ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸೇವಾ ಸಂಸ್ಥೆ ವತಿಯಿಂದ 6ನೆ ವರ್ಷದ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮ

Source: so news | By MV Bhatkal | Published on 17th June 2019, 4:50 PM | Coastal News | Don't Miss |

ಇಚ್ಛಾಶಕ್ತಿ ಯಿಂದ ಸಾಧನೆ ಸಾಧ್ಯ:ಶಾಸಕ ಸುನೀಲ ನಾಯ್ಕ

ಭಟ್ಕಳ: ಇಲ್ಲಿನ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಭಾನುವಾರದಂದು ನಡೆದ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸೇವಾ ಸಂಸ್ಥೆ ವತಿಯಿಂದ 6ನೆ ವರ್ಷದ ಪಠ್ಯ ಪುಸ್ತಕ ವಿತರಣಾ ಸಮಾರಂಭ ಕಾರ್ಯಕ್ರಮ ನಡೆಯಿತು 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ನಡೆಯುತ್ತಿರುವುದು ಒಂದು ಅವಿಸ್ಮರಣೀಯ ದಿನವಾಗಿದ್ದು, ಸತತ ಆರು ವರ್ಷಗಳಿಂದ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸೇವಾ ಸಂಸ್ಥೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸಮಾಜದ ಎಲ್ಲರ ಸಹಕಾರದೊಂದಿಗೆ ಸಂತಸದಿಂದ ಸನ್ಮಾನಿಸುತ್ತಾ ಬಂದಿದ್ದು. ಇಂತಹ ಕಾರ್ಯಕ್ರಮಕ್ಕೆ ನಾವೆಲ್ಲರೂ ಸೇವಾ ಮನೋಭಾವದಿಂದ ಕೈಜೋಡಿಸ ಬೇಕು ಹಾಗೆ  ಚಂದ್ರು ನಾಯ್ಕರವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲು ಸತತ ನಾಲ್ಕು ವರ್ಷಗಳಿಂದ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿರುವುದು ಸಂತಸ ತಂದಿದ್ದು, ನಾವೆಲ್ಲರೂ ಇಂತಹ ಮನೋಭಾವನೆಯನ್ನು ಅನುಸರಿಸಿ ಸಹಾಯ ಮಾಡಿದರೆ ಇಂತಹ ಕಾರ್ಯಕ್ರಮ ಮಾಡಲು ಇನ್ನಷ್ಟು ಉತ್ತೇಜನ ಮಾಡಿದಂತಾಗುತ್ತದೆ, ಕೆಲವರು ಕಾಟಾಚಾರಕ್ಕೆ 6-7 ವರ್ಷಗಳ ಕಾಲ  ಕಾರ್ಯಕ್ರಮ ಮಾಡಿ ನಿಲ್ಲಿಸುದಕ್ಕಿಂತ ನಿರಂತರ ಇಂಥಹ ಕಾರ್ಯಕ್ರಮಕ್ಕೆ ಎಲ್ಲರೂ ಕೈ ಜೋಡಿಸಿ ಬೇಕು. ವಿದ್ಯಾರ್ಥಿಗಳಲ್ಲಿ ಇಚ್ಚಾ ಶಕ್ತಿ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು ಎಂದು ಹೇಳಿದರು.
ನಂತರ ಶ್ರೀ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಅಧ್ಯಕ್ಷರಾದ ಎಂ.ಆರ್ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಾಗು ಧಾರಾವಾಹಿ ಮತ್ತು ಮೊಬೈಲಗಳಿಂದ ದೂರವಾಗಿ ದೇವರ ಜ್ಞಾನ ಮಾಡುವುದರ ಮೂಲಕ ಹಾಗೂ ತಂದೆ ತಾಯಿಗಳಿಗೆ ಗೌರವ ಕೊಡುವುದರೊಂದಿಗೆ ಸರಿಯಾದ ವಿದ್ಯಾಭ್ಯಾಸ ಪಡೆದುಕೊಂಡು ಸಮಾಜಕ್ಕೆ ಹಾಗೂ ತಂದೆ ತಾಯಿಗಳಿಗೆ ಗೌರವತರುವಂತರವರಾಗ ಬೇಕು ಎಂದು ಹೇಳಿದರು.
ನಂತರ ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದು ಸನ್ಮಾನಿತಗೊಂಡ  ಕಾವ್ಯ ನಾಯ್ಕ ಮಾತನಾಡಿ ನನಗೂ ಹಾಗು ನನ್ನಂತ ಹಲವು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಲವು ವರ್ಷಗಳಿಂದ ಈ ಸಂಸ್ಥೆ ಸಹಾಯ ಮಾಡುತ್ತಾ ಬಂದಿದ್ದು. ಈ ಸಂಸ್ಥೆಗೆ ಚಿರರುಣಿಯಾಗಿರುತ್ತೇನೆ ಹಾಗೂ ನಾನು ಉನ್ನತ ವಿದ್ಯಾಭ್ಯಾಸ ಪಡೆದು ಒಳ್ಳೆಯ ಉದ್ಯೋಗಕ್ಕೆ ಸೇರಿದ ಮೇಲೆ ನನ್ನಿಂದಾಗುವ ಸಹಾಯವನ್ನು ಈ ಸಂಸ್ಥೆಗೆ ಮಾಡುತ್ತೇನೆ ಎಂದು ಹೇಳಿದರು.
ಇದಕ್ಕೂ ಪೂರ್ವದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿವರುವ ಕುಮಾಟಾದ ನಾಗಾಂಜಲಿ ಹಾಗೂ ಸತತ ನಾಲ್ಕು ವರ್ಷದಿಂದ ಪಠ್ಯ ಪುಸ್ತಕ ವಿತರಣೆಗೆ ಧನ ಸಹಾಯ ಮಾಡುತ್ತಿರುವ ಚಂದ್ರು ನಾಯ್ಕ , ತಾಲೂಕಾ ಅಸ್ಪತ್ರೆಯ ವೈದ್ಯರಾದ ಲಕ್ಷ್ಮೀಶ ನಾಯ್ಕ ಹಾಗೂ ಹಲವರನ್ನು  ಸನ್ಮಾನಿಸಲಾಯಿತು
ನಂತರ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗಿ ಶಾಸಕರು ಹಾಗೂ ಅತಿಥಿಗಳಿಂದ ಪಠ್ಯ ಪುಸ್ತಕವನ್ನು  ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಆರ್ ನಾಯ್ಕ, ಜೆ.ಎನ್ ನಾಯ್ಕ, ಸುಬ್ರಾಯ ನಾಯ್ಕ, ರಾಜೇಶ ನಾಯ್ಕ, ಲಕ್ಷ್ಮಿಶ ನಾಯ್ಕ, ರಾಘವೇಂದ್ರ ನಾಯ್ಕ, ನಾಗಾಂಜಾಲಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...