ಶಮ್ಸ್ ನೂರ್ ನರ್ಸಿಂಗ್ ಹೋಂ ನಲ್ಲಿ ರಕ್ತದಾನ ಶಿಬಿರ

Source: sonews | By Staff Correspondent | Published on 25th August 2019, 8:02 PM | Coastal News | Don't Miss |

ಭಟ್ಕಳ: ಇಲ್ಲಿನ ರಾ.ಹೆ.66ರಲ್ಲಿನ ಶಮ್ಸ್ ನೂರ್ ನರ್ಸಿಂಗ್ ಹೋಂ ನಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆ ಹಾಗೂ ಉಡುಪಿಯ ಸರ್ಕಾರಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರ ಭಾನುವಾರ ನಡೆಯಿತು. ಈ ಶಿಬಿರದಲ್ಲಿ 44ಯುನಿಟ್ ಗಳಷ್ಟು ರಕ್ತವನ್ನು ಸಂಗ್ರಹಿಸಲಾಯಿತು ಎಂದು ಸಂಘಟಕರು ತಿಳಿಸಿದ್ದಾರೆ. 

ಭಟ್ಕಳ, ಮುರುಡೇಶ್ವರ, ಮಂಕಿ ಮತ್ತು ಸುತ್ತಮುತ್ತಲಿನ ರೋಗಿಗಳಿಗೆ ರಕ್ತ ಬೇಕಾದಲ್ಲಿ ಕುಂದಾಪುರ ಉಡುಪಿ, ಮತ್ತು ಮಂಗಳೂರು ಕಡೆ ಹೋಗಬೇಕಾದಂತ ಅನಿವಾರ್ಯ ಸ್ಥಿತಿ ಉಂಟಾಗಿದ್ದು ಭಟ್ಕಳದಲ್ಲಿಯೇ ಒಂದು ಉತ್ತಮ ದರ್ಜೆಯ ಬ್ಲಡ್ ಬ್ಯಾಂಕ್ ಅವಶ್ಯಕತೆ ಇದೆ ಎನ್ನುವ ಮಾತು ಹಲವು ದಿನಗಳಿಂದ ಕೇಳಿ ಬರುತ್ತಿದೆ. 

ಈ ಸಂದರ್ಭದಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಡಾ. ಶಮ್ಸ್ ನೂರ್, ಡಾ.ವೀನಾ, ಅಬ್ದುಸ್ಸಮಿ ಕೋಲಾ, ನಿಸಾರ್ ಆಹ್ಮದ್ ರುಕ್ನುದ್ದೀನ್, ನಝೀರ್ ಕಾಶಿಮಜಿ, ಸೈಯ್ಯದ್ ಇಮ್ರಾನ್ ಲಂಕಾ, ಸೈಯ್ಯದ್ ಖುತುಬ್ ಲಂಕಾ ಮತ್ತಿತರರು ಉಪಸ್ಥಿತರಿದ್ದರು. 

Read These Next

ಅಗತ್ಯ ಭದ್ರತೆಯಡಿ ರಾತ್ರಿ ಪಾಳಿಯ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ಮಾಡಿಕೊಡಲಾಗಿದೆ : ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ

ಮುಂಡಗೋಡ : ಒಂದು ಮುಕ್ಕಾಲು ಕೋಟಿಗೂ ಹೆಚ್ಚು ಇರುವ ಬಡಕಾರ್ಮಿಕರ ಜೀವನಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತೇನೆ ಈಗಾಗಲೇ ತಿದ್ದುಪಡಿ ...

ಪ್ರತಿಭಟನೆ ಹತ್ತಿಕ್ಕಲು ಸರಕಾರಕ್ಕೆ ಯಾವುದೇ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಗುಪ್ತಾ

ಹೊಸದಿಲ್ಲಿ: ಭಿನ್ನಮತದ ನಾಶ ಅಥವಾ ನಿರುತ್ತೇಜನ ಪ್ರಜಾಪ್ರಭುತ್ವದ ಮೇಲೆ ಘೋರ ಪರಿಣಾಮ ಬೀರುತ್ತದೆ. ಪ್ರತಿಭಟನೆ ಹಿಂಸಾಚಾರಕ್ಕೆ ...