ಐಎಂಎ ವಂಚಕ ಮನ್ಸೂರ್ ಖಾನ್ ವಿರುದ್ಧ ಬ್ಲೂ ಕಾರ್ನರ್‌ ನೋಟೀಸ್‌ ಜಾರಿ

Source: so news | By MV Bhatkal | Published on 23rd June 2019, 6:14 PM | State News | Don't Miss |

ಬೆಂಗಳೂರು: ಸಾವಿರಾರು ಕೋಟಿ ವಂಚನೆ ನಡೆಸಿ ದುಬೈಗೆ ಪರಾರಿಯಾಗಿರುವ ಐಎಂಎ ಜ್ಯುವೆಲ್ಲರ್ಸ್ ಮಾಲೀಕ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ವಿರುದ್ಧ ಇಂಟರ್ಪೋಲ್ ಬ್ಲೂ ಕಾರ್ನರ್ ನೋಟೀಸ್‌ (ಬಿಸಿಎನ್) ಹೊರಡಿಸಿದೆ. ಎಸ್‌ಐಟಿ ಕೋರಿಕೆಯ ಆಧಾರದ ಮೇಲೆ, ಕೇಂದ್ರ ತನಿಖಾ ವಿಭಾಗದ ಇಂಟರ್‌ಪೋಲ್ ವಿಭಾಗವು ಜೂನ್ 8 ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪರಾರಿಯಾಗಿದ್ದಾನೆ ಎನ್ನಲಾದ ಮನ್ಸೂರ್ ವಿರುದ್ಧ ಬಿಸಿಎನ್ ಹೊರಡಿಸಿದೆ.
ಕ್ರಿಮಿನಲ್ ತನಿಖೆಗೆ ಅಗತ್ಯವಾಗಿರುವ  ವ್ಯಕ್ತಿಯನ್ನು ಪತ್ತೆಹಚ್ಚಲು, ಗುರುತಿಸಲು ಅಥವಾ ವ್ಬಶಕ್ಕೆ ಪಡೆಯಲು ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಲಾಗುತ್ತದೆ.
"ಇಂಟರ್ಪೋಲ್ ನೋಟಿಸ್ ನಂತರ ಮನ್ಸೂರ್ ಪಾಸ್‌ಪೋರ್ಟ್‌ ಅನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ..ಅವರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವುದು ಕಷ್ಟಕರವಾಗಿದೆ" ಎಂದು ಅಧಿಕೃತ ಮೂಲವೊಂದು ತಿಳಿಸಿದೆ. 
ಏತನ್ಮಧ್ಯೆ, ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕಂಪನಿಯ 13 ನಿರ್ದೇಶಕರನ್ನು ವಿಚಾರಣೆ ನಡೆಸಿದ ನಂತರ, ಐಎಂಎ ಹಗರಣದಲ್ಲಿ ಎಸ್‌ಐಟಿಗೆ ಕೆಲವು ಉತ್ತಮ ಸಾಕ್ಷಿಗಳು ದೊರಕಿದೆ.ಎಂದು ತಿಳಿದುಬಂದಿದೆ.
35 ಸಾವಿರಕ್ಕೆ ಹೆಚ್ಚು ಜನರಿಂದ ಎರಡು ಸಾವಿರ ಕೋಟಿ ಸಂಗ್ರಹಿಸಿದ್ದ ಮನ್ಸೂರ್‌ ಖಾನ್‌ ಮಾಲೀಕತ್ವದ ಐಎಂಎ ಜ್ಯುವೆಲ್ಸ್‌ ಈಗ ಖಾಯಂ ಆಗಿ ಮುಚ್ಚಿದೆ.ಹೂಡಿಕೆ ಮಾಡಿದ್ದ ಸಾವಿರಾರು ಮಂದಿ ಪೋಲೀಸರಿಗೆ ದೂರು ನೀಡಿದ್ದು ಎಸ್‌ಐಟಿ ಪೊಲೀಸರು ಆರೋಪಿಯ ಪತ್ತೆಗೆ ಶತಪ್ರಯತ್ನ ನಡೆಸಿದ್ದಾರೆ.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...