ಅ. 3 ರಂದು ದೋಣಿ ತಪಾಸಣೆ

Source: sonews | By Staff Correspondent | Published on 20th September 2019, 5:27 PM | Coastal News |


ಕಾರವಾರ:  ಜಿಲ್ಲಾ ವ್ಯಾಪ್ತಿಯಲ್ಲಿ ಸೀಮೆಎಣ್ಣೆ ಬಳಸಿ ಔಟಬೋರ್ಡ ಇಂಜೀನ್  ಮೂಲಕ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳ ಭೌತಿಕ ತಪಾಸಣೆಯನ್ನು ಜಿಲ್ಲೆಯಾದ್ಯಂತ ಒಂದೇ ಹಂತದಲ್ಲಿ ಅಕ್ಟೋಬರ 3 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 6 ರವರೆಗೆ  ಕೈಗೊಳ್ಳಲಾಗುವುದು ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
  
ಅ. 3 ರಂದು ಎಲ್ಲಾ ದೋಣಿ ಮಾಲೀಕರು ತಮ್ಮ ತಮ್ಮ ದೋಣಿಗಳ ಮೇಲೆ ಬಣ್ಣದಲ್ಲಿ ದೋಣಿಯ ಹೆಸರು ಹಾಗೂ ನೊಂದಣಿ ಸಂಖ್ಯೆಯನ್ನು ಬರೆಯಿಸಿ, ಮೀನುಗಾರಿಕೆ ಪರವಾನಿಗೆ, ಸೀಮೆಎಣ್ಣೆ ಪರ್ಮಿಟ್, ಆಧಾರಕಾರ್ಡ ಹಾಗೂ ಬ್ಯಾಂಕ ಪಾಸಪುಸ್ತಕಸದ ಝರಾಕ್ಸ ಪ್ರತಿಗಳ ದಾಖಲೆಗಳೊಂದಿಗೆ ಈ ಕೆಳಕಂಡ ಸ್ಥಳಗಳಲ್ಲಿ ಹಾಜರುಪಡಿಸಲು ಈ ಮೂಲಕ ಸೂಚಿಸಲಾಗಿರುತ್ತದೆ. 

ಕಾರವಾರ ತಾಲೂಕ ವ್ಯಾಪ್ತಿಯಲ್ಲಿ, ಮೀನುಗಾರಿಕೆ ಉಪನಿರ್ದೇಶಕರ ಕಾರವಾರ ಕಛೇರಿ ಎದುರುಗಡೆಯ ಬೀಚ್,  ಮಾಜಾಳಿ ಬೀಚ್ (ಗೊಟ್ನಭಾಗ), ಮುದಗಾ (ಬೀಚ್), ಅಂಕೋಲಾ ತಾಲೂಕಿನಲ್ಲಿ  ಹಾರವಾಡ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರುಗಡೆ ಬೀಚ್,  ಕುಮಟಾ ತಾಲೂಕು ವ್ಯಾಪ್ತಿಯಲ್ಲಿ ವನ್ನಳ್ಳಿ ಬೀಚ್. ತದಡಿ ಬಂದರು. ಅಳ್ವೆದಂಡೆ.  ಶಸಿಹಿತ್ತಲು, ಹೊನ್ನಾವರ ತಾಲೂಕಿನಲ್ಲಿ ಟೊಂಕಾ ಕಾಸರಕೋಡ (ಬಂದರು), ಮಂಕಿ (ಕೋಡಿ ಬೀಚ್), ಭಟ್ಕಳ ತಾಲೂಕಿನಲ್ಲಿ ಮುಂಡಳ್ಳಿ ಬೆಲೆ (ಬೀಚ್), ತೆಂಗಿನಗುಂಡಿ ಬಂದರು. ಮುರ್ಡೇಶ್ವರ ಬೀಚ್‍ಗಳಲ್ಲಿ  ದೋಣಿಗಳ ಭೌತಿಕ ಪರಿಶೀಲನೆ ಮಾಡಲಾಗುವುದು. 
 
ಬಣ್ಣದಲ್ಲಿ ಬರೆಯಿಸದ ಹಾಗೂ ತಪಾಸಣೆಗೆ ಒಳಪಡಿಸದ ದೋಣಿಗಳ 2019-20ನೇ ಸಾಲಿನ ಸೀಮೆಎಣ್ಣೆ ಪಡೆಯುವ ಪರ್ಮಿಟನ್ನು ರದ್ದುಪಡಿಸಲಾಗುವುದು ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿರುತ್ತಾರೆ. 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...