ಸರ್ಪನಕಟ್ಟೆಯ ವಾಸುಕಿ ಸಹಕಾರಿ ಸಂಘಕ್ಕೆ ಬ್ರಹ್ಮಾನಂದ ಶ್ರೀಗಳ ಭೇಟಿ.

Source: SO News | By Laxmi Tanaya | Published on 3rd December 2021, 9:22 PM | Coastal News | Don't Miss |

ಭಟ್ಕಳ : ತಾಲೂಕಿನ ಸರ್ಪನಕಟ್ಟೆಯಲ್ಲಿರುವ ಶ್ರೀ ವಾಸುಕಿ ಸೌಹಾರ್ದ ಸಹಕಾರಿಯ ಪ್ರಾರಂಭದ ಪೂರ್ವಭಾವಿಯಾಗಿ, ಶುಕ್ರವಾರ  ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಗಳು ಭೇಟಿ ನೀಡಿದರು.                                         

    ಈ ಸಂದರ್ಭದಲ್ಲಿ ಆಶೀರ್ವದಿಸಿ ಮಂತ್ರಾಕ್ಷತೆ ನೀಡಿದ ಶ್ರೀಗಳು,  ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಯಾಗಿ ಜನಸಾಮಾನ್ಯರಿಗೆ ಈ ಸಂಸ್ಥೆಯಿಂದ ಎಲ್ಲಾ ಬ್ಯಾಂಕಿಂಗ್ ಸೌಲಭ್ಯ ಸಿಗಲಿ ಎಂದು ಹಾರೈಸಿದರು.  

                            ಸೀತಾರಾಮ ಚಂದ್ರ ಮತ್ತು ಶ್ರೀಲಕ್ಷ್ಮಿ ಹಾಗೂ ಎಲ್ಲ ದೇವತೆಗಳ ಅನುಗ್ರಹ ನಿಮ್ಮ ಸಂಸ್ಥೆಯ ಮೇಲೆ ಇರಲಿ ಎಂದು ಆಶೀರ್ವದಿಸಿದರು. ಸಹಕಾರಿಯ  ಕಾರ್ಯಚಟುವಟಿಕೆ ಬಗ್ಗೆ ವಿಚಾರಿಸಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರಿಗೆ ದೇಪೋಸಿಟ್ ಲಾಕರ್ ಸೌಲಭ್ಯ ಹಾಗೂ ಬ್ಯಾಂಕಿನ ಇಂಟೀರಿಯರ್ ಡೆಕೋರೇಷನ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.        

           ವೃತ್ತಿಪರ ನಿರ್ದೇಶಕ  ಸುಭಾಷ್ ಶೆಟ್ಟಿ ಮತ್ತು ರೇಣುಕಾ ದಂಪತಿಗಳು ಶ್ರೀಗಳಿಗೆ ಪಾದ ಪೂಜೆಯನ್ನು ನೆರವೇರಿಸಿದರು. 

ಇದೇ ಸಂದರ್ಭದಲ್ಲಿ ಸಹಕಾರಿಯ ನಿರ್ದೇಶಕ ಮಹದೇವ ನಾಯ್ಕ, ಗಣಪತಿ ಆಚಾರ್ಯ,  ಸಂತೋಷ ಶೇಟ್, ಆಶಾ ಶೆಟ್ಟಿ ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ನಾಯ್ಕ್,  ಮಂಜುನಾಥ್ ಮುರುಡೇಶ್ವರ ಸಹಕಾರಿಯ ಸಿಬ್ಬಂದಿಗಳು ಇನ್ನಿತರ ಊರಿನ ಗಣ್ಯರು ಉಪಸ್ಥಿತರಿದ್ದರು.  ಪ್ರಕಾಶ್ ಶಿರಾಲಿ ಗುರುಗಳನ್ನು ಸ್ವಾಗತಿಸಿ ಗುರುಗಳ ನಿಸ್ವಾರ್ಥ ಸೇವೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದನ್ನು ಸ್ಮರಿಸಿದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...