ಹೊನ್ನಾವರದ ಪರೇಶ ಮೇಸ್ತಾ ಸಾವಿನ ಹಿಂದೆ ಬಿಜೆಪಿ ಕೈವಾಡ: ಬಿ.ಕೆ. ಹರಿಪ್ರಸಾದ್

Source: S O News service | By I.G. Bhatkali | Published on 8th December 2021, 1:21 PM | Coastal News |

ಭಟ್ಕಳ: ಹೊನ್ನಾವರದ ಪರೇಶ ಮೇಸ್ತನ ಸಾವಿನ ಹಿಂದೆ ಬಿಜೆಪಿ ಕೈವಾಡ ಇರುವ ಶಂಕೆ ಬಲವಾಗಿದ್ದು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ನ್ಯಾಯಪೀಠದ ಮುಂದೆ ಪ್ರಕರಣದ ಸಮಗ್ರ ವಿಚಾರಣೆ ನಡೆಯಬೇಕು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ.

ಅವರು ಭಟ್ಕಳದಲ್ಲಿ ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರೇಶ ಮೇಸ್ತ ಸಾವಿಗೀಡಾದ ಕೂಡಲೇ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಿಬಿಐ ತನಿಖೆಗೆ ವಹಿಸಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಪರೇಶ ಮೇಸ್ತನ ಸಾವಿಗೆ ನ್ಯಾಯ ಕೊಡಿಸುವ ಮಾತನ್ನಾಡಿದ್ದರು. ಆದರೆ ಇಷ್ಟು ವರ್ಷಗಳು ಕಳೆದರೂ ಯಾವುದೇ ವಿಚಾರಣೆ ನಡೆದಿಲ್ಲ. ಚುನಾವಣೆಗೋಸ್ಕರ ಬಿಜೆಪಿಯೇ ಇದನ್ನು ನಡೆಸಿರುವ ಸಾಧ್ಯತೆ ಇದ್ದು, ಇದನ್ನು ಬಿಜೆಪಿ ನಾಯಕರೋರ್ವರು ನನಗೆ ಬ್ರಹ್ಮಾವರದಲ್ಲಿ ಭೇಟಿಯಾಗಿ ತಿಳಿಸಿದ್ದಾರೆ, ವಿಚಾರಣೆ ನಡೆದರೆ ಬಿಜೆಪಿ ನಾಯಕರೇ ಸಿಲುಕಿಕೊಳ್ಳುತ್ತಾರೆ ಎನ್ನುವ ಭಯ ಅವರನ್ನು ಕಾಡುತ್ತಿದೆ,

ಮುಖ್ಯಾಂಶಗಳು

* ಚುನಾವಣೆಗೋಸ್ಕರ ಬಿಜೆಪಿಯೇ ಇದನ್ನು ನಡೆಸಿರುವ ಸಾಧ್ಯತೆ ಇದ್ದು, ಇದನ್ನು ಬಿಜೆಪಿ ನಾಯಕರೋರ್ವರು ನನಗೆ ಬ್ರಹ್ಮಾವರ ದಲ್ಲಿ ಭೇಟಿಯಾಗಿ ತಿಳಿಸಿದ್ದಾರೆ, ವಿಚಾರಣೆ ನಡೆದರೆ ಬಿಜೆಪಿ ನಾಯಕರೇ ಸಿಲುಕಿಕೊಳ್ಳುತ್ತಾರೆ ಎನ್ನುವ ಭಯ ಅವರನ್ನು ಕಾಡುತ್ತಿದೆ.

* ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು, ಜನ ಸಾಮಾನ್ಯರ ನೋವು ಸಂಕಟವನ್ನು ಅಧ್ಯಯನ ಮಾಡಿದ ನಂತರ ರಚಿಸಲಾಗಿದೆ. ಆದರೆ ಬಿಜೆಪಿಯಿಂದ ಚುನಾವಣೆಯನ್ನು ಗೆದ್ದ ಬಿಜೆಪಿ ಎಮ್ ಪಿ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಹಿರಂಗವಾಗಿ ಹೇಳುತ್ತಾರೆ.

* ದೇಶದಲ್ಲಿ 7 ಬಹುದೊಡ್ಡ ಧರ್ಮಗಳಿವೆ, ಆರ್ಯರು, ದ್ರಾವಿಡರು, ಮುಂಗೋಲಿಯನ್ನರು ಇಲ್ಲಿ ನೆಲೆಸಿದ್ದಾರೆ, ಆದರೆ 1925ರಲ್ಲಿ ಹುಟ್ಟಿದ ಆರೆಸ್ಸೆಸ್, 1951ರ ಜನಸಂಘ, 1980ರ ಜನ್ಮ ತಾಳಿದ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ನೋಡಿದರೆ, ಅದು ಒಂದು ಗುಂಪಿನ ಜನರ ಅಭಿವೃದ್ಧಿಗಾಗಿ ಇರುವಂತದ್ದು ಎನ್ನುವುದು ಎಂಥವನಿಗೂ ಅರ್ಥವಾಗುತ್ತದೆ.

