್ರಹ್ಮಾವರದ ಮದರ್ ಪ್ಯಾಲೇಸ್ ಆಡಿಟೊರಿಯಂನಲ್ಲಿ 
ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸರಕಾರಿ ಉದ್ಯೋಗ ಮಾಹಿತಿ ಶಿಬಿರ ನಡೆಯಿತು.

 ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಶೌಕತ್ ಅಲಿ ಬಾರ್ಕೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ತಾಲೂಕಿನ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಿಇಟಿ ಪರೀಕ್ಷೆಯಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗದ ಮೂವರು ವಿದ್ಯಾರ್ಥಿಗಳನ್ನು ಅವರ ಮನೆಗಳಲ್ಲಿ ಸನ್ಮಾನಿಸಲಾಯಿತು.

 ಸಂಪನ್ಮೂಲ ವ್ಯಕ್ತಿಗಳಾಗಿ ಅಬ್ದುಲ್ ರಜಾಕ್ ಕಾಪು ಮತ್ತು ನೌಝಲ್ ಅಹ್ಮದ್ ಮುಲ್ಕಿ ಭಾಗವಹಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ತಾಜುದ್ದೀನ್ ಇಬ್ರಾಹಿಮ್ ಉಪ್ಪಿನಕೋಟೆ ನಿರೂಪಣೆಯನ್ನು ಮಾಡಿದರು. 

 ಸನ್ಮಾನಿಸಲ್ಪಟ್ಟ ಪಿಯುಸಿ ವಿದ್ಯಾರ್ಥಿಗಳು: 
ಮುಹಮ್ಮದ್ ಶಾಹೀಲ್ (98.16%), ಅಮಾನ್ ಅಹ್ಮದ್ ಶೇಖ್ ಬ್ರಹ್ಮಾವರ (98%), ನಿಶಾ ಇಮ್ರಾ ಬ್ರಹ್ಮಾವರ (96.83%), ನೇಹಾ ಸಾರಾ (95%), ಔಸುಫ್ ಮುಹಮ್ಮದ್ ಬ್ರಹ್ಮಾವರ (92%), ಯಾಫಿಯಾ ಯುಸ್ರಾ, ಕೋಟ (90%) ಮುಸ್ಕಾನ್.,

ಸನ್ಮಾನಿಸಲ್ಪಟ್ಟ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು :
ನುಝ್ಹತ್ ಫಾತಿಮಾ ಸುಲ್ತಾನ ಬ್ರಹ್ಮಾವರ (95%), ತೂಬಾ ಫಾತಿಮಾ, ಹೋಡೆ ತೋನ್ಸೆ (97.76%), ಶಮಾ ರೋಶನ್, ಸಾಸ್ತಾನ (94.24%), ಅನಿಸ್ ಫಾತಿಮಾ ಬ್ರಹ್ಮಾವರ (93%), ಅಥ್ಶೀಯಾ ಎಸ್. ಹಾರಾಡಿ ಮೂಡುಬೆಟ್ಟು ಬ್ರಹ್ಮಾವರ (91%), ದೀನಾ ಅಹದ್ ಬ್ರಹ್ಮಾವರ (90%).

ಈ ಸಂದರ್ಭದಲ್ಲಿ ಮುಹಿಯ್ಯುದ್ದೀನ್ ಬಾವಾ (ಮಾಜಿ ಶಾಸಕರು) ಶಭೀ ಅಹ್ಮದ್ ಖಾಝಿ (ಅಧ್ಯಕ್ಷರು ಜಮೀಯ್ಯತುಲ್ ಫಲಾಹ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ) ಡಾ/ ರಿಝ್ವಾನ್ ಅಹ್ಮದ್ ಕಾರ್ಕಳ (ಉಪಾಧ್ಯಕ್ಷರು ಎನ್ಎನ್ಒ ಸೆಂಟ್ರಲ್ ಕಮಿಟಿ) ಅಬ್ದುಲ್ ಹಮೀದ್ ಮೂಡಬಿದ್ರೆ (ಕೋಶಾಧಿಕಾರಿ  ಎನ್ಎನ್ಒ  ಸೆಂಟ್ರಲ್ ಕಮಿಟಿ), ಹುಸೇನ್ ಹೈಕಾಡಿ (ಸಂಘಟನಾ ಕಾರ್ಯದರ್ಶಿ ಎನ್ಎನ್ಒ ಸೆಂಟ್ರಲ್ ಕಮಿಟಿ), ಇನಾಯತುಲ್ಲಾ ಶಾಬಂದ್ರಿ (ಜಿಲ್ಲಾಧ್ಯಕ್ಷರು ಎನ್ಎನ್ಒ ಉತ್ತರ ಕನ್ನಡ ಜಿಲ್ಲೆ), ನಖ್ವಾ ಯಹ್ಯಾ ಮಲ್ಪೆ (ಮಾಜಿ ಅಧ್ಯಕ್ಷರು, ವಕ್ಫ್ ಸಲಹಾ ಸಮಿತಿ ಉಡುಪಿ ಜಿಲ್ಲೆ) ಮುಷ್ತಾಕ್ ಅಹ್ಮದ್ ಬೆಳ್ವೆ (ಜಿಲ್ಲಾಧ್ಯಕ್ಷರು ಎನ್ಎನ್ಒ ಉಡುಪಿ ಜಿಲ್ಲೆ), ಶಾಕಿರ್ ಹಾವಂಜೆ (ಉಪಾಧ್ಯಕ್ಷರು ಎನ್ಎನ್ಒ ಉಡುಪಿ ಜಿಲ್ಲೆ), ಮೌ/ ಝಮೀರ್ ಅಹ್ಮದ್ ರಶಾದಿ (ಪ್ರಧಾನ ಕಾರ್ಯದರ್ಶಿ ಎನ್ಎನ್ಒ ಉಡುಪಿ ಜಿಲ್ಲೆ), ಅಬ್ದುಲ್ ಸಮೀ ಹಳಗೇರಿ (ಅಧ್ಯಕ್ಷರು ಬೈಂದೂರು ತಾಲೂಕು ಘಟಕ), ಇಬ್ರಾಹಿಂ ಆದಮ್ (ಕಾರ್ಯದರ್ಶಿ ಬ್ರಹ್ಮಾವರ ತಾಲೂಕು ಘಟಕ), ಮೊಹಮ್ಮದ್ ಆಸಿಫ್ ಬೈಕಾಡಿ (ಕೋಶಾಧಿಕಾರಿ, ಬ್ರಹ್ಮಾವರ ತಾಲೂಕು ಘಟಕ) ಹಾಗೂ ಬ್ರಹ್ಮಾವರ ತಾಲೂಕು ಘಟಕದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Read These Next

ಕಾರವಾರ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಚನೆ

ಮುಂದಿನ ಎರಡು ವರ್ಷದೊಳಗಾಗಿ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ...