ದಾಂಡೇಲಿಯಲ್ಲಿ ಮೊಸಳೆ ಬಾಯಿಗೆ ಸಿಲುಕಿದ ಬಾಲಕ ಶವವಾಗಿ ಪತ್ತೆ.

Source: SO News | By Laxmi Tanaya | Published on 26th October 2021, 5:19 PM | Coastal News |

ದಾಂಡೇಲಿ: ನಗರದ ಕಾಳಿ ನದಿಯಲ್ಲಿ ಮೊಸಳೆ ಪಾಲಾಗಿದ್ದ ಬಾಲಕನ ಮೃತದೇಹವನ್ನು ಯುವಕರ ತಂಡ ಸಿನೀಮಿಯ ರೀತಿಯಲ್ಲಿ ಪತ್ತೆ ಹಚ್ಚಿದ್ದಾರೆ.

ವಿನಾಯಕ ನಗರದಲ್ಲಿ ಭಾನುವಾರ ಮುಯೀನ್ ಮೆಹಬೂಬ್ ಅಲಿ(15) ಮೀನು ಹಿಡಿಯಲು ಹೋಗಿದ್ದಾಗ ಮೊಸಳೆ ಎಳೆದೊಯ್ದಿತ್ತು. ಘಟನೆಯಿಂದ ದಾಂಡೇಲಿ ನಾಗರಿಕರು ಬೆಚ್ಚಿಬಿದ್ದಿದ್ದರು. ಮಗನನ್ನ ಕಳೆದುಕೊಂಡ ಕುಟುಂಬದವರು ದುಃಖದಲ್ಲಿದ್ದರು.

ಕಳೆದ ಎರಡು ದಿನಗಳಿಂದ ಬಾಲಕನಿಗಾಗಿ ನದಿಯಲ್ಲಿ ಯುವಕರ ತಂಡ ರಬ್ಬರ್ ಬೋಟ್, ದೋಣಿಗಳ ಮೂಲಕ ಅರಣ್ಯ ಇಲಾಖೆ ಸಹಾಯದಿಂದ ಶೋಧ ನಡೆಸಿದ್ದರು. ಇಂದು ಮೃತದೇಹ ಪತ್ತೆವಹಚ್ಚಿದ್ದು, ಮೊಸಳೆ ಬಾಯಿಯಿಂದ ಬಾಲಕನ ಮೃತದೇಹವನ್ನ ಬಿಡಿಸಿದ್ದಾರೆ.

ಗಣೇಶ ಗುಡಿ ಲೈಪ್ ಗಾರ್ಡ್ ರವಿಕುಮಾರ್ ನಾಯ್ಕ, ಮಹಮದ್ , ಮಾಬಿನ್, ಸೋಮಶೇಖರ್, ಗಣೇಶ ಸೈಯದ್ ಸೇರಿದಂತೆ ಇತರರು ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...