ಪರೇಶ ಮೇಸ್ತ ಓರ್ವ ಹಿಂದೂ ಧರ್ಮೀಯನಾಗಿದ್ದು, ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ಸರಕಾರ ಯಾಕೆ ವಿಚಾರಣೆ ಮಾಡಿಲ್ಲ, ಚುನಾವಣೆಯ ಸಂದರ್ಭದಲ್ಲಿ ಮನುಷ್ಯತ್ವವನ್ನು ಮೀರಿ ಬಿಜೆಪಿಯವರು ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು. ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು, ಜನ ಇಷ್ಟು ವರ್ಷಗಳು ಕಳೆದರೂ ಪರೇಶ ಮೇಸ್ತನ ಸಾವಿನ ವಿಚಾರಣೆ ನಡೆದಿಲ್ಲ. ಚುನಾವಣೆಗೋಸ್ಕರ ಬಿಜೆಪಿಯೇ ಇದನ್ನು ನಡೆಸಿರುವ ಸಾಧ್ಯತೆ ಇದ್ದು, ಇದನ್ನು ಬಿಜೆಪಿ ನಾಯಕರೋರ್ವರು ನನಗೆ ಬ್ರಹ್ಮಾವರದಲ್ಲಿ ಭೇಟಿಯಾಗಿ ತಿಳಿಸಿದ್ದಾರೆ, ವಿಚಾರಣೆ ನಡೆದರೆ ಬಿಜೆಪಿ ನಾಯಕರೇ ಸಿಲುಕಿಕೊಳ್ಳುತ್ತಾರೆ ಎನ್ನುವ ಭಯ ಅವರನ್ನು ಕಾಡುತ್ತಿದೆ.

ಸಾಮಾನ್ಯರ ನೋವು ಸಂಕಟವನ್ನು ಅಧ್ಯಯನ ಮಾಡಿದ ನಂತರ ರಚಿಸಲಾಗಿದೆ, ಆದರೆ ಬಿಜೆಪಿಯಿಂದ ಚುನಾವಣೆಯನ್ನು ಗೆದ್ದ ಬಿಜೆಪಿ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಹಿರಂಗವಾಗಿ ಹೇಳುತ್ತಾರೆ, ಇವರು ಯಾರಿಗೆ ನ್ಯಾಯ ಕೊಡುತ್ತಾರೆ, ಬಿಜೆಪಿಗೆ ಜನರ ಮೇಲೆ ನಂಬಿಕೆ ಇಲ್ಲ, ಈ ವಿಷಯವನ್ನು ಕಾಂಗ್ರೆಸ್ ಅಥವಾ ಬಿಜೆಪಿಯ ಚುನಾವಣೆಯ ವಿಷಯವಾಗಿ ನೋಡಬಾರದು. ಇದು ರಾಷ್ಟ್ರದ ಉಳಿವಿನ ಪ್ರಶ್ನೆಯಾಗಿದೆ ಎಂದರು. ದೇಶದಲ್ಲಿ 7 ಬಹುದೊಡ್ಡ ಧರ್ಮಗಳಿವೆ, ಆರ್ಯರು, ದ್ರಾವಿಡರು, ಮುಂಗೋಲಿಯನ್ನರು ಇಲ್ಲಿ ನೆಲೆಸಿದ್ದಾರೆ, ಆದರೆ 1925ರಲ್ಲಿ ಹುಟ್ಟಿದ ಆರೆಸ್ಸೆಸ್, 1951ರ ಜನಸಂಘ, 1980ರ ಜನ್ಮ ತಾಳಿದ ಬಿಜೆಪಿ ಪ್ರಣಾಳಿಕೆಯನ್ನು ನೋಡಿದರೆ, ಅದು ಒಂದು ಗುಂಪಿನ ಜನರ ಅಭಿವೃದ್ಧಿಗಾಗಿ ಇರುವಂತದ್ದು ಎನ್ನುವುದು ಎಂಥವನಿಗೂ ಅರ್ಥವಾಗುತ್ತದೆ. ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತುಗಳು ಸಿಗಬೇಕು ಎನ್ನುವುದು ಗಾಂಧಿಜೀಯವರ ಗ್ರಾಮ ಸ್ವರಾಜ್‌ ಉದ್ದೇಶವಾಗಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರ ವಿಕೇಂದ್ರೀಕರಣದ ಮೂಲಕ ಮಹಿಳೆಯರಿಗೆ, ಹಿಂದುಳಿದವರಿಗೆ ಆದಿವಾಸಿಗಳಿಗೆ ಮೀಸಲಾತಿ ನೀಡಿ ಸಮಾಜದಲ್ಲಿ ಸಮಾನತೆ ಸಾಧಿಸುವ ಪ್ರಯತ್ನ ನಡೆಸಿದೆ ಎಂದು ವಿವರಿಸಿದರು.

ಮಾಜಿ ಶಾಸಕ ಮಂಕಾಳು ವೈದ್ಯ ಮಾತನಾಡಿ, ಬಿಜೆಪಿಗೆ ಯಾವುದೇ ಚುನಾವಣೆಯನ್ನು ಎದುರಿಸುವ ಧೈರ್ಯ ಇಲ್ಲವಾಗಿದೆ, ಚುನಾವಣಾ ಆಯೋಗವೇ ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಚುನಾವಣೆ ನಡೆಸಲು ಹೈಕೋರ್ಟ್ ಮೆಟ್ಟಿಲನ್ನು ಏರುವ ಪರಿಸ್ಥಿತಿ ಬಂದೊದಗಿರುವುದು ದುರ್ದೈವದ ಸಂಗತಿಯಾಗಿದೆ ಎಂದರು. ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಜಿಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್, ಮುಝಾಮಿಲ್ ಖಾಜಿಯಾ, ವಿಠಲ್ ನಾಯ್ಕ, ಭಟ್ಕಳ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನಯನಾ ನಾಯ್ಕ, ಟಿ.ಡಿ.ನಾಯ್ಕ, ನಾರಾಯಣ ಜೆ.ನಾಯ್ಕ ಉಪಸ್ಥಿತರಿದ್ದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...