ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ನೀಚ ರಾಜಕಾರಣ ಮಾಡಿದೆ : ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶಕುಮಾರ.

Source: SO News | By Laxmi Tanaya | Published on 2nd January 2021, 10:01 PM | Coastal News |

ಮಂಗಳೂರು : ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಸುಳ್ಳು ಬರವಸೆ ನೀಡಿದೆ. ಬೆದರಿಕೆ ಮತ್ತು ಹಣದ ಆಮಿಷವನ್ನು ಒಡ್ಡುವ ಮೂಲಕ ಗೆದ್ದಿದೆ.
ವಾಮ ಮಾರ್ಗವನ್ನು ಅನುಸರಿಸಿ ನೀಚ ರಾಜಕೀಯ ಮಾಡಿದೆ ಎಂದು ಮಂಗಳೂರಿನಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾವು ಬಿಜೆಪಿಯವರಿಂದ ಅನೇಕ ಕಿರುಕುಳವನ್ನು ಅನುಭವಿಸಿದ್ದೇವೆ. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬಿದರಿಕೆ ಮತ್ತು ಹಣದ ಆಮಿಷವನ್ನು ಒಡ್ಡುವ ಮೂಲಕ ವಾಮ ಮಾರ್ಗವನ್ನು ಅನುಸರಿಸಿದ್ದಾರೆ. ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದರು.

 ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನಡೆದ ಮಾದ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬಿದರಿಕೆ ಮತ್ತು ಹಣದ ಆಮಿಷವನ್ನು ಒಡ್ಡುವ ಮೂಲಕ ನೀಚ ರಾಜಕೀಯವನ್ನು ಮಾಡಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ನಮ್ಮ ಪಕ್ಷಕ್ಕೆ ಮತ ನೀಡಿದರೆ ಮಾತ್ರ  ಮನೆ ಮಾಡಿ ಕೊಡ್ತೇವೆ, ೯೪ಸಿ ಮತು ೯೪ಸಿಸಿ ಮಾಡಿ ಕೊಡ್ತೇವೆ, ಅಕ್ರಮ ಸಕ್ರಮ ಮಾಡಿಕೊಡ್ತೇವೆ, ನಮ್ಮ ಪಕ್ಷಕ್ಕೆ ಮತ ನೀಡದೆ ಇದ್ದರೆ ಇವೆಲ್ಲವನ್ನು ರದ್ದು ಮಾಡುತ್ತೇವೆ ಎಂದು ಬೆದರಿಕೆ ಮತ್ತು ಸುಳ್ಳು ಬರವಸೆಯನ್ನು ನೀಡಿ ಬಿಜೆಪಿಯವರು  ಚುನಾವಣೆಯನ್ನು ಗೆದ್ದಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ರಮನಾಥ್ ರೈ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಎಐಸಿಸಿ ಸದಸ್ಯೆ ಕವಿತಾ ಸನಿಲ್, ಪನಪಾ ಸದಸ್ಯ ಶಶಿಧರ್ ಹೆಗ್ಡೆ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸೇರಿದಂತೆ ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

Read These Next

ಧರ್ಮ, ಜಾತಿ, ಜನಾಂಗದ ತಾರತಮ್ಯಗಳಿಂದ ಹೊರಬಂದು ದೇಶ ಹಿತ ಕಾಪಾಡುವಂತೆ ಸಹಾಯಕ ಆಯುಕ್ತ ಭರತ್ ಕರೆ

ಭಟ್ಕಳ: ಭಾರತ ದೇಶ ಸಾರ್ವಭೌಮ ಗಣತಂತ್ರ ರಾಷ್ಟçವಾಗಿದ್ದು ಇಲ್ಲಿ ಎಲ್ಲರೂ ಸಮಾನರು. ಧರ್ಮ, ಜಾತಿ, ಜನಾಂಗದ ತಾರತಮ್ಯಗಳಿಂದ ಹೊರಬಂದು ...